For Quick Alerts
  ALLOW NOTIFICATIONS  
  For Daily Alerts

  ಒನ್ ಇಂಡಿಯಾ ಕನ್ನಡಿಗರು ಬಿಗ್ 'ಬಕ್ವಾಸ್' ಅಂದ್ರು ಸ್ವಾಮಿ

  By Mahesh
  |

  ಈಟಿವಿ ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋ ಗ್ರಾಂಡ್ ಫಿನಾಲೆಯಲ್ಲಿ ಒನ್ಇಂಡಿಯಾ-ಕನ್ನಡಿಗರ ಅನಿಸಿಕೆಗೆ ವ್ಯತಿರಿಕ್ತವಾಗಿ ವಿಜಯ ರಾಘವೇಂದ್ರ ಅವರಿಗೆ 'ವಿಜಯಲಕ್ಷ್ಮಿ' ಒಲಿದಿದ್ದಾಳೆ. ಜನಪ್ರಿಯತೆಗೂ ಅರ್ಹತೆಗೂ ಇರುವ ಸಣ್ಣ ವ್ಯತ್ಯಾಸದಲ್ಲಿ ಅರುಣ್ ಸಾಗರ್ ಅವರು ಪ್ರಶಸ್ತಿ ಮೊತ್ತವನ್ನಷ್ಟೇ ಕಳೆದುಕೊಂಡಿದ್ದಾರೆ. ಅಭಿಮಾನಿಗಳ ನೆಚ್ಚಿನ ವಿಜೇತರಾಗಿ ಈಗಲೂ ಎಲ್ಲಾ ಕಡೆ ಅರುಣ್ ಅವರ ಹೆಸರೇ ಕೇಳಿ ಬರುತ್ತಿದೆ.

  ಅರುಣ್ ಪರ ನಾನು ವಕಾಲತ್ತು ವಹಿಸಿಲ್ಲ. ಇಲ್ಲಿ ಸ್ಪರ್ಧಿಗಳಾಗಿ ಬಂದವರಲ್ಲಿ ಕೆಲವು ನನಗೆ ಆಪ್ತರಾಗಿದ್ದಾರೆ ನಿಜ ಹಾಗೆಂದು ನಾನೆಂದು ಸ್ಪರ್ಧೆಯ ಆಯೋಜನೆಯಲ್ಲಿ ಕೈಯಾಡಿಸಿಲ್ಲ. ಕಾರ್ಯಕ್ರಮದ ನಿರೂಪಣೆ ಜವಾಬ್ದಾರಿಯಷ್ಟೇ ನನ್ನ್ನ ಮೇಲಿದೆ ಎಂದು ಕಿಚ್ಚ ಸುದೀಪ್ ಅವರು ಟ್ವೀಟ್, ವಾಯ್ಸ್ ಮೆಸೇಜ್ ಕಡೆಗೆ ಒಂದೆರಡು ಬಾರಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಲೈವ್ ಆಗಿ ಹೇಳಿದರೂ ಜನಕ್ಕೆ ನಂಬಿಕೆ ಹುಟ್ಟುತ್ತಿಲ್ಲ.

  ಏನೋ ವ್ಯತ್ಯಾಸವಾಗಿದೆ. ಜನರ ವೋಟಿನ ಆಧಾರದ ಮೇಲೆ ಎಲ್ಲವೂ ನಿರ್ಧಾರವಾಗುತ್ತದೆ. ಜನ ಬಯಸಿದರೆ ಮನೆಯಲ್ಲಿ ಉಳಿಯುತ್ತಾರೆ ಇಲ್ಲದಿದ್ದರೆ ಮನೆಯಿಂದ ವೋಟ್ ಔಟ್ ಆಗುತ್ತಾರೆ. ಫೈನಲ್ ಸ್ಪರ್ಧೆಗಳ ಆಯ್ಕೆಯಲ್ಲೂ ಅದೇ ವ್ಯವಸ್ಥೆ ಇತ್ತು ಎಂದು ಸುದೀಪ್ ಹೇಳಿದ್ದಾರೆ. ಕೋಟಿಗಟ್ಟಲೇ ಎಸ್ ಎಂಎಸ್ ಬಂದಿದೆಯಂತೆ.

  <blockquote class="twitter-tweet blockquote"><p>can bbkannada reveal voting for arun sagar and vijay, its being shame to be dominated by local polticians and celebrity family ...,</p>— praveen v gadag (@pvgadag) <a href="https://twitter.com/pvgadag/statuses/351664586610589699">July 1, 2013</a></blockquote> <script async src="//platform.twitter.com/widgets.js" charset="utf-8"></script>

  ಆದರೆ, ಮೊದಲಿನಿಂದಲೂ ಯಾರಿಗೆ ಎಷ್ಟು ಎಸ್ಎಂಎಸ್ ಬಂದಿದೆ ಎಂಬುದನ್ನು ತೋರಿಸಿಲ್ಲ ಏಕೆ? ಬೇಕಾದಾಗ ಮಾತ್ರ ರಿಸರ್ವ್ ನಾಮೇನೇಷನ್ ತಂತ್ರ ಬಳಸಿದ್ದು ಏಕೆ? ವೀಕ್ಷಕರ ಆಯ್ಕೆ ಎಸ್ ಎಂಎಸ್ ಗೆ ಸೀಮಿತವಾದರೆ ಅದರ ಫಲಿತಾಂಶ ಬಹಿರಂಗ ಪಡಿಸಿಲ್ಲ ಏಕೆ? ಅರುಣ್, ವಿಜಯ್ ಆಯ್ಕೆಯಲ್ಲಿ ಅರ್ಹತೆ, ಅವಶ್ಯಕತೆ, ಜನಪ್ರಿಯತೆ ಇದರಲ್ಲಿ ಯಾವುದು ಇಲ್ಲಿ ಮಾನದಂಡವಾಗಿದೆ? ಉತ್ತರಿಸುವವರು ಯಾರು? ಉತ್ತರ ಸಿಗುವ ತನಕ ಓದುಗರ ಪ್ರತಿಕ್ರಿಯೆ ಇಲ್ಲಿದೆ ಓದಿರಿ...

  ಪ್ರತಿಭೆ ಮಣೆ ಇಲ್ಲ:ಗಣೇಶ್

  ಪ್ರತಿಭೆ ಮಣೆ ಇಲ್ಲ:ಗಣೇಶ್

  ಹೌದು ಸ್ವಾಮಿ, ಪ್ರತಿಭೆ ಇರುವವರಿಗೆ ಎಲ್ಲಿ ತಾನೇ ಬೆಲೆ ಇದೆ. ಎಲ್ಲಾ ಕಡೆ ರಿಸರ್ವೇಷನ್, ಅರುಣ್ ಸಾಗರ ನೀವೇ ಹೇಳಿದಂತೆ ಈ ಸೋಲು ಮುಂದಿನ ಗೆಲುವಿಗೆ ನಾಂದಿ ಹಾಡಲಿ. ಇದಕ್ಕಿಂತ ಒಳ್ಳೆ ಗೆಲುವು ನಿಮಗೆ ಮುಂದೆ ಸಿಗಲಿ ವೀ ಲವ್ ಯೂ

  ವಿಜಯ್ ಗೆ ಹಕ್ಕಿಲ್ಲ : ಸವಿತಾ ದೊಡ್ಡ ನರಸಯ್ಯ

  ವಿಜಯ್ ಗೆ ಹಕ್ಕಿಲ್ಲ : ಸವಿತಾ ದೊಡ್ಡ ನರಸಯ್ಯ

  ವಿಜಯ್ ರಾಘವೇಂದ್ರ ನೀವು ಸಭ್ಯ ನಿಜ. ಆದರೆ, ನಿಮಗೆ ಪ್ರಶಸ್ತಿ ತಾನಾಗೇ ಒಲಿಯಲಿಲ್ಲ. ಅದು ಅರುಣ್ ಕೊಟ್ಟ ಭಿಕ್ಷೆ. ಕರ್ನಾಟಕ ಜನರ ಮನಸ್ಸು ಒಡೆದು ಹೋಗಿದೆ.

  ನ್ಯಾಯಕ್ಕೆ ಬೆಲೆ ಇಲ್ಲ. ಇದು ಅನ್ಯಾಯ, ರಾಜಕೀಯ ಎಲ್ಲಾ ರಂಗದಲ್ಲೂ ಇದೆ ಎನ್ನುವುದಕ್ಕೆ ಇದು ದೊಡ್ಡ ಉದಾಹರಣೆಯಾಗಲಿದೆ. ಯಾರಾದರೂ ರಿಯಾಲಿಟಿ ಶೋ ನ ರಿಯಾಲಿಟಿ ಚೆಕ್ ಮಾಡಿ ಆರ್ ಟಿಐ ಬಳಸಿ ಸತ್ಯ ಬಹಿರಂಗಗೊಳಿಸಿ

  ಇದು ಫಿಕ್ಸಿಂಗ್: ಡಾ. ರಾಜು

  ಇದು ಫಿಕ್ಸಿಂಗ್: ಡಾ. ರಾಜು

  it is fixed... Vijay was winner on the first day itself and i beleive nikitha moving to thrid position is what changed at the last moment. in the beginning,

  i believe Nikitha was supposed to be in 2nd position but arun changed that position with his talent. According to me... Arun, Narendra babu, Vijay and Anusri should be the top four.

  ಬ್ರಹ್ಮಾಂಡಗೆ ಗೊತ್ತಿತ್ತು: ರವೀಶ

  ಬ್ರಹ್ಮಾಂಡಗೆ ಗೊತ್ತಿತ್ತು: ರವೀಶ

  ಬಿಗ್ ಬಾಸ್ ವಿನ್ನರ್ ಯಾರು ಎಂಬುದು ಮೊದಲೇ ಫಿಕ್ಸ್ ಆಗಿತ್ತು ಎಂಬುದರಲ್ಲಿ ಸಂಶಯವೇ ಬೇಡ. ಬ್ರಹ್ಮಾಂಡ ಗುರೂಜಿ ಹಾಗೂ ಚಂದ್ರಿಕಾ ಅವರು ಕೆಲವೊಮ್ಮೆ ಈ ಬಗ್ಗೆ ಸುಳಿವು ನೀಡಿದ್ದರು. ವಿಜಯ್ ಉಳಿಸಿಕೊಂಡಿದ್ದರಲ್ಲಿ ಅವರ ಜಾಣತನದ ಬಗ್ಗೆ ಹೊಗಳಲಾಗಿತ್ತು.

  ಆದರೆ, ಪಾರ್ವತಮ್ಮ ರಾಜ್ ಕುಮಾರ್ ಅವರ ತಮ್ಮ ಚಿನ್ನೇಗೌಡರ ಮಗ ವಿಜಯ್ ಅವರು ಬೇರೆಯವರ ಕೆಲಸಕ್ಕೆ ಕ್ರೆಡಿಟ್ ತೆಗೆದುಕೊಳ್ಳುವಂಥ ಕೆಲ್ಸಕ್ಕೆ ಇಳಿಯಬಾರದಿತ್ತು ಛೇ!

  ಅರುಣ್ ಸೋತಿದ್ದು ಏಕೆ?

  ಅರುಣ್ ಸೋತಿದ್ದು ಏಕೆ?

  ಸಿದ್: ಅರುಣ್ ಸಾಗರ್ ಅವರು ವೋಟ್ಸ್ ಕಳೆದುಕೊಂಡಿದ್ದು ಚಂದ್ರಿಕಾ ಅವರ ಜೊತೆಗಿನ ಸರಸ ಸಲ್ಲಾಪದಿಂದ ಎಂಬುದನ್ನು ಯಾಕೆ ಯಾರೂ ಗಮನಿಸಿಲ್ಲ. ಇಬ್ಬರು ಸ್ವೀಟ್ ಸಿಕ್ಸ್ ಟೀನ್ ಥರಾ ಸರಸವಾಡಿದರೆ ಇನ್ನೇನಾಗುತ್ತೆ. ಜನರು ಕಲೆಯನ್ನು ಮಾತ್ರ ಅಲ್ಲ, ನಡವಳಿಕೆಯನ್ನು ಕೂಡಾ ನೋಡ್ತಾರೆ. ನ್ಯಾಯ ಯಾವತ್ತೂ ಸಜ್ಜನಿಕೆ ಪರ

  ಇದು ಅನ್ಯಾಯ

  ಇದು ಅನ್ಯಾಯ

  ವಿರಾಟ್: ಇದು ಅನ್ಯಾಯ, ಬಕೆಟ್ ರಾಘು ಗೆ ಬಹುಮಾನ, ಛೇ ಛೇ ಟ್ಯಾಲೆಂಟ್ ಗೆ ಎಲ್ಲಿ ಬೆಲೆ ಇದೆ. ಇದು ಬಿಗ್ ಬಾಸ್ ಅಲ್ಲ ಬಕ್ವಾಸ್

  ಎಲ್ಲವೂ ಗೊಂದಲಮಯ

  ಎಲ್ಲವೂ ಗೊಂದಲಮಯ

  ಶ್ರೀನಿವಾಸ್ ಜಿ: ಬಿಗ್ ಬಾಸ್, ನೀವು ಫಿಕ್ಸಿಂಗ್ ರೀತಿಯಲ್ಲಿ ಕಾರ್ಯಕ್ರಮವನ್ನ ನೆಡೆಸುತ್ತಿದಿರಿ. ಎಲ್ಲವೂ ಗೊಂದಲಮಯ. ಯಾವ ಅಭ್ಯರ್ಥಿಗೂ ಸಿಗದ ಈ ಟ್ವಿಸ್ಟ್ ಬರೀ ಚಂದ್ರಿಕಗೆ ಮಾತ್ರ ಹೇಗೆ ಸಿಕ್ಕಿತ್ತು.

  ಇನ್ನು ಚಂದ್ರಿಕಾನಿಂದ ಕೊಡಿಸಿದ೦ತಹ ಪವರ್ ನಿಂದ ಅರುಣ್ ಸಾಗರ್ ಗೆ ಫೈನಲ್ ಎಂಟ್ರಿ ಕೊಡಿಸಿದ್ದು ಬೇಕಿರಲಿಲ್ಲ. ಹಾಗೆ ಫೈನಲ್ ಗೆ ಅರುಣ್ ತಲುಪಬೇಕಿತ್ತು.

  ಫೈನಲ್ ಗೆ ಸುಲಭವಾಗಿ ಎಂಟ್ರಿ ಕೊಟ್ಟ ಅರುಣ್ ಗೆದ್ದಿದ್ದರೆ ಅಗಲೂ ಫಿಕ್ಸಿಂಗ್ ಎನ್ನಬಹುದಿತ್ತು.

  ವಿಜಯ್ ಮೊದಲಿನಂತೆ ಕೊನೆ ತನಕ ಇದ್ದರೂ ಅವರಿಗೆ ಎಲ್ಲರೂ ವೋಟ್ ಮಾಡಿದರು ಎಂಬುದು ನಂಬಬಹುದೇ? ಅರುಣ್ ಪ್ರತಿಭೆ ವ್ಯರ್ಥವಾಗಿದ್ದು ನಿಜ. ಇಲ್ಲಿ ಎಲ್ಲವೂ ಫಿಕ್ಸಿಂಗ್

  ಮಹೇಶ್ ಚಂದ್ರ

  ಮಹೇಶ್ ಚಂದ್ರ

  No sensible person would hav voted 4 vijay, in fact he would hav lost the little fans dat he had, if his fans had watched the show, he could hv never won considering tough competition like guruji and arun sagar.

  there is no chance at all!, karnataka ppl are not stupid , v hav common sense atleast!whom r u trying 2 fool, ppl who think the decision was correct, either you are the biggest fools or the biggest cheaters on this planet!

  ಸುದೀಪ್ ಗೆ ಏಕೆ ಬೈತೀರಾ?

  ಸುದೀಪ್ ಗೆ ಏಕೆ ಬೈತೀರಾ?

  ಮಹೇಶ್ ಕೆ: dumb guys..dont blame SUDEEP for everything...he is just a host!!!if he wants he could have won his best friend arun..still the result was as per votes...

  barking dogs wont vote...and now you bark till death saying its arun or some else real winner.,,..keep things in your heart and accept the result!!!!truly all 4 deserved the title in their own best things...least accept this

  ಅರುಣ್ ಸೋತಿದ್ದು ದುರಂತ.

  ಅರುಣ್ ಸೋತಿದ್ದು ದುರಂತ.

  ಶ್ರೀವಿದ್ಯಾ ಸಿಬಿ: ಅರುಣ್ ಸಾಗರ್ ಸೋತಿದ್ದು ನಿಜಕ್ಕೂ ದುರಂತ. ಬಿಗ್ ಬಾಸ್ ನಲ್ಲಿ ಪ್ರೇಕ್ಷಕರ ನಂಬಿಕೆ ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಅರುಣ್ ಗೆ ಪ್ರತಿಭಾವಂತ/ ಮೊದಲ ರನ್ನರ್ ಅಪ್ ಪ್ರಶಸ್ತಿ ಕೊಡಬೇಕಿತ್ತು. ಕಷ್ಟಪಟ್ಟು ಮೇಲೆ ಬಂದವರಿಗೆ ಬೆಲೆ ಇಲ್ಲ.

  ಪ್ರಶಸ್ತಿ ದುಡ್ಡು ಬೇಕಿತ್ತಾ?

  ಪ್ರಶಸ್ತಿ ದುಡ್ಡು ಬೇಕಿತ್ತಾ?

  ರಚಿತ: ವಿಜಯ್ ಗೆದ್ದಿದ್ದು ಫಿಕ್ಸಿಂಗೋ ಇಲ್ಲವೋ ನನಗೆ ಬೇಕಿಲ್ಲ. ಆದರೆ, ಪ್ರಶಸ್ತಿ ಮೊತ್ತ ವಿಜಯ್ ಗೆ ಅಗತ್ಯವಿರಲಿಲ್ಲ. ರೇಸ್ ಗೆಲ್ಲುವುದು ಮುಖ್ಯವಲ್ಲ. ಎದುರಾಳಿಗಳನ್ನು ಗೆಲ್ಲುವುದು ಮುಖ್ಯ. ಎಲ್ಲರ ಪ್ರೀತಿ ಗಳಿಸಿದರೆ ಮಾತ್ರ ಅದು ಸಾಧ್ಯ.

  ಪ್ರಶಸ್ತಿ ಮೊತ್ತವನ್ನು ಪ್ರಕೃತಿ ವಿಕೋಪ ನಿಧಿಗೆ, ಕಲಾವಿದರ ಸಂಕಷ್ಟಕ್ಕಾಗಿ ಅಥವಾ ಅರುಣ್ ಸಾಗರ್ ಅವರ ಕೈಗೆ ನೀಡಿದ್ದರೆ ವಿಜಯ್ 'ದೇವತಾ ಮನುಷ್ಯ' ಎನಿಸಿಬಿಡುತ್ತಿದ್ದರು. 'ನಾನು' ಎಂಬ ಭಾವ ಅವರನ್ನು ಕೊನೆ ತನಕ ಬಿಡಲೇ ಇಲ್ಲ. ಹಾಗಾಗಿ ಪ್ರೇಕ್ಷಕರ ಹೃದಯ ಸೇರಲು ಆಗಲಿಲ್ಲ.

  English summary
  Oneindia-Kannada readers responded harshly about ETV Kannada reality show Bigg Boss season 1 results. Public polls and comments reflected Arun Sagar as true winner but, Bigg Boss title went to Vijay Raghavendra

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X