»   » ಆಡಿದ ಮಾತು ಉಳಿಸಿಕೊಂಡ ಅಪ್ಪು: ಪ್ರಥಮ್ ಗೆ ಸಿಕ್ತು ಗಿಫ್ಟು.!

ಆಡಿದ ಮಾತು ಉಳಿಸಿಕೊಂಡ ಅಪ್ಪು: ಪ್ರಥಮ್ ಗೆ ಸಿಕ್ತು ಗಿಫ್ಟು.!

Posted By:
Subscribe to Filmibeat Kannada
ಪ್ರಥಮ್ ವಿಚಾರವಾಗಿ ಆಡಿದ ಮಾತು ಉಳಿಸಿಕೊಂಡ ಅಪ್ಪು | FIlmibeat Kannada

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸಿಕೊಡುತ್ತಿರುವ 'ಫ್ಯಾಮಿಲಿ ಪವರ್' ಕಾರ್ಯಕ್ರಮದಲ್ಲಿ 'ಒಳ್ಳೆ ಹುಡುಗ', 'ಬಿಗ್ ಬಾಸ್ ಕನ್ನಡ-5' ವಿನ್ನರ್ ಪ್ರಥಮ್ ಮತ್ತು ಕುಟುಂಬ ಭಾಗವಹಿಸಿದರು.

ಪ್ರಥಮ್ ಅಂದ್ರೆ ಕೇಳ್ಬೇಕಾ... ಶೋನಲ್ಲಿ ತಮ್ಮ ಪಂಚಿಂಗ್ ಡೈಲಾಗ್ ಗಳ ಮೂಲಕ ಗಮನ ಸೆಳೆದ ಪ್ರಥಮ್, ಕೊನೆಗೆ ಪುನೀತ್ ರಾಜ್ ಕುಮಾರ್ ಧರಿಸಿದ್ದ ಬಿಳಿ ಬಣ್ಣದ ಕೋಟ್ ಮೇಲೆ ಕಣ್ಹಾಕಿದರು.

''ಕಲರ್ಸ್ ಕನ್ನಡ ವಾಹಿನಿ ನನ್ನ ಅತ್ತೆ ಮನೆ ಇದ್ಹಂಗೆ. ನನ್ನ ಕಂಡ್ರೆ ಬಹಳ ಲವ್ವು. 'ಬಿಗ್ ಬಾಸ್' ಮುಗಿದ್ಮೇಲೆ ಸುದೀಪ್ ಕೊಟ್ಟ ಎರಡು ಸಾವಿರ ರೂಪಾಯಿ ಹಾಗೂ ಐನೂರು ರೂಪಾಯಿ ನೋಟ್ ನ ಭದ್ರವಾಗಿ ಇಟ್ಟುಕೊಂಡಿದ್ದೇನೆ. ಹಾಗೆ ಇವತ್ತು ಇಲ್ಲಿ ನಿಮ್ಮ ಜೊತೆ ಸ್ಟೇಜ್ ಗೆ ಬಂದಿದ್ದು ಬಹಳ ಖುಷಿ ಆಗಿದೆ. ಶೋ ಮುಗಿದ್ಮೇಲೆ ಈ ಕೋಟ್ ನನಗೆ ಕೊಡಿ, ಮದುವೆಗೋ, ಹನಿಮೂನ್ ಗೋ ಹಾಕಿಕೊಳ್ತೀನಿ'' ಅಂತ ಪುನೀತ್ ರಾಜ್ ಕುಮಾರ್ ಗೆ ಪ್ರಥಮ್ ಕೇಳಿದರು.

Olle Huduga Pratham desire fulfilled: Puneeth Rajkumar gifts him blazer

'ಒಳ್ಳೆ ಹುಡುಗ' ಪ್ರಥಮ್ ಅಸಲಿ ಹೆಸರೇನು ಗೊತ್ತಾ.?

ಅದಕ್ಕೆ ತಕ್ಷಣ 'ಓಕೆ' ಎಂದುಬಿಟ್ಟರು ಪುನೀತ್ ರಾಜ್ ಕುಮಾರ್. ಕಾರ್ಯಕ್ರಮದ ಶೂಟಿಂಗ್ ಮುಗಿದ್ಮೇಲೆ, ಕೊಟ್ಟ ಮಾತಿನಂತೆ ಪ್ರಥಮ್ ಗೆ ಪುನೀತ್ ರಾಜ್ ಕುಮಾರ್ ಕೋಟ್ ಕೊಟ್ಟಿದ್ದಾರೆ.

ಪುನೀತ್ ಧರಿಸಿದ ಕೋಟ್ ತಮಗೆ ಸಿಕ್ಕಿದ್ದಕ್ಕೆ ಪ್ರಥಮ್ ಕೂಡ ಫುಲ್ ಖುಷಿಯಾಗಿದ್ದಾರೆ.

English summary
Olle Huduga Pratham's desire is fulfilled. Power Star Puneeth Rajkumar gifts him a blazer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada