Don't Miss!
- News
Indira Canteens: ಇಂದಿರಾ ಕ್ಯಾಂಟೀನ್ಗಳಲ್ಲಿ ಕುಡಿಯಲು ನೀರಿಲ್ಲ, ಬಿಲ್ ಕಟ್ಟಿಲ್ಲ ಎಂದು ಸಂಪರ್ಕ ಕಡಿತ
- Automobiles
ಭಾರತದಲ್ಲಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಯಾವಾಗ? ಅತಿ ಹೆಚ್ಚು ರೇಂಜ್ ಕೊಡಲಿದೆಯಂತೆ..!
- Technology
ಭಾರತದಲ್ಲಿ ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ ಲ್ಯಾಪ್ಟಾಪ್ ಲಾಂಚ್; ಏನೆಲ್ಲಾ ಫೀಚರ್ಸ್ ಇವೆ ಗೊತ್ತಾ!?
- Sports
Ranji Trophy: ಕರ್ನಾಟಕ ಮಾರಕ ದಾಳಿಗೆ ತತ್ತರಿಸಿದ ಉತ್ತರಾಖಂಡ: 116 ರನ್ಗಳಿಗೆ ಆಲೌಟ್
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಿಗ್‌ಬಾಸ್ ಮುಗಿಯುತ್ತಲೇ ದಿವ್ಯಾ ಉರುಡುಗ ವಿರುದ್ಧ ಅಸೂಯೆ ಹೊರಹಾಕಿದ ಪ್ರಶಾಂತ್ ಸಂಬರ್ಗಿ
ಎರಡು ಬಾರಿ ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿರುವ ಪ್ರಶಾಂತ್ ಸಂಬರ್ಗಿ ವ್ಯಕ್ತಿತ್ವದ ಬಗ್ಗೆ ಬಿಗ್‌ಬಾಸ್ ಮನೆಯಲ್ಲಿ ಹಾಗೂ ಹೊರಗಡೆ ಬಹಳ ಭಿನ್ನ-ಭಿನ್ನ ಅಭಿಪ್ರಾಯಗಳಿವೆ.
ಬಿಗ್‌ಬಾಸ್ ಮನೆಯಲ್ಲಿ ಪ್ರಶಾಂತ್ ಒಬ್ಬ ಕುತಂತ್ರಿ, ಚಾಣಾಕ್ಷ, ಜಗಳಕೋರ, ಸ್ವಹಿತಾಸಕ್ತಿಯಷ್ಟೆ ಬಯಸುವವ ಎಂಬಿತ್ಯಾದಿ ಅಭಿಪ್ರಾಯಗಳಿವೆ. ಬಿಗ್‌ಬಾಸ್ ಮನೆಯ ಹೊರಗೂ ಸಹ ತುಸು ಅದೇ ವ್ಯಕ್ತಿತ್ವವೇ ಎನ್ನಲಾಗುತ್ತದೆ. ಆದರೆ ಹೊರಗೆ ಅವರು ಹಿಂದುಪರ ಹೋರಾಟಗಾರರಾಗಿಯೂ ಗುರುತಿಸಿಕೊಂಡಿದ್ದಾರೆ.
ಅದಕ್ಕೆ ಸಾಕ್ಷಿಯಂತೆ, ಕಳೆದ ಬಾರಿ ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದ ಬಳಿಕ ಪ್ರಶಾಂತ್ ಸಂಬರ್ಗಿ ಹಲವು ಸಹ ಸ್ಪರ್ಧಿಗಳ ಬಗ್ಗೆ ಹಗುರವಾಗಿ ಮಾತನಾಡಿದ್ದರು. ದಿವ್ಯಾ ಉರುಡುಗ ಬಗ್ಗೆಯೂ ಹಗುರವಾಗಿ ಮಾತನಾಡಿದ್ದರು. ಈಗ ಮತ್ತೆ ಅದನ್ನೇ ಮುಂದುವರೆಸಿದ್ದಾರೆ.

ದಿವ್ಯಾ ವಿರುದ್ಧ ಅಸೂಯೆ ಹೊರಹಾಕಿದರೇ ಪ್ರಶಾಂತ್ ಸಂಬರ್ಗಿ?
ಬಿಗ್‌ಬಾಸ್ 09 ರಲ್ಲಿ ಪ್ರವೀಣರ ಕೋಟಾದಲ್ಲಿ ಬಿಗ್‌ಬಾಸ್‌ನಲ್ಲಿ ಭಾಗವಹಿಸಿದ್ದ ಪ್ರಶಾಂತ್ ಸಂಬರ್ಗಿ 77 ದಿನಗಳ ಕಾಲ ಮನೆಯಲ್ಲಿದ್ದು ಬಳಿಕ ಎಲಿಮಿನೇಟ್ ಆಗಿದ್ದರು. ಆದರೆ ಈ ಹಿಂದಿನ ಸೀಸನ್‌ನಲ್ಲಿಯೂ ಅವರ ಸಹಸ್ಪರ್ಧಿಯಾಗಿದ್ದ ದಿವ್ಯಾ ಉರುಡುಗ ಈ ಬಾರಿಯೂ ಪ್ರಶಾಂತ್‌ರ ಸಹ ಸ್ಪರ್ಧಿಯಾಗಿದ್ದರಲ್ಲದೆ ಫಿನಾಲೆ ವರೆಗೂ ಬಂದಿದ್ದರು. ಇದೀಗ ಬಿಗ್‌ಬಾಸ್ ಮುಗಿದ ಮೇಲೆ ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಪ್ರಶಾಂತ್ ಸಂಬರ್ಗಿ, ದಿವ್ಯಾ ಉರುಡುಗ ವಿರುದ್ಧ ಮತ್ತೊಮ್ಮೆ ತಮ್ಮ ಅಸೂಯೆ ಹೊರಹಾಕಿದ್ದಾರೆ.

ಅದೃಷ್ಟದ ಆಧಾರದ ಮೇಲೆ ಬಂದ ದಿವ್ಯಾ: ಪ್ರಶಾಂತ್ ಸಂಬರ್ಗಿ
ಫಿನಾಲೆಯ ಹಿಂದಿನ ದಿನ ದಿವ್ಯಾ ಉರುಡುಗ ಬಿಗ್‌ಬಾಸ್‌ನಿಂದ ಎಲಿಮಿನೇಟ್ ಆಗಿದ್ದನ್ನು ಟ್ರೋಲ್ ಪೇಜೊಂದು ಸಂಭ್ರಮಿಸಿದ್ದು, 'ದಿವ್ಯಾ ಉರುಡುಗ ಎಲಮಿನೇಟ್ ಆಗಿದ್ದಾರಂತೆ ಹಾಕ್ರೊ ಸ್ಟೆಪ್ಪು' ಎಂದು ಪೋಸ್ಟ್ ಹಾಕಿದ್ದಾರೆ. ಆ ಪೋಸ್ಟ್ ಅನ್ನು ಪ್ರಶಾಂತ್ ಸಂಬರ್ಗಿ ಹಂಚಿಕೊಂಡಿದ್ದು, ''ಈ ಬಗ್ಗೆ ಹೆಚ್ಚು ಹೆಚ್ಚೇನೂ ಇಲ್ಲ. ಬಿಬಿಕೆ09 ರಲ್ಲಿ ಅದೃಷ್ಟದ ಮೇಲೆ ಪ್ರಯಾಣ ಮಾಡಿದ ಬಿಗ್‌ಬಾಸ್ ಸ್ಪರ್ಧಿ'' ಎಂದಿದ್ದಾರೆ. ಆ ಮೂಲಕ ದಿವ್ಯಾ ಉರುಡುಗ ಕೇವಲ ಅದೃಷ್ಟದ ಬಲದಿಂದ ಫಿನಾಲೆಯ ವರೆಗೂ ಹೋಗಿದ್ದಾರೆ. ಅವರಿಗೆ ಪ್ರತಿಭೆ ಇರಲಿಲ್ಲ. ಬಿಗ್‌ಬಾಸ್‌ನಲ್ಲಿ ಶ್ರಮ ಪಡಲಿಲ್ಲ ಎಂದು ಪರೋಕ್ಷವಾಗಿ ಪ್ರಶಾಂತ್ ಸಂಬರ್ಗಿ ಹೇಳಿದ್ದಾರೆ.

ಮೊದಲಿನಿಂದಲೂ ದಿವ್ಯಾ ವಿರುದ್ಧ ಆರೋಪ
ಪ್ರಶಾಂತ್ ಹಾಗೂ ದಿವ್ಯಾರ ನಡುವೆ ಎಲ್ಲವೂ ಸರಿಯಿರಲಿಲ್ಲ. ಕಳೆದ ಸೀಸನ್ ಮುಗಿದಾಗಲೂ ಪ್ರಶಾಂತ್ ಸಂಬರ್ಗಿ, ದಿವ್ಯಾ ಹಾಗೂ ಇತರರ ವಿರುದ್ಧ ಮಾಧ್ಯಮಗಳ ಮುಂದೆ ಆರೋಪ ಮಾಡಿದ್ದರು. ಈ ಸೀಸನ್‌ನಲ್ಲಿ ಸಹ ಬಿಗ್‌ಬಾಸ್ ಒಳಗೆ ಇದ್ದಾಗಲೂ ಆಗಾಗ್ಗೆ ದಿವ್ಯಾ ಉರುಡುಗ ಬಗ್ಗೆ ತಕರಾರು ಎತ್ತುತ್ತಲೇ ಇದ್ದರು. ಅವರನ್ನು ನಾಮಿನೇಟ್ ಮಾಡುವುದು, ಕಳಪೆ ನೀಡುವುದು ನಡೆಯುತ್ತಲೇ ಇತ್ತು. ಇದು ದಿವ್ಯಾ ಬಗ್ಗೆ ಅವರ ಅಸಹಿಷ್ಣುತೆಯನ್ನು ತೋರಿಸುತ್ತಿತ್ತು. ಈಗ ಎಲ್ಲವೂ ಮತ್ತೊಮ್ಮೆ ಬಹಿರಂಗವಾಗಿದೆ.

ರೂಪೇಶ್ ಶೆಟ್ಟಿ ಚಾಂಪಿಯನ್
ಇನ್ನುಳಿದಂತೆ ಬಿಗ್‌ಬಾಸ್ ಸೀಸನ್ 09 ಡಿಸೆಂಬರ್ 1 ರ ಮಧ್ಯ ರಾತ್ರಿ ಮುಗಿದಿದ್ದು, ರೂಪೇಶ್ ಶೆಟ್ಟಿ ಹಾಗೂ ರಾಕೇಶ್ ಅಡಿಗ ಅವರು ಫೈನಲಿಸ್ಟ್‌ಗಳಾಗಿದ್ದರು. ಅಂತಿಮ ಜಯ ದೊರೆತಿದ್ದು ರೂಪೇಶ್ ಶೆಟ್ಟಿಗೆ. ಬಿಗ್‌ಬಾಸ್ ಒಟಿಟಿಯಲ್ಲಿಯೂ ರೂಪೇಶ್ ಶೆಟ್ಟಿ ಅವರೇ ಗೆದ್ದಿದ್ದರು. ದಿವ್ಯಾ ಉರುಡುಗ, ದೀಪಿಕಾ ದಾಸ್ ಅವರುಗಳು ಫಿನಾಲೆ ವಾರದ ವರೆಗೆ ಬಂದಿದ್ದರು. ಆದರೆ ಕೊನೆಯ ಹಂತದಲ್ಲಿ ದಿವ್ಯಾ ಹಾಗೂ ದೀಪಿಕಾ ಅವರುಗಳು ಮನೆಯಿಂದ ಹೊರನಡೆದರು.