»   » ಟಿವಿ ವೀಕ್ಷಕರಿಗೆ ಧನ್ಯತೆಯಿಂದ ಕೈಮುಗಿದ ರಮೇಶ್

ಟಿವಿ ವೀಕ್ಷಕರಿಗೆ ಧನ್ಯತೆಯಿಂದ ಕೈಮುಗಿದ ರಮೇಶ್

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ನಮ್ಮ ನಿಮ್ಮ ನಡುವೆ ಇರುವ ಸಾಧಕರನ್ನು ಪರಿಚಯಿಸಿ, ನಮಗೆ ಗೊತ್ತಿಲ್ಲದ ಸಂಗತಿಗಳನ್ನು ವೈಶಿಷ್ಟ್ಯಪೂರ್ಣವಾಗಿ, ಆತ್ಮೀಯವಾಗಿ ತಿಳಿಸಿಕೊಟ್ಟ ಅರ್ಥಪೂರ್ಣ ಕಾರ್ಯಕ್ರಮ 'ವೀಕೆಂಡ್ ವಿತ್ ರಮೇಶ್'. ವಾರಾಂತ್ಯದಲ್ಲಿ ವೀಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದ ಜೀ ಕನ್ನಡ ವಾಹಿನಿಯ ಈ ರಿಯಾಲಿಟಿ ಶೋ ಇತ್ತೀಚೆಗೆ ಬರುತ್ತಿರುವ ಅತ್ಯುತ್ತಮ ಕಾರ್ಯಕ್ರಮಗಳಲ್ಲೊಂದು.

  26ನೇ ಎಪಿಸೋಡಿನೊಂದಿಗೆ ಈ ಕಾರ್ಯಕ್ರಮದ ಮೊದಲ ಆವೃತ್ತಿ ಮುಕ್ತಾಯಗೊಂಡಿದೆ. ಕೊನೆಯ ಎರಡು ಶೋನಲ್ಲಿ, ಈ ಹಿಂದಿನ ಶೋನಲ್ಲಿ ಸಾಧಕರನ್ನು ಪರಿಚಯಿಸುತ್ತಾ ಕಾರ್ಯಕ್ರಮವನ್ನು ನಿರೂಪಿಸುತ್ತಿದ್ದ ರಮೇಶ್ ಅರವಿಂದ್ ಖುದ್ದು ಸಾಧಕರ ಸೀಟಿನಲ್ಲಿ ಕೂತಿದ್ದು ವಿಶೇಷವಾಗಿತ್ತು.

  ಕಾರ್ಯಕ್ರಮದ ಕೊನೆಯ ಎರಡು ಕಂತಿಗೆ ಮತ್ತಷ್ಟು ಮೆರುಗು ತಂದಿದ್ದು ಕನ್ನಡದ ಜನಪ್ರಿಯ ನಿರ್ದೇಶಕ, ನಿರ್ಮಾಪಕ ಯೋಗರಾಜ್ ಭಟ್ ಅವರ ನಿರೂಪಣೆ. ತನ್ನದೇ ಆದ ಶೈಲಿಯಿಂದ ರಮೇಶ್ ಕಾಲೆಳೆಯುತ್ತಾ, ಅಚ್ಚುಕಟ್ಟಾಗಿ ಭಟ್ರು ಕಾರ್ಯಕ್ರಮವನ್ನು ವಿಭಿನ್ನ ರೀತಿಯಲ್ಲಿ ನಿರೂಪಿಸಿದರು. (ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಸಂಪೂರ್ಣ ಮಾಹಿತಿಗಾಗಿ ಈ ಟ್ಯಾಗ್ ಕ್ಲಿಕ್ಕಿಸಿ)

  ಈ ಹಿಂದಿನ ಎಪಿಸೋಡಿನಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಮುಖ್ಯಮಂತ್ರಿ ಚಂದ್ರು, ಯಶ್, ರಾಧಿಕಾ ಪಂಡಿತ್, ಮಾಸ್ಟರ್ ಹಿರಣ್ಣಯ್ಯ ಕೊನೆಯ ಎರಡು ಕಂತಿನ ಕಾರ್ಯಕ್ರಮಕ್ಕೆ ರಮೇಶ್ ಅರವಿಂದ್ ಬಗ್ಗೆ ಮುನ್ನುಡಿ ನುಡಿದಿದ್ದು ಕಾರ್ಯಕ್ರಮದ ಇನ್ನೊಂದು ವೈಶಿಷ್ಟ್ಯವಾಗಿತ್ತು.

  ತಮಿಳುನಾಡಿನ ಕುಂಭಕೋಣಂನಲ್ಲಿ 10.09.1964ರಲ್ಲಿ ಜನಿಸಿದ ಪಂಚಭಾಷಾ ತಾರೆ ರಮೇಶ್ ಅರವಿಂದ್, ಎಲ್ಲರಂತೆ ತನ್ನ ಜೀವನದ ಘಟನೆಗಳನ್ನು ಎಲ್ಲೂ ಭಾವೋದ್ವೇಗಕ್ಕೊಳಗಾಗದೇ ಎಳೆ ಎಳೆಯಾಗಿ ಬಿಡಿಸಿಟ್ಟರು. (ಜಾಫರ್ ಶರೀಫ್ ನನ್ನ ಪಾಲಿನ ಅಲ್ಲಾ)

  ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಬಗ್ಗೆ ರಮೇಶ್ ಹೇಳಿದ್ದೇನು? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ...

  ತಂದೆ ಬಹಳ ಸ್ವಾಭಿಮಾನಿ

  ನನ್ನ ತಂದೆ ಬಹಳ ಸ್ವಾಭಿಮಾನಿ. ತನ್ನ 19ನೇ ವಯಸ್ಸಿನಲ್ಲಿ ಸ್ವಂತ ಮನೆ ಕಟ್ಟಿದ್ದರು. ನನ್ನ ತಂದೆ ತಾಯಿಯ ಶಿಸ್ತುಬದ್ದ ಜೀವನಶೈಲಿಯಿಂದಾಗಿ ನಾನು ಕೂಡಾ ಅದೇ ಶಿಸ್ತಿನ ಬದುಕನ್ನು ಕಾಣುತ್ತಿದ್ದೇನೆ. ನಾನು ಯಾವತ್ತೂ ಫ್ರೆಷ್ ಆಗಿ ಕಾಣಲು ನನ್ನ ಪೋಷಕರ ಕೊಡುಗೆ ಅಪಾರ.

  ಸುಂದರ ಸ್ವಪ್ನಗಳು ಚಿತ್ರ

  1986ರಲ್ಲಿ ಖ್ಯಾತ ನಿರ್ದೇಶಕ ಕೆ ಬಾಲಚಂದರ್ ಅವರ ಸೂಪರ್ ಹಿಟ್ ಸುಂದರ ಸ್ವಪ್ನಗಳು ಚಿತ್ರದ ಮೂಲಕ ನಾನು ಚಿತ್ರರಂಗಕ್ಕೆ ಕಾಲಿಟ್ಟೆ. ಬಾಲಚಂದರ್ ಅವರ ಚಿತ್ರದಲ್ಲಿ ನಟಿಸಲು ನನ್ನ ತಂದೆ ಅವರ ಭಾವಚಿತ್ರವನ್ನು ಕಳುಹಿಸಿದ್ದರು. ಆದರೆ ಬಾಲಚಂದರ್ ಕಣ್ಣಿಗೆ ನಾನು ಬಿದ್ದೆ, ಕಲಾವಿದನಾದೆ, ನಿಮ್ಮ ಪ್ರೀತಿಯ ರಮೇಶ್ ಆದೆ.

  ರಾಮ ಶಾಮ ಭಾಮ ಸೆಟ್ಟೇರಿದ್ದು ಹೇಗೆ

  ಕಮಲ್ ಹಾಸನ್ ಪ್ರಮುಖ ಭೂಮಿಕೆಯಲ್ಲಿದ್ದ ಚಿತ್ರವೊಂದರ ಶೂಟಿಂಗ್ ಮುಕ್ಕಾಲು ಮುಗಿದ ನಂತರ ಕಾರಣಾಂತರದಿಂದ ಆ ಚಿತ್ರದ ಜವಾಬ್ದಾರಿ ವಹಿಸಿಕೊಳ್ಳುವ ಅವಕಾಶ ನನಗೆ ಸಿಕ್ಕಿತ್ತು. ಮೂರು ಭಾಷೆಯಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರವನ್ನು ಅಚ್ಚುಕಟ್ಟಾಗಿ ಪೂರ್ತಿಗೊಳಿಸಿದೆ. ಆಗ ನನಗೆ 'ನಾನು 16 ದಿನ ಫ್ರೀ ಇದ್ದೇನೆ. ಕಾಲ್ ಶೀಟ್ ನೀಡುತ್ತೇನೆ. ಏನಾದರೂ ಮಾಡು' ಎಂದು ಕಮಲ್ ನನಗೆ ಹೇಳಿದರು. ಆ ಸಮಯದಲ್ಲಿ ಸೆಟ್ಟೇರಿದ ಚಿತ್ರವೇ ರಾಮ ಶಾಮ ಭಾಮ.

  ಉತ್ತಮ ವಿಲನ್ ಚಿತ್ರದ ನಿರ್ದೇಶನ

  ಉತ್ತಮ ವಿಲನ್ ಚಿತ್ರಕ್ಕೆ ನಿರ್ದೇಶಕನಾಗಿ ಆಯ್ಕೆಯಾಗಿರುವುದು ನನ್ನ ಪುಣ್ಯ. ಕಮಲ್ ಜೊತೆ ಕೆಲಸ ಮಾಡುವುದು ಒಂದು ವಿಭಿನ್ನ ಅನುಭವ. ಚಿತ್ರದ ತಾಂತ್ರಿಕ ಭಾಗದ ಕೆಲಸ ನಡೆಯುತ್ತಿದೆ. ಬರುವ ಜನವರಿ ತಿಂಗಳಲ್ಲಿ ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ.

  ಅಣ್ಣಾವ್ರ ಬಗ್ಗೆ ರಮೇಶ್

  ನನಗೆ ಮತ್ತು ನನ್ನ ಸ್ನೇಹಿತರಿಗೆ ರಾಜ್ ಚಿತ್ರವೆಂದರೆ ಪಂಚಪ್ರಾಣ. ರಾಜ್ ಅವರ 'ಇಫ್ ಯು ಕಮ್ ಟುಡೇ' ಹಾಡಿಗೆ ನಾನು ಮತ್ತು ನನ್ನ ಸ್ನೇಹಿತರು ಅದೆಷ್ಟೋ ಬಾರಿ ಡ್ಯಾನ್ಸ್ ಮಾಡಿದ ಘಟನೆಯನ್ನು ರಮೇಶ್ ಕಾರ್ಯಕ್ರಮದಲ್ಲಿ ಸ್ಮರಿಸಿಕೊಂಡರು.

  ಶಿವರಾಜ್ ಕುಮಾರ್ ಕರೆಮಾಡಿ ಹೇಳಿದ್ದು

  ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕರೆ ಮಾಡಿ, ನಿಮ್ಮ ಜೊತೆ ಮತ್ತೊಂದು ಚಿತ್ರ ಮಾಡಬೇಕೆನ್ನುವುದು ನನ್ನ ಆಸೆ. ಆ ಚಿತ್ರಕ್ಕೆ ನೀವೇ ನಿರ್ದೇಶಕರಾಗ ಬೇಕು ಎಂದಾಗ, ಖಂಡಿತ ಮುಂದಿನ ದಿನದಲ್ಲಿ ಆ ಕಾಲ ಕೂಡಿ
  ಬರಲಿದೆ ಎಂದು ರಮೇಶ್ ಹೇಳಿದರು.

  ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಬಗ್ಗೆ

  ಈ ಟಿವಿ ಶೋ ಇಷ್ಟರ ಮಟ್ಟಿಗೆ ಯಶಸ್ಸು ಗಳಿಸುತ್ತದೆ ಎಂದು ನಾನು ಅಂದು ಕೊಂಡಿರಲಿಲ್ಲ. ಜನ ಪ್ರೀತಿಯಿಂದ ಈ ಕಾರ್ಯಕ್ರಮದ ಬಗ್ಗೆ ಮಾತನಾಡಿದ್ದು ನನಗೆ ಸಾರ್ಥಕತೆ ತಂದಿದೆ. ಯಾವುದೇ ಸಿನಿಮಾ, ಟಿವಿಶೋ ಜನರಿಗೆ ತಲುಪಿದರೆ ಕಲಾವಿದರಿಗೆ ಅದೇ ಆಸ್ಕರ್ ಪ್ರಶಸ್ತಿ.

  ಇನ್ನೂ ಸಾಧಕರ ಕರೆಯುವ ಮನಸ್ಸಿತ್ತು

  ಈ ಕಾರ್ಯಕ್ರಮಕ್ಕೆ 25ಶೋ ಎಂದು ಮೊದಲೇ ನಿಗದಿ ಪಡಿಸಿದ್ದೆವು. ಈ ಕಾರ್ಯಕ್ರಮಕ್ಕೆ ಭಾರತಿ ಮೇಡಂ, ಬಿ ಸರೋಜಾ ದೇವಿ, ಅಂಬರೀಶ್ ಅವರನ್ನು ಕರೆಸುವ ಮನಸ್ಸಿತ್ತು. ಮುಂದಿನ ದಿನದಲ್ಲಿ ಈ ಕಾರ್ಯಕ್ರಮ ಮತ್ತೆ ಮೂಡಿಬರಲಿದೆ, ಮತ್ತಷ್ಟು ಸಾಧಕರನ್ನು ಪರಿಚಯಿಸಲಿದ್ದೇವೆ.

  ಟಿವಿ ವೀಕ್ಷಕರಿಗೆ ಕೈಮುಗಿದ ರಮೇಶ್

  ಈ ಕಾರ್ಯಕ್ರಮವನ್ನು ಜನಪ್ರಿಯತೆಯ ಉತ್ತುಂಗಕ್ಕೇರಿಸಿದ ಟಿವಿ ವೀಕ್ಷಕರಿಗೆ ನನ್ನ ಅನಂತಾನಂತ ವಂದನೆಗಳು. ನಿಮ್ಮ ಪ್ರೀತಿ ನನ್ನಂತಹ ಕಲಾವಿದರ ಮೇಲಿರಲಿ, ಇದುವೇ ನಮಗೆ ಶ್ರೀರಕ್ಷೆ. ಕಾರ್ಯಕ್ರಮದ ಪ್ರೊಗ್ರಾಂ ಹೆಡ್ ರಾಘವೇಂದ್ರ ಹುಣಸೂರು, ಜೀ ಕನ್ನಡ ವಾಹಿನಿಯ ಸಮಸ್ತರಿಗೂ ನನ್ನ ಪ್ರೀತಿಯ ನಮಸ್ಕಾರ ಎಂದು ರಮೇಶ್ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು.

  English summary
  Popular TV show in Zee Kannada ’Weekend with Ramesh’ concluded. In the last 25th and 26th episode aired on Oct 25th and 26th Ramesh Aravind was in hot seat and noted Director Yograj Bhat hosted the programme.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more