For Quick Alerts
  ALLOW NOTIFICATIONS  
  For Daily Alerts

  ಧಣಿ ಅಂಬಿ ಇಲ್ಲದ ಮನೆಯಲ್ಲಿ ಶ್ವಾನಗಳು ಮೌನ: ಮಂಕಾದ ಕನ್ವರ್ ಲಾಲ್

  |

  ರೆಬೆಲ್ ಸ್ಟಾರ್ ಅಂಬರೀಶ್ ನಮ್ಮನ್ನೆಲ್ಲ ಅಗಲಿ ಹತ್ತತ್ರ ಎರಡು ತಿಂಗಳಾಗುತ್ತಾ ಬಂತು. ಅತ್ತ ಅಂಬಿ ಇಲ್ಲದ ಮನೆಯಲ್ಲಿ ಮೌನ ಆವರಿಸಿದ್ದರೆ, ಇತ್ತ ಧಣಿ ಇಲ್ಲದೆ ಅಂಬಿಯ ಮುದ್ದಿನ ಶ್ವಾನಗಳು ಮಂಕಾಗಿವೆ.

  ನಿಮಗೆಲ್ಲಾ ಗೊತ್ತಿರುವ ಹಾಗೆ ಅಂಬರೀಶ್ ಶ್ವಾನ ಪ್ರೇಮಿ. ತಮ್ಮ ಮನೆಯಲ್ಲಿ ಎರಡು ನಾಯಿಗಳನ್ನು ಅಂಬರೀಶ್ ಪ್ರೀತಿಯಿಂದ ಸಾಕಿದ್ದರು. ಬಿಡುವಿದ್ದಾಗ, ಶ್ವಾನಗಳ ಜೊತೆಗೆ ಅಂಬಿ ಆಟವಾಡುತ್ತಿದ್ದರು. ಆದ್ರೀಗ, ಒಡೆಯನಿಲ್ಲದೆ ಶ್ವಾನಗಳು ಅನಾಥವಾಗಿವೆ.

  ಅಂಬಿ ನಿಧನಕ್ಕೆ ಮುದ್ದಿನ ಶ್ವಾನ 'ಕನ್ವರ್ ಲಾಲ್' ಮೂಕ ರೋದನ

  ತಮ್ಮ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿದ್ದ 'ಕನ್ವರ್ ಲಾಲ್' ಮತ್ತು 'ಬುಲ್ ಬುಲ್' ಡೈಲಾಗ್ ಗಳನ್ನು ಪ್ರತಿ ದಿನ ನೆನಪಿಸಿಕೊಳ್ಳಲು ಶ್ವಾನಗಳಿಗೆ ಅದೇ ಹೆಸರುಗಳನ್ನಿಟ್ಟು ಅಂಬರೀಶ್ ನಾಮಕರಣ ಮಾಡಿದ್ದರು.

  ಅದ್ರಲ್ಲೂ, ಸೇಂಟ್ ಬರ್ನಾಡ್ ತಳಿಯ ಶ್ವಾನ 'ಕನ್ವರ್ ಲಾಲ್' ಅಂದ್ರೆ ಅಂಬಿಗೆ ಅಚ್ಚುಮೆಚ್ಚು. ಪ್ರತಿ ದಿನ ಯಜಮಾನನ ಆರೈಕೆಯಲ್ಲಿ ಬೆಳೆದ ಕನ್ವರ್ ಲಾಲ್ ಇಂದು ಅಂಬಿಯನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾನೆ.

  ಅಂಬರೀಶ್ ಮನೆಯ 'ಕನ್ವರ್ ಲಾಲ್' ಮತ್ತು 'ಬುಲ್ ಬುಲ್' ನೋಡಿದ್ದೀರಾ?

  ''ಅಪ್ಪ ಹೋದ ಮೇಲೆ ಕನ್ವರ್ ಲಾಲ್ ಮಂಕಾಗಿದ್ದಾನೆ. ಮನೆಯ ವಾತಾವರಣ ಕೂಡ ಹಾಗೇ ಇದೆ. ಹೀಗಾಗಿ, ಅವನು ಮಂಕಾಗಿ ಮೂಲೆ ಸೇರಿದ್ದಾನೆ'' ಅಂತಾರೆ ಅಭಿಷೇಕ್ ಅಂಬರೀಶ್.

  ಮೂಕ ಪ್ರಾಣಿಗಳೇ ಹಾಗೇ.. ಒಮ್ಮೆ ಒಬ್ಬರನ್ನು ಹಚ್ಚಿಕೊಂಡರೆ, ಬಿಟ್ಟಿರುವುದಿಲ್ಲ. ಇನ್ನೂ ಶ್ವಾನಗಳಂತೂ ನಿಯತ್ತಿಗೆ ಹೆಸರುವಾಸಿ. ಅಂಬಿ ಪ್ರೀತಿಗೆ ಪಾತ್ರವಾಗಿದ್ದ ಕನ್ವರ್ ಲಾಲ್ ಈಗ ಪ್ರತಿ ದಿನ ರೋದಿಸುತ್ತಿದ್ದಾನೆ. ಅತ ಸಮಾಧಾನಗೊಳ್ಳುವುದಾದರೂ ಹೇಗೆ.?

  English summary
  Pet Kanvarlal is missing his owner Late Ambareesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X