»   » 'ಬಿಗ್ ಬಾಸ್ ಕನ್ನಡ 5'ಗೆ ಇನ್ನೂ ಸ್ಪರ್ಧಿಗಳ ಆಯ್ಕೆ ಆಗಿಲ್ವಂತೆ.!

'ಬಿಗ್ ಬಾಸ್ ಕನ್ನಡ 5'ಗೆ ಇನ್ನೂ ಸ್ಪರ್ಧಿಗಳ ಆಯ್ಕೆ ಆಗಿಲ್ವಂತೆ.!

Posted By:
Subscribe to Filmibeat Kannada
Parameshwar Gundkal Speaks about Big Boss kannada 5 Preparations | Filmibeat Kannada

'ಬಿಗ್ ಬಾಸ್ ಕನ್ನಡ 5' ಅಕ್ಟೋಬರ್ 15 ರಂದು ಆರಂಭವಾಗಲಿದೆ. ಕನ್ನಡದ ನಂಬರ್.1 ರಿಯಾಲಿಟಿ ಶೋ ಶುರುವಾಗುವುದಕ್ಕೆ ಇನ್ನು ಕೆಲವೇ ದಿನಗಳ ಮಾತ್ರ ಬಾಕಿಯಿದ್ದು, ತಯಾರಿ ಹೇಗೆ ನಡೆಯುತ್ತಿದೆ ಎಂಬ ಕುತೂಹಲ ಕಾಡುವುದು ಸಹಜ.

ಈ ಕುತೂಹಲಕ್ಕೆ ಬಿಗ್ ಬಾಸ್ ನಿರ್ದೇಶಕರು ಬ್ರೇಕ್ ಹಾಕಿದ್ದಾರೆ. ಬಿಗ್ ಬಾಸ್ 5ನೇ ಆವೃತ್ತಿಯ ರೂಪುರೇಷೆಗಳು ಹೇಗೆ ಸಿದ್ದವಾಗುತ್ತಿದೆ ಎಂದು ಫಿಲ್ಮಿಬೀಟ್ ಕನ್ನಡದ ಜೊತೆ ನಡೆದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

'ಬಿಗ್' ಮನೆಗೆ ಎಂಟ್ರಿ ಪಡೆಯುವ 'Common Men' ಸಂಖ್ಯೆ ಬಿಚ್ಚಿಟ್ಟ ಬಿಗ್ ಬಾಸ್ ಡೈರೆಕ್ಟರ್

Parameshwar Gundkal Speaks about bigg boss 5 Preparations

'ಬಿಗ್ ಬಾಸ್ 5' ಆವೃತ್ತಿಗೆ ಇನ್ನೂ ಅಂತಿಮ ಪಟ್ಟಿ ಆಯ್ಕೆ ಆಗಿಲ್ಲ ಎನ್ನುವುದನ್ನ ಸ್ವತಃ ನಿರ್ದೇಶಕರೇ ಹೇಳಿದ್ದಾರೆ. ಇನ್ನು ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಅರ್ಹ ಸದಸ್ಯರನ್ನ ಬಿಗ್ ಬಾಸ್ ಮನೆಗೆ ಕಳುಹಿಸುವ ಪ್ರಯತ್ನ ಸಾಗಿದೆ ಎಂಬ ವಿಶ್ವಾಸವನ್ನ ವ್ಯಕ್ತಪಡಿಸುತ್ತಾರೆ.

ಈಗಾಗಲೇ ಬಿಗ್ ಬಾಸ್ ಮನೆ ವಿನ್ಯಾಸಗೊಂಡಿದ್ದು, ಎಲ್ಲ ರೀತಿಯ ತಯಾರಿ ಆಗುತ್ತಿದೆ. ಅಕ್ಟೋಬರ್ 15 ರಂದು ಅದ್ಧೂರಿಯಾಗಿ ಶೋ ಶುರು ಮಾಡಲು ಸಕಲ ಸಿದ್ದತೆಗಳು ನಡೆಯುತ್ತಿವೆ ಎಂದು ತಿಳಿಸಿದರು.

ಸುದೀಪ್ ಬಗ್ಗೆ 'ಬಿಗ್ ಬಾಸ್' ಹೇಳಿದ ಯಶಸ್ಸಿನ ಸತ್ಯಕಥೆ.!

''ಪ್ರತಿ ಆವೃತ್ತಿಯನ್ನ ನಾವು ಹೊಸ ಆವೃತ್ತಿ ಎಂದೇ ಮಾಡುತ್ತೇವೆ. ಯಾಕಂದ್ರೆ 'ಬಿಗ್ ಬಾಸ್' ಕಾರ್ಯಕ್ರಮದ ಮೇಲೆ ಹೆಚ್ಚು ನಿರೀಕ್ಷೆ ಇರುತ್ತೆ. ಆ ನಿರೀಕ್ಷೆಯನ್ನ ಮುಟ್ಟುವುದಕ್ಕೆ ಹೋಗಿ ವಿಫಲವಾದ್ರೆ ಕಷ್ಟವಾಗುತ್ತೆ. ಹಾಗಾಗಿ, ಆ ನಿರೀಕ್ಷೆಗಳನ್ನ ಪಕ್ಕಕ್ಕಿಟ್ಟು ಈ ಕಾರ್ಯಕ್ರಮವನ್ನ ಎಷ್ಟು ಚೆನ್ನಾಗಿ ತರಬಹುದು ಎಂಬ ನಿಟ್ಟಿನಲ್ಲಿ ನಮ್ಮ ತಂಡ ಕೆಲಸ ಮಾಡುತ್ತಿದೆ'' - ಪರಮೇಶ್ವರ ಗುಂಡ್ಕಲ್, ಬಿಗ್ ಬಾಸ್ ನಿರ್ದೇಶಕ

English summary
Colors Kannada Channel Business Head, Bigg Boss Director Parameshwar Gundkal reveals the preparations of Bigg Boss Kannada 5 in an Exclusive Interview with Filmibeat Kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X