For Quick Alerts
  ALLOW NOTIFICATIONS  
  For Daily Alerts

  ಕಾಲೇಜಿನಲ್ಲಿ ಓದುತ್ತಿದ್ದಾಗಲೇ 'ಆ ನಟ'ನ ಅಭಿಮಾನಿಯಂತೆ ಪ್ರೇಮಾ

  |
  Weekend with Ramesh Season 4: ಕನ್ನಡ ನಟಿ ಪ್ರೇಮಾ ಈ ಸ್ಟಾರ್ ನಟನ ಅಪ್ಪಟ ಅಭಿಮಾನಿಯಂತೆ | FILMIBEAT KANNADA

  ಕನ್ನಡ ಚಿತ್ರರಂಗ ಕಂಡ ಅದ್ಭುತ ನಟಿ ಪ್ರೇಮಾ. ಚಂದನವನದ ಚಂದ್ರಮುಖಿ ನಟಿ ಪ್ರೇಮಾ ಸುಮಾರು ನೂರು ಚಿತ್ರಗಳಲ್ಲಿ ಅಭಿನಯಸಿದ್ದಾರೆ. ದಶಕಗಳಿಗೂ ಹೆಚ್ಚು ಕಾಲ ಟಾಪ್ ನಟಿಯಾಗಿ ಚಿತ್ರರಂಗವನ್ನು ಆಳಿದ ಪ್ರೇಮಾ ಅವರಿಗೆ ಕನ್ನಡದ ಒಬ್ಬ ಸ್ಟಾರ್ ನಟನ ಮೇಲೆ ಅತಿಯಾದ ಅಭಿಮಾನ. ಈ ಬಗ್ಗೆ ವೀಕೆಂಡ್ ವಿತ್ ರಮೇಶ್ 4 ಕಾರ್ಯಕ್ರಮದಲ್ಲಿ ಪ್ರೇಮಾ ಹೇಳಿಕೊಂಡಿದ್ದಾರೆ.

  ಪ್ರೇಮಾ ನೆಚ್ಚಿನ ನಟ ಮತ್ಯಾರು ಅಲ್ಲ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ಕಾಲೇಜು ದಿನಗಳಲ್ಲಿಯೆ ಪ್ರೇಮಾ ಅವರು ಶಿವರಾಜ್ ಕುಮಾರ್ ಅಭಿಮಾನಿಯಂತೆ. ಎಷ್ಟರ ಮಟ್ಟಿಗೆ ಅಂದ್ರೆ ಶಿವರಾಜ್ ಕುಮಾರ್ ಸ್ಟೈಲ್ ಅನ್ನು ಯತಾವತ್ತಾಗಿ ಅನುಕರಣೆ ಮಾಡುತ್ತಿದ್ದರಂತೆ. ಹೇರ್ ಸ್ಟೈಲ್, ವಾಕಿಂಗ್ ಸ್ಟೈಲ್ ಸೇರಿದಂತೆ ಎಲ್ಲವನ್ನು ಅಷ್ಟು ಇಷ್ಟಪಟ್ಟು ಅನುಕರಣೆ ಮಾಡುತ್ತಿದ್ದರಂತೆ ಪ್ರೇಮಾ.

  ಗಂಡ ಇಲ್ಲ ಮಗು ಇಲ್ಲ, ಆರೋಗ್ಯ ಚೆನ್ನಾಗಿದೆ: ಪ್ರೇಮಾ ಕುರಿತು ಸದ್ಯಕ್ಕೆ ಇಷ್ಟೇ ಸತ್ಯಗಂಡ ಇಲ್ಲ ಮಗು ಇಲ್ಲ, ಆರೋಗ್ಯ ಚೆನ್ನಾಗಿದೆ: ಪ್ರೇಮಾ ಕುರಿತು ಸದ್ಯಕ್ಕೆ ಇಷ್ಟೇ ಸತ್ಯ

  ಅಂದ್ಹಾಗೆ ಪ್ರೇಮಾ, ಶಿವಣ್ಣ ಲಾಂಗ್ ಹಿಡಿಯುವ ಶೈಲಿಯನ್ನು ಅಷ್ಟೆ ಸೊಗಸಾಗಿ ತೋರಿಸುತ್ತಾರೆ. ಕಾಲೇಜು ದಿನಗಳಲ್ಲಿಯೇ ಸೆಂಚುರಿ ಸ್ಟಾರ್ ಅಭಿಮಾನಿಯಾಗಿದ್ದ ಪ್ರೇಮಾ ಅವರು ತನ್ನ ಸಿನಿ ಜೀವನದ ಮೊದಲ ಸಿನಿಮಾವನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆಯೆ ಪ್ರಾರಂಭಿಸಿದರು. 'ಸೌವ್ಯಸಾಚಿ' ಸಿನಿಮಾ ಮೂಲಕ ಪ್ರೇಮಾ ನೆಚ್ಚಿನ ನಟ ಶಿವಣ್ಣನಿಗೆ ನಾಯಕಿಯಾಗಿ ಅಭಿನಯಿಸಿದರು.

  ಅದೃಷ್ಟ ಅಂದ್ರೆ ಎರಡನೆ ಸಿನಿಮಾ ಕೂಡ ಶಿವರಾಜ್ ಕುಮಾರ್ ಜೊತೆಯೆ ಮಾಡುವ ಅವಕಾಶ ಪ್ರೇಮಾ ಅವರದಾಗಿತ್ತು. ಬ್ಲಾಕ್ ಬಸ್ಟರ್ 'ಓಂ' ಸಿನಿಮಾದಲ್ಲಿ ಶಿವಣ್ಣ ಮತ್ತು ಪ್ರೇಮಾ ಜೋಡಿ ಎರಡನೆ ಬಾರಿ ಒಂದಾಗಿತ್ತು. ಆ ನಂತರ ಶಿವಣ್ಣ ಮತ್ತು ಪ್ರೇಮಾ ಜೋಡಿ ಸ್ಯಾಂಡಲ್ ವುಡ್ ನ ಹಿಟ್ ಜೋಡಿಯಾಗಿ ಹೊರಹೊಮ್ಮಿತ್ತು. 'ನಮ್ಮೂರಮಂದಾರ ಹೂವೇ ಚಿತ್ರದ ಮೂಲಕ ಮೂರನೆ ಬಾರಿ ಶಿವಣ್ಣ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ಪ್ರೇಮಾ ಪಾಲಿಗೆ ಒಲಿದು ಬಂದು. ಶಿವಣ್ಣ ಮತ್ತು ಪ್ರೇಮಾ ಜೋಡಿಯ ಸಿನಿಮಾಗಳು ಸೂಪರ್ ಹಿಟ್ ಆಗಿವೆ.

  ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್ ಕೂಡ ಪ್ರೇಮಾ ಅವರ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ. ಕನ್ನಡ ಚಿತ್ರರಂಗದ ಅದ್ಭುತ ನಟಿ ಎಂದು ಹೇಳಿದ್ದಾರೆ. ಅಲ್ಲದೆ ವೇಧಿಕೆ ಮೇಲೆ ಪ್ರೇಮಾ ಶಿವಣ್ಣ ಅವರ ದಿ ವಿಲನ್ ಚಿತ್ರದ ಹಾಡಿಗೆ ಸ್ಟೆಪ್ ಹಾಕುವ ಮೂಲಕ ಮತ್ತೊಮ್ಮೆ ಶಿವಣ್ಣನ ಮೇಲಿನ ಅಭಿಮಾನ ತೋರಿಸಿದ್ದಾರೆ.

  English summary
  Kannada actress Prema is very big fan of Hatrick hero Shivaraj Kumar. She was imitating Shivanna's hairstyle and walking style.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X