»   » ಪೊರ್ಕಿ ಹುಚ್ಚ ವೆಂಕ್ಟನ ಕಾವೇರಿ... ಐ ಮಿಸ್ ಹರ್ ಸಾಂಗ್

ಪೊರ್ಕಿ ಹುಚ್ಚ ವೆಂಕ್ಟನ ಕಾವೇರಿ... ಐ ಮಿಸ್ ಹರ್ ಸಾಂಗ್

Posted By:
Subscribe to Filmibeat Kannada

ನಟ, ನಾಯಕ, ನಿರ್ದೇಶಕ, ನಿರ್ಮಾಪಕ, ಗೀತ ರಚನೆಕಾರ 'ರೌದ್ರ' ರಸ ನಾಯಕ, ಬ್ಯಾನ್ ಸ್ಟಾರ್ ಹುಚ್ಚ ವೆಂಕಟ್ ಈಗ ಕರ್ನಾಟಕದ ಮನೆ ಮನೆ ತಲುಪಿದ್ದಾರೆ. ಯೂಟ್ಯೂಬ್ ವಿಡೀಯೋ ಮೂಲಕ ಸ್ಟಾರ್ ಆಗಿದ್ದ ವೆಂಕಟ್ ಬಿಗ್ ಬಾಸ್ ಕನ್ನಡ ಸೀಸನ್ 3ನಲ್ಲಿ 'ಬಾಸ್' ಆಗಿ ಉಳಿದಿದ್ದಾರೆ.

'ಸ್ವತಂತ್ರಪಾಳ್ಯ' ಹುಚ್ಚ ವೆಂಕಟ್ ಚಿತ್ರದ ಸೋಲಿನ ನಂತರ ಹುಚ್ಚ ವೆಂಕಟ್ ಅವರು ಕನ್ನಡ ಪ್ರೇಕ್ಷಕರ ಮುಂದೆ ಆರ್ಭಟಿಸಿದ್ದು ಎಲ್ಲರಿಗೂ ತಿಳಿದೇ ಇದೆ. ಈ ಬಗ್ಗೆ ಸ್ವತಃ ಹುಚ್ಚ ವೆಂಕಟ್ ಗೂ ಪಶ್ಚಾತ್ತಾಪವಿದೆ. ಅದರೆ, ಪಟ್ಟ ಪರಿಶ್ರಮಕ್ಕೆ ತಕ್ಕ ಬೆಲೆ ಸಿಗಲಿಲ್ಲ ಎಂಬ ಕೊರಗಿದೆ. ಅಪ್ಪ ಬೇಡ ಎಂದರೂ ಇಂಡಸ್ಟ್ರಿಗೆ ಕಾಲಿಟ್ಟು ಸೋತ ಮುಖ ಹೊತ್ತ ನೋವಿದೆ. ಇದೆಲ್ಲದರ ಜೊತೆಗೆ ವೆಂಕಟ್ ಗೂ ಪ್ರೀತಿಸುವ ಹೃದಯವಿದೆ. [ಯಾರೀ ಹುಚ್ಚ ವೆಂಕಟ್?]

ಬಡವರು ಹಾಗೂ ಭಿಕ್ಷುಕರನ್ನ ಕಂಡ್ರೆ ಹುಚ್ಚ ವೆಂಕಟ್ ಗೆ ಸಿಕ್ಕಾಪಟ್ಟೆ ಕಾಳಜಿ, ಸೋದರ, ಸೋದರಿಯರು, ನೆಂಟರಿಷ್ಟರನ್ನು ಚೆನ್ನಾಗಿ ನೋಡಿಕೊಳ್ಳುವ ವೆಂಕಟ್ ಅವರು ರೌದ್ರ, ಭಯಾನಕ ರಸ ಅಭಿನಯ ಕಂಡ ಪ್ರೇಕ್ಷಕರಿಗೆ ಅವರಲ್ಲಿರುವ ಕರುಣಾ, ಶಾಂತ ರಸದ ಪರಿಚಯವೂ ಆಗುತ್ತಿದೆ. [ಹುಚ್ಚನ ಕಂಡು ಕಿಚ್ಚ ಕೂಡಾ ಸೈಲಂಟ್, ವೆಂಕಟ್ ಟ್ರೆಂಡಿಂಗ್]

ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟ ಗಳಿಗೆಯಿಂದ ವೆಂಕಟ್ ಗುನುಗುತ್ತಿರುವ ಹಾಡುವ 'ಕಾವೇರಿ.. ಈಗ ಹಲವರ ತಲೆ ಕೊರೆಯುತ್ತಿದೆ. ಹಾಡಿನ ಸಾಹಿತ್ಯ ಎಲ್ಲಿದೆ? ಯಾವ ಚಿತ್ರದ ಹಾಡು? ಎಂಬ ಪ್ರಶ್ನೆಗಳು ಕೇಳಿ ಬರುತ್ತಿದೆ ಇತ್ತೀಚೆಗೆ 'ವೀಕೆಂಡ್ ವಿಥ್ ಸುದೀಪ್' ಕಾವೇರಿ ಹಾಡಿನ ಬಗ್ಗೆ ಹುಚ್ಚ ವೆಂಕಟ್ ಮಾತನಾಡಿದ್ದಾರೆ. [ಹುಚ್ಚ ವೆಂಕಟ್ v/s ಕಿಚ್ಚ ಫ್ಯಾನ್ಸ್ ಸಮರ]

Porki Huccha Venkat Kaveri Song Lyrics Bigg Boss Kannada 3

ಕಾವೇರಿ ಎಂದರೆ ಯಾರು, ವ್ಯಕ್ತಿಯೇ ಅಥವಾ ನದಿ ಬಗ್ಗೆ ಹಾಡುತ್ತಿದ್ದೀರಾ? ಎಂದು ಸುದೀಪ್ ಪ್ರಶ್ನಿಸುತ್ತಾರೆ.

ಹುಚ್ಚ ವೆಂಕಟ್ : ಕಾವೇರಿ ಹೆಸದಿನ ಹುಡ್ಗಿ ನನ್ನ ಜೀವನದಲ್ಲಿ ಬಂದಿದ್ರು. ಒಮ್ಮೆ ಅವರನ್ನು ಕರೆದುಕೊಂಡು ನಾನು ವಿಷ್ಣು ಸರ್(ಡಾ.ವಿಷ್ಣುವರ್ಧರ್ನ್) ಹತ್ತಿರ ಕರೆದುಕೊಂಡು ಹೋಗಿದ್ದೆ. ಫಸ್ಟ್ ಟೈಂ ಹೋದಾಗ ಮಳೆ ಬಂದಿರಲಿಲ್ಲ. ಸೆಕೆಂಡ್ ಟೈಂ ಹೋದಾಗ ಮಳೆ ಬಂತು. ಆಗ ವಿಷ್ಣು ಸರ್ ಗೆ ಹೇಳಿದೆ ನೋಡಿ ಸಾರ್ ಕಾವೇರಿ ಕರೆದುಕೊಂಡು ಬಂದೆ ಮಳೆನೂ ಬರುತ್ತಿದೆ ಶುಭ ಸೂಚನೆ ಅಂತಾ..

ಅದಕ್ಕೆ ವಿಷ್ಣು ಸರ್ ಹೇಳಿದ್ರು 'ಕಾವೇರಿ ಬರೀ ಕರ್ನಾಟಕಕ್ಕೆ ಸೀಮಿತವಾಗಿಬಾರದು ಇಡೀ ಪ್ರಪಂಚಕ್ಕೆ ಸಿಗಬೇಕು' ಅಂತಾ.
ಐ ಮಿಸ್ ಹರ್..ಕಾವೇರಿ ಬಗ್ಗೆ ಹಾಡಿದ್ರೆ ಎಲ್ಲರೂ ನಗ್ತಾರೆ, ಆದರೆ, ಕಾವೇರಿ ನೋಡಿ ಖುಷಿ ಪಡ್ತಾರೆ.

ನಿನ್ನ ಕಣ್ಣಿನ ಹನಿಯೂ ನಾನಮ್ಮ
ನಿನ್ನ ಹೆಜ್ಜೆಯ ಗುರುತು ನಾನಮ್ಮ
ನಿನ್ನ ಗೆಜ್ಜೆಯ ಸದ್ದು ನಾನಮ್ಮ
ನನ್ನ ಹೃದಯದ ಬಡಿತವೂ ನಾನಮ್ಮ
ನಾನೇ ಜೀವ... ನಾನೇ ಮಳೆಯೂ
ನಾನೇ ಮಳೆಯೂ.. ನಾನೇ ಮಳೆಯೂ...ನಾನೇ ಮಳೆಯೂ
ಕಾವೇರಿ ಪ್ರೀತಿಗೆ ಮತ್ತೆ ಹುಟ್ಟುವೆನು

ಕಾವೇರಿ ನಿನ್ನ ಮಡಿಲಲ್ಲಿ ಮಲಗುವೆ ನಾನಮ್ಮ
ಕಾವೇರಿ ಕಣ್ಣಿನ.. ನಿನ್ನ ಕಣ್ಣಿನ... ಹನಿಯು ನಾನಮ್ಮ
ನನ್ನ ಹೃದಯದ ನನ್ನ ಹೃದಯದ ಎದೆಬಡಿತವು ನೀನಮ್ಮ

English summary
Porki Huccha Venkat's Kaveri Song has become daily suprabhatha in Bigg Boss house this season. Venkat who penned and sung this song for his love lady Kaveri. Here is the song lyrics.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada