For Quick Alerts
  ALLOW NOTIFICATIONS  
  For Daily Alerts

  ಲೂಸ್ ಮಾದನ ಜೊತೆ ಇಂದು ನಿಖಿತಾ ಮದುವೆ

  By ಉದಯರವಿ
  |

  ದಕ್ಷಿಣ ಚಿತ್ರರಂಗದ ಖ್ಯಾತ ತಾರೆ ನಿಖಿತಾ ತುಕ್ರಲ್ ಅವರ ವಿವಾಹಕ್ಕೆ ಮದುವೆ ಮಂಟಪ ಸಿದ್ಧವಾಗಿದೆ. ಅವರು ಕೈಹಿಡಿಯುತ್ತಿರುವ ಗಂಡು ಬೇರಾರು ಅಲ್ಲ ಯೋಗೇಶ್ ಅಲಿಯಾಸ್ ಲೂಸ್ ಮಾದ. ಇದೇನಪ್ಪಾ ಇದು ನಮ್ಮ ಲೂಸ್ ಮಾದ ಒಂದೇ ಒಂದು ಸಣ್ಣ ಸುಳಿವು ಕೊಡದೆ ಮದುವೆಯಾಗುತ್ತಿದ್ದಾನೆ ಎಂದುಕೊಳ್ಳುತ್ತಿದ್ದೀರಾ.

  ಆದರೆ ಇದು ನಿಜವಾದ ಮದುವೆ ಅಲ್ಲ. ಈಟಿವಿ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ನಡೆಯಲಿರುವ ಮದುವೆ. ಮನೆಯ ಸದಸ್ಯರಿಗೆ 'ಬಿಗ್ ಬಾಸ್' ಮದುವೆ ಟಾಸ್ಕ್ ನೀಡಿರುವುದು ಗೊತ್ತೇ ಇದೆ.

  ಅರುಣ್ ಸಾಗರ್, ಚಂದ್ರಿಕಾ ದಂಪತಿಗಳಾಗಿ, ಅನುಶ್ರೀ ಹಾಗೂ ನಿಖಿತಾ ಕನ್ಯಾಮಣಿಗಳಾಗಿ, ವಿಜಯ್ ರಾಘವೇಂದ್ರ ಸೋದರಮಾವನಾಗಿ, ರಿಷಿಕಾ ಸಿಂಗ್ ಅಕ್ಕನಾಗಿ, ರೋಹನ್ ಗೌಡ ಅಣ್ಣನಾಗಿ, ನರೇಂದ್ರ ಬಾಬು ಶರ್ಮಾ ಅವರು ಗುರುಗಳಾಗಿ ಅಭಿನಯಿಸುತ್ತಿದ್ದಾರೆ.

  ಆದರೆ ವರಮಹಾಶಯ ಯಾರು ಎಂಬುದು ಇಷ್ಟು ದಿನ ಸಸ್ಪೆನ್ಸ್ ಆಗಿ ಇಡಲಾಗಿತ್ತು. ಈಗ ಅದು ಬಹಿರಂಗವಾಗಿದೆ. ಆತ ಬೇರಾರು ಅಲ್ಲ ನಮ್ಮ ಲೂಸ್ ಮಾದ. ಇಂದು ಅವರು ವಧು ನಿಖಿತಾರನ್ನು ನೋಡಲು ಬರುತ್ತಿದ್ದಾರೆ. ಅರುಣ್ ಹಾಗೂ ಚಂದ್ರಿಕಾ ಅವರು ತಮ್ಮ ಪುತ್ರನಾದ ಯೋಗೇಶ್ ಗೆ ಸೂಕ್ತ ಜೋಡಿಯನ್ನು ಹುಡುಕಿದ್ದಾರೆ.

  'ಬಿಗ್ ಬಾಸ್' ಮನೆಯಲ್ಲಿ ಗುರುವಾರ ರಾತ್ರಿ (ಮೇ.16) 8ಕ್ಕೆ ಮದುವೆ ಸಂಭ್ರಮ. ವರೋಪಚಾರ, ಅಕ್ಷತಾರೋಪಣೆ, ಕನ್ಯಾದಾನ ಎಲ್ಲ ಸಂಪ್ರದಾಯಗಳನ್ನು ಕಣ್ತುಂಬಿಕೊಳ್ಳಬಹುದು. ಲೂಸ್ ಮಾದ ಮಾವನ ಮನೆಯಲ್ಲೇ ಉಳಿದುಕೊಳ್ಳುತ್ತಾರೋ ಅಥವಾ ಮನೆಯಿಂದ ಹೊರಹೋಗುತ್ತಾರೋ.

  English summary
  The stage is set for Kannada actress Nikita Thukral marriage in Etv Kannada reality show Bigg Boss. But it is not a real marriage, it's a task given by Bigg boss for inmates. She tied the knot with Loose Mada alias Yogesh. Watch the show on 16th May at 8pm.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X