For Quick Alerts
  ALLOW NOTIFICATIONS  
  For Daily Alerts

  ಕ್ರಿಕೆಟ್ ಆಟ ಆಡಲು ಒಡವೆ ಕದ್ದಿದ್ದರಂತೆ ನಟ ಪೆಟ್ರೋಲ್ ಪ್ರಸನ್ನ.!

  |
  ಕ್ರಿಕೆಟ್ ಆಟ ಆಡಲು ಒಡವೆ ಕದ್ದಿದ್ದರಂತೆ ನಟ ಪೆಟ್ರೋಲ್ ಪ್ರಸನ್ನ | Filmibeat Kannada

  ನಟ ಪ್ರಸನ್ನ ಎಂದಕೂಡಲೆ ನಿಮಗೆ ಒಂದು ಕ್ಷಣ ಕನ್ ಫ್ಯೂಸ್ ಆಗಬಹುದು. ಆದ್ರೆ, ಪೆಟ್ರೋಲ್ ಪ್ರಸನ್ನ ಎಂದ ಕೂಡಲೆ ಕನ್ನಡ ಚಿತ್ರರಂಗದ ಕೇಡಿ ನಟ ನಿಮ್ಮ ಕಣ್ ಮುಂದೆ ಬರುವುದು ಖಚಿತ. ಅಷ್ಟರ ಮಟ್ಟಿಗೆ ಕೇಡಿ ಪಾತ್ರಗಳಿಗೆ ಜೀವ ತುಂಬಿರುವವರು ನಟ ಪೆಟ್ರೋಲ್ ಪ್ರಸನ್ನ.

  ಸಣ್ಣ-ಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತ ಕನ್ನಡ ಚಿತ್ರರಂಗಕ್ಕೆ ಬಂದ ಪ್ರಸನ್ನ ಅವರ ಬದುಕಿಗೆ ಹೊಸ ತಿರುವು ಕೊಟ್ಟ ಸಿನಿಮಾ 'ದುನಿಯಾ'. ಇದರಲ್ಲಿ 'ಪೆಟ್ರೋಲ್' ಪಾತ್ರಧಾರಿ ಆಗಿ ಅಭಿನಯಿಸಿದ ಪ್ರಸನ್ನ ಅವರು ಇಂದಿಗೂ ಪೆಟ್ರೋಲ್ ಪ್ರಸನ್ನ ಆಗಿಯೇ ಚಿರಪರಿಚಿತ.

  ಇಂತಿಪ್ಪ ಪೆಟ್ರೋಲ್ ಪ್ರಸನ್ನ ಉತ್ತಮ ಕ್ರಿಕೆಟ್ ಆಟಗಾರ ಕೂಡ ಹೌದು. ಚೆನ್ನಾಗಿ ಬೌಲ್ ಮಾಡುವ ಪೆಟ್ರೋಲ್ ಪ್ರಸನ್ನ ಕೆಸಿಸಿ (ಕನ್ನಡ ಚಲನಚಿತ್ರ ಕಪ್) ನಲ್ಲಿ ಖಾಯಂ ಆಟಗಾರ.

  ಕೆಸಿಸಿ-2 ನಲ್ಲಿ ಒಡೆಯರ್ ಚಾರ್ಜರ್ಸ್ ಪರವಾಗಿ ಆಡಿ ಎಲ್ಲರ ಗಮನ ಸೆಳೆದ ಪೆಟ್ರೋಲ್ ಪ್ರಸನ್ನ, ಎರಡು ದಶಕಗಳ ಹಿಂದೆ ಕ್ರಿಕೆಟ್ ಆಟ ಆಡಲು ಒಡವೆಗಳನ್ನ ಕದ್ದಿದ್ದರಂತೆ. ಆ ಸ್ಟೋರಿ ಇಲ್ಲಿದೆ ಓದಿರಿ...

  ಮಜಾ ಮನೆಯಲ್ಲಿ ಪೆಟ್ರೋಲ್ ಪ್ರಸನ್ನ

  ಮಜಾ ಮನೆಯಲ್ಲಿ ಪೆಟ್ರೋಲ್ ಪ್ರಸನ್ನ

  ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ಕೆಸಿಸಿ ಪಂದ್ಯಾವಳಿಯ ನಟರು/ಆಟಗಾರರು ಅತಿಥಿಗಳಾಗಿ ಭಾಗವಹಿಸಿದ್ದರು. ಈ ವೇಳೆ ನಟ ಪೆಟ್ರೋಲ್ ಪ್ರಸನ್ನಗೆ ಸೃಜನ್ ಲೋಕೇಶ್ ಒಂದು ಪ್ರಶ್ನೆ ಕೇಳಿದರು.

  ಕ್ಯಾಪ್ಟನ್ ಸುದೀಪ್ ತುಂಬಾನೇ ಸ್ಟ್ರಿಕ್ಟ್: ಕಿಚ್ಚನನ್ನು ಕಂಡರೆ ತಂಡದಲ್ಲಿರುವವರಿಗೆ ನಡುಕ.!ಕ್ಯಾಪ್ಟನ್ ಸುದೀಪ್ ತುಂಬಾನೇ ಸ್ಟ್ರಿಕ್ಟ್: ಕಿಚ್ಚನನ್ನು ಕಂಡರೆ ತಂಡದಲ್ಲಿರುವವರಿಗೆ ನಡುಕ.!

  ಟಾರ್ಚರ್ ಅನುಭವಿಸಿದ್ದೀರಾ.?

  ಟಾರ್ಚರ್ ಅನುಭವಿಸಿದ್ದೀರಾ.?

  ''ಕ್ರಿಕೆಟ್ ವಿಚಾರದಲ್ಲಿ ಯಾವ್ಯಾವ ಟಾರ್ಚರ್ ಅನುಭವಿಸಿದ್ದೀರಾ.? ಯಾವ್ಯಾವ ತರಹ ಟಾರ್ಚರ್ ಕೊಟ್ಟಿದ್ದೀರಾ.?'' ಎಂದು ಸೃಜನ್ ಲೋಕೇಶ್ ಕೇಳಿದಾಗ, ''ಮನೆಯಲ್ಲಿ ನಮ್ಮನ್ನ ಕ್ರಿಕೆಟ್ ಆಟ ಆಡಲು ಕಳುಹಿಸುತ್ತಿರಲಿಲ್ಲ. ಅದೇ ನಮಗೆ ದೊಡ್ಡ ಟಾರ್ಚರ್ ಆಗಿತ್ತು'' ಎಂದರು ನಟ ಪೆಟ್ರೋಲ್ ಪ್ರಸನ್ನ.

  'ಕೆಸಿಸಿ' ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸಿದ ಕಿಚ್ಚ ಸುದೀಪ್'ಕೆಸಿಸಿ' ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸಿದ ಕಿಚ್ಚ ಸುದೀಪ್

  ಓಲೆ ಕದಿಯುವುದು ವಾಡಿಕೆ

  ಓಲೆ ಕದಿಯುವುದು ವಾಡಿಕೆ

  ''25-30 ವರ್ಷಗಳ ಹಿಂದಿನ ಕಥೆ ಇದು. ಟೆನ್ನಿಸ್ ಬಾಲ್ ಟೂರ್ನಮೆಂಟ್ ಆಡ್ತಿದ್ವಿ. ನಮ್ಮ ಬಳಿ ದುಡ್ಡು ಇರುತ್ತಿರಲಿಲ್ಲ. 20 ಜನ ಪ್ಲೇಯರ್ಸ್ ಇದ್ವಿ. ಕಾಸಿಲ್ಲದೇ ಇರುವಾಗ, ಯಾರಾದರೂ ಒಬ್ಬರ ಮನೆಯಲ್ಲಿ ಓಲೆ, ಝುಮ್ಕಿ ಕದಿಯುವುದು ವಾಡಿಕೆ. ಒಡವೆ ಕದ್ದು, ಅದನ್ನ ಅಡವಿಟ್ಟು, ಟೂರ್ನಮೆಂಟ್ ಆಡಲು ಹೋಗುತ್ತಿದ್ವಿ. ಇದರಿಂದ ನಮ್ಮ ಮನೆಯವರಿಗೆ ನನ್ನಿಂದ ಟಾರ್ಚರ್ ಆಗುತ್ತಿತ್ತು'' ಅಂತ ಪೆಟ್ರೋಲ್ ಪ್ರಸನ್ನ ಹೇಳಿದರು.

  'ಹೆಬ್ಬುಲಿ' ಸುದೀಪ್ ಟೀಮ್ ಗೆ ಸಖತ್ತಾಗಿ 'ಚಮಕ್' ಕೊಟ್ಟ ಗಣೇಶ್ ತಂಡ.!'ಹೆಬ್ಬುಲಿ' ಸುದೀಪ್ ಟೀಮ್ ಗೆ ಸಖತ್ತಾಗಿ 'ಚಮಕ್' ಕೊಟ್ಟ ಗಣೇಶ್ ತಂಡ.!

  ಒಡೆಯರ್ ಚಾರ್ಜರ್ಸ್ ನಲ್ಲಿ ಪೆಟ್ರೋಲ್ ಪ್ರಸನ್ನ

  ಒಡೆಯರ್ ಚಾರ್ಜರ್ಸ್ ನಲ್ಲಿ ಪೆಟ್ರೋಲ್ ಪ್ರಸನ್ನ

  ಮೊನ್ನೆಯಷ್ಟೇ ಮುಕ್ತಾಯವಾದ ಕನ್ನಡ ಚಲನಚಿತ್ರ ಕಪ್ ನಲ್ಲಿ ಒಡೆಯರ್ ಚಾರ್ಜರ್ಸ್ ತಂಡದ ಪರವಾಗಿ ಪೆಟ್ರೋಲ್ ಪ್ರಸನ್ನ ಆಡಿದರು. ಒಡೆಯರ್ ಚಾರ್ಜರ್ಸ್ ಕೆಸಿಸಿ-2 ಚಾಂಪಿಯನ್ಸ್ ಆದರು.

  English summary
  Kannada Actor Petrol Prasanna had stolen earrings to play cricket.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X