For Quick Alerts
  ALLOW NOTIFICATIONS  
  For Daily Alerts

  ಮಕ್ಕಳಿಗಿಷ್ಟದ ಪೋಗೋ ಚಾನಲ್ ಕನ್ನಡದಲ್ಲೇಕಿಲ್ಲ?

  By * ಶ್ರೀರಾಮ್ ಭಟ್
  |

  ಪೋಗೋ ಚಾನೆಲ್ ಹೆಸರು ಕೇಳಿದರೆ ಸಾಕು, ಮಕ್ಕಳೇ ಕಣ್ಣೆದುರು ಬಂದು ನಿಲ್ಲುತ್ತವೆ. ಪೋಗೋ ಚಾನೆಲ್ ವೀಕ್ಷಿಸುವ ಕೋಟ್ಯಂತರ ಮಕ್ಕಳು ಪ್ರಪಂಚದಲ್ಲಿದ್ದಾರೆ. ಪೋಗೋ ಚಾನೆಲ್ಲಿನಲ್ಲಿ ಬರುವ ಕಾರ್ಯಕ್ರಮಗಳು ಅಂತಾರಾಷ್ಟ್ರೀಯ ಭಾಷೆ ಇಂಗ್ಲಿಷಿನಲ್ಲಿ ಪ್ರಸಾರವಾಗುತ್ತಿವೆ. ಅದನ್ನು ನೋಡುತ್ತಿರುವ ಮಕ್ಕಳಿಗೆ ಅದನ್ನು ಅರ್ಥಮಾಡಿಕೊಳ್ಳುವ ಮಟ್ಟಿಗೆ ಇಂಗ್ಲಿಷ್ ಕಲಿಕೆ ಆಗಿರುವುದಿಲ್ಲ.

  ಆದರೆ ಎಲ್ಲಾ ದೇಶಗಳ ಮಕ್ಕಳಿಗೆ ಇಂಗ್ಲಿಷ್ ಭಾಷೆಯ ಸಮಸ್ಯೆ ತಲೆದೋರುವುದಿಲ್ಲ. ಕಾರಣ, ಅದು ಆಯಾ ದೇಶಗಳ ಭಾಷೆಗೇ ಡಬ್ ಆಗಿರುತ್ತದೆ. ಆದರೆ ನಮ್ಮ ಕರ್ನಾಟಕದ ಮಕ್ಕಳು ಪೋಗೋ ಚಾನೆಲ್ಲಿನಲ್ಲಿ ಬರುವ ಕಾರ್ಯಕ್ರಮವನ್ನು ಇಂಗ್ಲಿಷಿನಲ್ಲಿಯೇ ನೋಡುತ್ತಿವೆ. ಕಾರಣ, ಕನ್ನಡದಲ್ಲಿ ಪೋಗೋ ಚಾನೆಲ್ ಪ್ರಸಾರವಿಲ್ಲ.

  ಮಕ್ಕಳ ನೆಚ್ಚಿನ ಈ ಚಾನೆಲ್ ಜನವರಿ 1, 2004ರಿಂದ ತನ್ನ ಪ್ರಸಾರಕಾರ್ಯವನ್ನು ಆರಂಭಿಸಿದೆ. ಈ ಚಾನೆಲ್, ಮಕ್ಕಳ ಚಾನೆಲ್ ಎಂದೇ ಪ್ರಸಿದ್ಧವಾಗುವಷ್ಟರ ಮಟ್ಟಿಗೆ ಮಕ್ಕಳಿಗೆ ಸಂಬಂಧಿಸಿದ ಕಾರ್ಯಕ್ರಮಗಳೇ ಇದರಲ್ಲಿ ಪ್ರಸಾರವಾಗುತ್ತಿವೆ. ಇದರಲ್ಲಿ ಬರುವ ಕಾರ್ಟೂನ್ ಸಂಬಂಧಿತ ಅನಿಮೇಟೆಡ್ ಚಿತ್ರಗಳು ಮಕ್ಕಳ ಮನಸೂರೆಗೊಳ್ಳುತ್ತಿವೆ.

  ಈ ವಾಹಿನಿಯಲ್ಲಿ, ಪಾಪ್ಯುಲರ್ ಅನಿಮೇಟೆಡ್ ಅಂಡ್ ಲೈವ್ ಆಕ್ಷನ್ ಮೂವೀಸ್ ಗಳು ಲೈಟ್ಸ್! ಕ್ಯಾಮರಾ! ಪೋಗೋ ಹೆಸರಿನ ಮೂಲಕ ಪ್ರಸಾರವಾಗುತ್ತಿವೆ. ಎಮ್ ಎ ಡಿ, ಛೋಟಾ ಭೀಮ್ (ಗೋಲ್ಡನ್ ಕರ್ಸರ್ ಅವಾರ್ಡ್ -2009ನ ಬೆಸ್ಟ್ ಅನಿಮೇಟೆಡ್ ಟಿವಿ ಸಿರೀಸ್ ಬಹುಮಾನ ಪಡೆದ ಟಿವಿ ಶೋ), ತಕೇಶೀಸ್ ಕಾಸ್ಟಲ್ (ಜಪನೀಸ್ ಭಾಷೆಯಿಂದ ಹಿಂದಿಗೆ ಡಬ್) ಮುಂತಾದವು ಪೋಗೋದಲ್ಲಿನ ಪ್ರಮುಖ ಕಾರ್ಯಕ್ರಗಳು.

  ಹ್ಯಾರೀ ಪಾಟರ್, ಸ್ಪೈಡರ್ ಮ್ಯಾನ್, ಅನಿಮೇಟೆಡ್ ರಾಮಾಯಣ ಮೂವೀಸ್ ಹೀಗೆ ಹಲವು ಚಿತ್ರಗಳನ್ನು ಮಕ್ಕಳಷ್ಟೇ ಅಲ್ಲ ದೊಡ್ಡವರೂ ವೀಕ್ಷಿಸುತ್ತಾರೆ. ಮಕ್ಕಳ ಜೊತೆ ಕುಳಿತ ದೊಡ್ಡವರಲ್ಲಿ ಬಹಳಷ್ಟು ಜನರಿಗೆ ಇಂಗ್ಲಿಷ್ ಸಂಭಾಷಣೆಗಳು ಅರ್ಥವಾಗುವುದಿಲ್ಲ. ಆದರೂ ಆಸಕ್ತಿಯಿಂದ ನೋಡುತ್ತಾರೆ. ಮಕ್ಕಳಂತೂ ಪೋಗೋ ಚಾನೆಲ್ಲಿಗೆ ಅಂಟಿಕೊಂಡಿದ್ದಾರೆ ಎನ್ನಬಹುದು.

  ಈ ಪೋಗೋ ಚಾನೆಲ್ ಭಾರತ, ನೇಪಾಳ್, ಭೂತಾನ್, ಶ್ರೀಲಂಕಾ, ಮಾಲ್ಡೀವ್ಸ್ ದೇಶಗಳಲ್ಲಿ ಪ್ರಸಾರವಾಗುತ್ತಿವೆ. ಭಾರತದಲ್ಲಿ ಈ ಚಾನೆಲ್ ನ ಹೆಡ್ ಕ್ವಾರ್ಟರ್ಸ್ ಮುಂಬೈನಲ್ಲಿದೆ. ಇಲ್ಲಿ ಹಿಂದಿ ಹಾಗೂ ತಮಿಳು ಭಾಷೆಗಳಲ್ಲಿ ಮಾತ್ರ ಈ ಕಾರ್ಯಕ್ರಮ ಡಬ್ ಆಗಿ ಪ್ರಸಾರವಾಗುತ್ತಿದೆ. ಆದರೆ ಇಡೀ ದೇಶದ ಜನರು ಅದರಲ್ಲೂ ಪ್ರಮುಖವಾಗಿ ಮಕ್ಕಳು ಇದನ್ನು ನೋಡುತ್ತಾರೆ.

  ಪೋಗೋ ಚಾನಲ್ ಟರ್ನರ್ ಇಂಟರ್ ನ್ಯಾಷನಲ್ ಇಂಡಿಯಾ ಪ್ರೈವೇಟ್ ಲಿ ಮಾಲೀಕತ್ವದಲ್ಲಿದೆ. ಇದರ ಸಿಸ್ಟರ್ ಚಾನೆಲ್ ಗಳು- ಕಾರ್ಟೂನ್ ನೆಟ್ ವರ್ಕ್, ಬೂಮರಂಗ್, ಡಬ್ಲುಬಿ, ಎಚ್ಬಿಒ, ರಿಯಲ್, ಟರ್ನರ್ ಕ್ಲಾಸಿಕ್ ಮೂವೀಸ್, ಸಿಎನ್ಎನ್. ಈ ಚಾನೆಲ್ ಕಾರ್ಯಕ್ರಮಗಳು ಪಾಕಿಸ್ತಾನ, ಬಾಂಗ್ಲಾದೇಶಗಳಲ್ಲಿ ಕಾರ್ಟೂನ್ ನೆಟ್ ವರ್ಕ್ ಚಾನಲ್ ಅಡಿಯಲ್ಲಿ ದಿನಕ್ಕೆ ಕೇವಲ 3 ಗಂಟೆಗಳಷ್ಟು ಪ್ರಸಾರವಾಗುತ್ತಿವೆ.

  ಇವೆಲ್ಲಾ ಪೋಗೋ ಚಾನೆಲ್ ಬಗ್ಗೆ ಮಾಹಿತಿಗಳು. ಆದರೆ ಮಕ್ಕಳ ಜ್ಞಾನಾರ್ಜನೆಗೆ, ಮನರಂಜನೆಗೆ ಹಾಗೂ ಕಲ್ಪನೆಗಳ ಸಾಕಾರ ಹಾಗೂ ವಿಕಾಸಕ್ಕೆ ಪೂರಿತವಾಗಿರಬೇಕಾದ ಇವು ಸ್ಥಳೀಯ ಭಾಷೆಗಳಲ್ಲೇ ಇದ್ದರೆ ಬಹಳಷ್ಟು ಅನುಕೂಲ ಎಂಬುದು ಅದನ್ನು ನೋಡುವ ಮಕ್ಕಳನ್ನು ಹೆತ್ತ ಪೋಷಕರಿಂದ ಬಂದ ಅನಿಸಿಕೆ.

  ಸದ್ಯ ಹಿಂದಿ ಹಾಗೂ ತಮಿಳಿನಲ್ಲಿ ಮಾತ್ರ ಪ್ರಸಾರವಾಗುತ್ತಿರುವ ಪೋಗೋ ಕಾರ್ಯಕ್ರಮಗಳು ಕನ್ನಡದಲ್ಲಿ ನೋಡಲು ಎಂದು ಸಾಧ್ಯವಾಗುವುದು ಎಂಬುದು ಬಹಳಷ್ಟು ಕನ್ನಡಿಗರ ಪ್ರಶ್ನೆ. ಡಬ್ಬಿಂಗ್ ಬಗ್ಗೆ ತಗಾದೆ ಎತ್ತುತ್ತಿರುವವರು ಇದಕ್ಕೂ ಅಡ್ಡಗಾಲು ಹಾಕಬಹುದು. ಆದರೆ, ಸಿನಿಮಾ ರಂಗದಲ್ಲಿ ಇರುವಂತೆ ಸಲ್ಲದ ರಾಜಕೀಯವನ್ನು ಇಲ್ಲಿ ತರುವುದು ಬೇಡ. ಪೋಗೋ ಚಾನೆಲ್ ಕನ್ನಡದಲ್ಲಿ ಬಂದರೆ ಮಕ್ಕಳ ಮನರಂಜನೆಗೆ ಮತ್ತು ಕಲಿಕೆಗೆ ಅನುಕೂಲ ಎಂಬುದು ಬಹಳಷ್ಟು ಜನರ ಅಭಿಪ್ರಾಯ. ಓದುಗರೇ ನೀವೇನಂತೀರಾ? (ಒನ್ ಇಂಡಿಯಾ ಕನ್ನಡ)

  English summary
  Pogo TV, owned by Turner Broadcasting, a unit of Time Warner for India which primarily shows animated programming and some live-action shows based in Mumbai, Maharashtra, is one of the very popular cartoon channel. But, it is not available in Kannada, why?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X