»   » 'ಬಿಗ್ ಬಾಸ್ ಫಿನಾಲೆ' ಬಗ್ಗೆ ಒನ್ ಇಂಡಿಯಾ 'POLL' ಹೇಳಿದ್ದು ನಿಜವಾಯ್ತು!

'ಬಿಗ್ ಬಾಸ್ ಫಿನಾಲೆ' ಬಗ್ಗೆ ಒನ್ ಇಂಡಿಯಾ 'POLL' ಹೇಳಿದ್ದು ನಿಜವಾಯ್ತು!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ 4' ಗ್ರ್ಯಾಂಡ್ ಫಿನಾಲೆ ಯಶಸ್ವಿಯಾಗಿ ಮುಗಿಯಿತು. ಒಳ್ಳೆ ಹುಡುಗ ಪ್ರಥಮ್ ಈ ಬಾರಿಯ 'ಬಿಗ್ ಬಾಸ್' ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ.

ಗ್ರ್ಯಾಂಡ್ ಫಿನಾಲೆಗೆ ಮುಂಚೆ 'ಬಿಗ್ ಬಾಸ್' ವಿನ್ನರ್ ಯಾರಾಗ್ತಾರೆ ಎಂಬ ಪ್ರಶ್ನೆ, ಇಡೀ ವೀಕ್ಷಕರನ್ನ ಕುತೂಹಲದ ಕಡಲಲ್ಲಿ ಮುಳುಗಿಸಿತ್ತು. ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಗೆಲ್ಲೋದು ಇವರೇ, ಅವರೇ ಎಂಬ ಚರ್ಚೆಗಳು ಜೋರಾಗಿತ್ತು.['ಒನ್‌ ಇಂಡಿಯಾ' FB Poll ಪ್ರಕಾರ 'ಬಿಗ್‌ ಬಾಸ್ ಕನ್ನಡ-4' ವಿನ್ನರ್ ಇವರೇ!]

ಹೀಗಿರುವಾಗ, ನಿಮ್ಮ 'ಒನ್ ಇಂಡಿಯಾ ಕನ್ನಡ/ಫಿಲ್ಮಿ ಬೀಟ್ ಕನ್ನಡ' 'ಬಿಗ್ ಬಾಸ್' ಫಿನಾಲೆಗೆ ಮುಂಚೆನೇ POLL ಕಂಡಕ್ಟ್ ಮಾಡುವ ಮೂಲಕ, ವಿಜಯಶಾಲಿ ಯಾರಾಗಬಹುದು ಎಂಬುದರ ಕುರಿತು ಸಮೀಕ್ಷೆ ನಡೆಸಿತ್ತು. ಅಂದು 'ಒನ್ ಇಂಡಿಯಾ ಕನ್ನಡ/ಫಿಲ್ಮಿ ಬೀಟ್ ಕನ್ನಡ'ದ ನಡೆಸಿದ ಸಮೀಕ್ಷೆ ಇಂದು ನಿಜವಾಗಿದೆ.

'ಬಿಗ್ ಬಾಸ್' ಫಿನಾಲೆಗೂ ಮುಂಚೆ POLL

'ಬಿಗ್ ಬಾಸ್ ಕನ್ನಡ 4' ಫಿನಾಲೆಗೂ ಮುಂಚೆ, 'ಒನ್ ಇಂಡಿಯಾ ಕನ್ನಡ/ಫಿಲ್ಮಿ ಬೀಟ್ ಕನ್ನಡ' POLL ಅಯೋಜನೆ ಮಾಡಿತ್ತು. ಫಿನಾಲೆ ತಲುಪಿದ ಐವರಲ್ಲಿ ಯಾರು 'ಬಿಗ್ ಬಾಸ್' ವಿನ್ನರ್ ಆಗುತ್ತಾರೆ ಎಂಬುದರ ಕುರಿತು ಚುನಾವಣೆ ನಡೆಸಲಾಗಿತ್ತು.['ಬಿಗ್ ಬಾಸ್ ಕನ್ನಡ-4' ಗೆದ್ದ ಪ್ರಥಮ್: ಆರ್ಡರ್ ಈಸ್ ಪಾಸ್ಡ್.!]

ವಿನ್ನರ್ ಯಾರು ಎಂದು ನಿರ್ಧರಿಸಿದ್ದ ಓದುಗರು!

'ಬಿಗ್ ಬಾಸ್' ಫಿನಾಲೆಗೂ ಮುಂಚೆ ನಡೆದ ಸಮೀಕ್ಷೆಯಲ್ಲಿ ವಿನ್ನರ್ ಯಾರಾಗಬಹುದು ಎಂದು ಓದುಗರು ಊಹಿಸಿದ್ದರು. ಅವರು ಅಂದುಕೊಂಡಂತೆ ಈಗ 'ಬಿಗ್ ಬಾಸ್'ನಲ್ಲೂ ಫಲಿತಾಂಶ ಹೊರಬಿದ್ದಿದೆ.['ಬಿಗ್ ಬಾಸ್'ನಲ್ಲಿ 'ಪ್ರಥಮ್' ಗೆದ್ದ 50 ಲಕ್ಷ ರೈತರಿಗೆ, ಯೋಧರಿಗೆ ಮೀಸಲು!]

ಸೋಶಿಯಲ್ ಮೀಡಿಯಾದಲ್ಲಿ

'ಒನ್ ಇಂಡಿಯಾ ಕನ್ನಡ/ಫಿಲ್ಮಿ ಬೀಟ್ ಕನ್ನಡ'ದ ಫೇಸ್ ಬುಕ್, ಟ್ವಿಟ್ಟರ್ ಹಾಗೂ ನೇರವಾಗಿ ವೆಬ್ ಸೈಟ್ ನಲ್ಲೂ ಸಮೀಕ್ಷೆ ಮಾಡಲಾಗಿತ್ತು. ಎಲ್ಲದರಲ್ಲೂ ಒಳ್ಳೆ ಹುಡುಗ ಪ್ರಥಮ್ ಹೆಚ್ಚು ಮತಗಳನ್ನ ಪಡೆದಿದ್ದರು.

ಪ್ರಥಮ್ ವರ್ಸಸ್ ಕೀರ್ತಿ

ಟ್ವಿಟ್ಟರ್, ಫೇಸ್ ಬುಕ್, ಹಾಗೂ ವೆಬ್ ಸೈಟ್ ಎಲ್ಲದರಲ್ಲೂ ಕೀರ್ತಿ ಮತ್ತು ಪ್ರಥಮ್ ಮಧ್ಯೆ ನೇರವಾಗಿ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಪ್ರಥಮ್ ಗೆ ಹೆಚ್ಚು ಮತಗಳು ಸಿಕ್ಕಿದ್ದವು. ಅದೇ ರೀತಿ ಬಿಗ್ ಬಾಸ್ ಫಿನಾಲೆಯಲ್ಲೂ ಇವರಿಬ್ಬರ ಮಧ್ಯೆ ಪೈಪೋಟಿ ಏರ್ಪಟ್ಟಿತ್ತು.[ಪ್ರಥಮ್ ಹಾಗೂ ಕೀರ್ತಿ ನಡುವೆ ಇದ್ದದ್ದು ಸ್ಪರ್ಧೆಯೋ.? ಜಿದ್ದೋ.? ]

'ಬಿಗ್ ಬಾಸ್'ನಲ್ಲೂ ಗೆದ್ದಿದ್ದು ಪ್ರಥಮ್

ನಾವು ನಡೆಸಿದ ಪೂರ್ವ ಸಮೀಕ್ಷೆಯಲ್ಲಿ ಪ್ರಥಮ್ ವಿಜಯಶಾಲಿ ಆಗಿದ್ದರು. ಅದೇ ರೀತಿ, 'ಬಿಗ್ ಬಾಸ್' ಫಿನಾಲೆಯಲ್ಲೂ ಒಳ್ಳೆ ಹುಡುಗ ಪ್ರಥಮ್ ಟ್ರೋಫಿಗೆ ಮುತ್ತಿಟ್ಟಿದ್ದಾರೆ.

English summary
Oneindia/Filmibeat Conducted Poll Prediction On Verouis Social Networking platform by asking Public Who will win this Season Biggboss Kannada? Our Resulte is same As BBK4.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada