»   » ಶನಿವಾರ ರಾತ್ರಿ ನಿಮ್ಮ ಮನೆಗೆ ಬರ್ತಿದೆ 'ಒಂದು ಮೊಟ್ಟೆಯ ಕಥೆ'

ಶನಿವಾರ ರಾತ್ರಿ ನಿಮ್ಮ ಮನೆಗೆ ಬರ್ತಿದೆ 'ಒಂದು ಮೊಟ್ಟೆಯ ಕಥೆ'

Posted By:
Subscribe to Filmibeat Kannada

ಚಿತ್ರಮಂದಿರದಲ್ಲಿ 'ಒಂದು ಮೊಟ್ಟೆಯ ಕಥೆ' ನೋಡಲು ಮಿಸ್ ಮಾಡಿಕೊಂಡಿದ್ದವರಿಗೆ ಮತ್ತೊಂದು ಅವಕಾಶ. ಆದ್ರೆ, ಈ ಬಾರಿ ನೀವು ಥಿಯೇಟರ್ ಗೆ ಹೋಗುವ ಅವಶ್ಯಕತೆ ಇಲ್ಲ, 'ಒಂದು ಮೊಟ್ಟೆಯ ಕಥೆ'ಯೇ ನಿಮ್ಮ ಮನೆಗೆ ಬರ್ತಿದೆ.

ಹೌದು, ವರ್ಷದ ಸೂಪರ್ ಹಿಟ್ ಸಿನಿಮಾ 'ಒಂದು ಮೊಟ್ಟೆಯ ಕಥೆ' ಇದೇ ಶನಿವಾರ (ಅಕ್ಟೋಬರ್ 7) ರಾತ್ರಿ 8 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.

ಒಂದು ಮೊಟ್ಟೆಯ ಕಥೆ : ಡಬ್ಬಲ್ ಮೀನಿಂಗ್ ಇಲ್ಲದ ಕಾಶೀನಾಥ್ ಚಿತ್ರ

ondu motteya kathe premier on October 7th

ಜುಲೈ ತಿಂಗಳಲ್ಲಿ ತೆರೆಕಂಡಿದ್ದ 'ಒಂದು ಮೊಟ್ಟೆಯ ಕಥೆ' ವಿಭಿನ್ನ ಕಥೆ ಮತ್ತು ಚಿತ್ರಕಥೆಯ ಮೂಲಕ ಜನಮನ್ನಣೆ ಗಳಿಸಿಕೊಂಡಿತ್ತು. ಈ ಚಿತ್ರದ ನಾಯಕನ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಅಷ್ಟೇ ಅಲ್ಲದೆ, ಕಡಿಮೆ ಬಜೆಟ್ ನಲ್ಲಿ ತಯಾರಾಗಿದ್ದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲು ಉತ್ತಮ ಗಳಿಕೆ ಕಂಡಿತ್ತು.

'ಮೊಟ್ಟೆ' ಖ್ಯಾತಿಯ ರಾಜ್ ಬಿ ಶೆಟ್ಟಿ ಎರಡನೇ ಸಿನಿಮಾ ಶುರುವಾಯ್ತು

ರಾಜ್ ಬಿ ಶೆಟ್ಟಿ ಈ ಚಿತ್ರವನ್ನ ನಿರ್ದೇಶನ ಮಾಡಿ, ಸ್ವತಃ ನಾಯಕನಾಗಿ ನಟಿಸಿದ್ದರು. ಕೂದಲಿಲ್ಲದ ವ್ಯಕ್ತಿ ಮದುವೆಯಾಗಲು ಹುಡುಗಿ ಹುಡುಕುವ ಹಾಸ್ಯಮಯವಾದ ಕಥೆಯನ್ನ ಈ ಚಿತ್ರ ಒಳಗೊಂಡಿತ್ತು. ಉಷಾ ಭಂಡಾರಿ, ಅಮೃತಾ ನಾಯಕ್, ಮತ್ತು ದೀಪಕ್ ರೈ ಸೇರಿದಂತೆ ಹಲವರು ಅಭಿನಯಿಸಿದ್ದರು. ಮಿಥುನ್ ಮುಕಂದನ್ ಅವರು ಸಂಗೀತ ಒದಗಿಸಿದ್ದರು.

English summary
Kannada film Ondu Motteya Kathe, will be premiered on October 7, at 8pm, on Colors Kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada