For Quick Alerts
  ALLOW NOTIFICATIONS  
  For Daily Alerts

  ರಮೇಶ್ ಅರವಿಂದ್ ಬಗ್ಗೆ ನಟಿ ಪಾರೂಲ್ ಮಾಡಿರುವ ಗಾಸಿಪ್ ಏನ್ಗೊತ್ತಾ.?

  By Harshitha
  |
  ರಮೇಶ್ ಅರವಿಂದ್ ಅಫೇರ್ ಗಳ ಬಗ್ಗೆ ಬಾಯಿ ಬಿಟ್ಟ ಪಾರುಲ್ | Filmibeat Kannada

  ಸಿನಿಮಾ ರಂಗ, ರಂಗೀನ್ ದುನಿಯಾ, ಬಣ್ಣದ ಲೋಕ ಅಂದ್ಮೇಲೆ ಗಾಸಿಪ್ ಇದ್ದದ್ದೇ. ಗಾಸಿಪ್ ಕಾಲಂ ಗಳಲ್ಲಿ ಯಾರ ಹೆಸರು ಕೇಳಿ ಬಂದಿಲ್ಲ ಹೇಳಿ.? ಒಂದಲ್ಲ ಒಂದು ವಿಷಯಕ್ಕೆ ಎಲ್ಲಾ ನಟ-ನಟಿಯರ ಬಗ್ಗೆ ಗುಸು ಗುಸು ಕೇಳಿ ಬಂದಿದೆ.

  ಆದ್ರೆ, ನಟ-ನಿರ್ದೇಶಕ ರಮೇಶ್ ಅರವಿಂದ್ ಅಷ್ಟಾಗಿ ಗಾಸಿಪ್ ಕಾಲಂನಲ್ಲಿ ಸದ್ದು ಮಾಡಿದವರಲ್ಲ. ಮೂರು ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ರಮೇಶ್ ಅರವಿಂದ್ 'ತ್ಯಾಗರಾಜ' ಅಂತಲೇ ಹೆಸರುವಾಸಿ.

  ಯುವಕರಿಗೆ ಸ್ಫೂರ್ತಿಯನ್ನು ತುಂಬುವ ಕೆಲಸ ಮಾಡುತ್ತಿರುವ ರಮೇಶ್ ಅರವಿಂದ್ ಬಗ್ಗೆ ನಟಿ ಪಾರೂಲ್ ಯಾದವ್ ಒಂದು ಗಾಸಿಪ್ ಮಾಡಿದ್ದಾರೆ. ಏನಪ್ಪಾ ಆ ಗಾಸಿಪ್ ಅಂದ್ರಾ.? ಫೋಟೋ ಸ್ಲೈಡ್ ಗಳಲ್ಲಿ ಓದಿರಿ....

  ಮೂರು ಹೀರೋಯಿನ್ ಗಳ ಜೊತೆಗೆ ರಮೇಶ್ ಅಫೇರ್!

  ಮೂರು ಹೀರೋಯಿನ್ ಗಳ ಜೊತೆಗೆ ರಮೇಶ್ ಅಫೇರ್!

  ನಟ ರಮೇಶ್ ಅರವಿಂದ್ ರವರಿಗೆ ಮೂರು ಪ್ರಖ್ಯಾತ ಹೀರೋಯಿನ್ ಗಳ ಜೊತೆಗೆ ಅಫೇರ್ ಇದ್ಯಂತೆ. ಹಾಗಂತ ನಟಿ ಪಾರೂಲ್ ಯಾದವ್ ಗುಸುಗುಸು ಹಬ್ಬಿಸಿದ್ದಾರೆ.

  ರಮೇಶ್ ಅರವಿಂದ್ 'ಯಾರಿ' ಆಗಿ 'ಇವರು' ಬರಬೇಕಿತ್ತು.! ರಮೇಶ್ ಅರವಿಂದ್ 'ಯಾರಿ' ಆಗಿ 'ಇವರು' ಬರಬೇಕಿತ್ತು.!

  ಯಾರು ಆ ಮೂವರು ಹೀರೋಯಿನ್ ಗಳು.?

  ಯಾರು ಆ ಮೂವರು ಹೀರೋಯಿನ್ ಗಳು.?

  ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಹಾಗೂ ಕಾಜಲ್ ಅಗರ್ವಾಲ್ ಜೊತೆಗೆ ನಟ ರಮೇಶ್ ಅರವಿಂದ್ ಗೆ ಅಫೇರ್ ಇದೆ ಅಂತ ಪಾರೂಲ್ ಯಾದವ್ ಹೇಳಿದ್ದಾರೆ. ಹಾಗಂತ ಪಾರೂಲ್ ಮಾತನ್ನ ಸೀರಿಯಸ್ ಆಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಯಾಕಂದ್ರೆ, ಪಾರೂಲ್ ಹೀಗಂತ ಹೇಳಿರುವುದು ತಮಾಷೆಗಾಗಿ, ಟಾಸ್ಕ್ ಗಾಗಿ, ಕೇಳಿದ ಪ್ರಶ್ನೆಗೆ ಉತ್ತರಿಸುವ ಸಲುವಾಗಿ. ಅದೂ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ.

  ರಿಲೀಸ್ ಮೊದಲೇ 'ಬಟರ್ ಪ್ಲೈ' ಹಾರಾಟ ಬಲು ಜೋರು ರಿಲೀಸ್ ಮೊದಲೇ 'ಬಟರ್ ಪ್ಲೈ' ಹಾರಾಟ ಬಲು ಜೋರು

  'ನಂ.1 ಯಾರಿ ವಿತ್ ಶಿವಣ್ಣ' ಶೋನಲ್ಲಿ 'ಬಟರ್ ಫ್ಲೈ'

  'ನಂ.1 ಯಾರಿ ವಿತ್ ಶಿವಣ್ಣ' ಶೋನಲ್ಲಿ 'ಬಟರ್ ಫ್ಲೈ'

  'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ರಮೇಶ್ ಅರವಿಂದ್ ಹಾಗೂ ಪಾರುಲ್ ಯಾದವ್ ಅತಿಥಿಗಳಾಗಿ ಭಾಗವಹಿಸಿದ್ದರು. ರಮೇಶ್ ಹಾಗೂ ಪಾರೂಲ್ ಕಾಂಬಿನೇಷನ್ ನಲ್ಲಿ 'ಬಟರ್ ಫ್ಲೈ' ಸಿನಿಮಾ ಮೂಡಿಬರುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ. 'ಕ್ವೀನ್' ಚಿತ್ರದ ರೀಮೇಕ್ ಆಗಿರುವ 'ಬಟರ್ ಫ್ಲೈ' ಸಿನಿಮಾ ಏಕಕಾಲಕ್ಕೆ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ನಲ್ಲಿ ತಯಾರಾಗುತ್ತಿದೆ. ಕನ್ನಡದಲ್ಲಿ ಪಾರೂಲ್ ಯಾದವ್ ನಾಯಕಿ ಆಗಿದ್ದರೆ, ತೆಲುಗಿನಲ್ಲಿ ತಮನ್ನಾ ಹಾಗೂ ತಮಿಳಿನಲ್ಲಿ ಕಾಜಲ್ ಅಗರ್ವಾಲ್ ಹೀರೋಯಿನ್ ಪಾತ್ರ ನಿರ್ವಹಿಸುತ್ತಿದ್ದಾರೆ. ಚಿತ್ರದ ಬಹುತೇಕ ಭಾಗದ ಚಿತ್ರೀಕರಣ ಫ್ರಾನ್ಸ್ ನಲ್ಲಿ ನಡೆದಿದೆ.

  ಪಾರೂಲ್ ಗೆ ಪ್ರಶ್ನೆ

  ಪಾರೂಲ್ ಗೆ ಪ್ರಶ್ನೆ

  'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದ Rapid Fire ರೌಂಡ್ ನಲ್ಲಿ ''ರಮೇಶ್ ಬಗ್ಗೆ ಏನಂತ ಗಾಸಿಪ್ ಕ್ರಿಯೇಟ್ ಮಾಡ್ತೀರಾ?'' ಎಂದು ಪಾರುಲ್ ಯಾದವ್ ಗೆ ಶಿವಣ್ಣ ಪ್ರಶ್ನಿಸಿದರು. ಅದಕ್ಕೆ ''ಫ್ರಾನ್ಸ್ ನಲ್ಲಿ ಮೂವರು ಹೀರೋಯಿನ್ (ಪಾರುಲ್ ಯಾದವ್, ಕಾಜಲ್ ಅಗರ್ವಾಲ್, ತಮನ್ನಾ ಭಾಟಿಯಾ) ಜೊತೆಗೆ ಅಫೇರ್ ಇತ್ತು ಅಂತ ಹೇಳ್ತೀನಿ'' ಎಂದರು ನಟಿ ಪಾರೂಲ್. ಇದನ್ನ ಕೇಳಿ ರಮೇಶ್ ಅರವಿಂದ್ ಕಿಲ ಕಿಲ ಅಂತ ನಕ್ಕುಬಿಟ್ಟರು.

  English summary
  Kannada Actress Parul Yadav wants to spread 'this' gossip about Kannada Actor, Director Ramesh Aravind.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X