»   » 'ಹುಚ್ಚ ವೆಂಕಟ್ ಸೇನೆ'ಗೆ ಬಲಗಾಲಿಟ್ಟು ಬಂದ ಪ್ರಿಯಾಮಣಿ

'ಹುಚ್ಚ ವೆಂಕಟ್ ಸೇನೆ'ಗೆ ಬಲಗಾಲಿಟ್ಟು ಬಂದ ಪ್ರಿಯಾಮಣಿ

Posted By:
Subscribe to Filmibeat Kannada

'ಬಿಗ್ ಬಾಸ್' ಮನೆಯಲ್ಲಿ ನಿಮ್ಮ ಫೇವರಿಟ್ ಸ್ಪರ್ಧಿ ಯಾರು? ಈ ಪ್ರಶ್ನೆಗೆ ಬಹುತೇಕ ಜನ ಹುಚ್ಚ ವೆಂಕಟ್ ಅಂತಲೇ ಉತ್ತರ ಕೊಡ್ತಾರೆ. ಅಷ್ಟರಮಟ್ಟಿಗೆ ಮನೆಯಲ್ಲಿ ಗದ್ದಲ-ಗಲಾಟೆ ಜೊತೆಗೆ ಮನರಂಜನೆ ನೀಡ್ತಿದ್ದಾರೆ ನಿಮ್ಮೆಲ್ಲರ ಪ್ರೀತಿಯ ಹುಚ್ಚ ವೆಂಕಟ್.

ಹುಚ್ಚ ವೆಂಕಟ್ ರವರ ಮನರಂಜನೆಗೆ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಕೂಡ ಫಿದಾ ಆಗಿರುವುದನ್ನ ನಾವೇ ನಿಮಗೆ ಹೇಳಿದ್ವಿ. ಇದೀಗ ನಟಿ ಪ್ರಿಯಾಮಣಿ ಸರದಿ. ['ಹುಚ್ಚ ವೆಂಕಟ್' ಬಗ್ಗೆ ರಘು ದೀಕ್ಷಿತ್ ಹೇಳಿದ್ದೇನು?]

Priyamani wants Huccha Venkat to win Bigg Boss Kannada 3 reality show

'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಫೇವರಿಟ್ ಕನ್ಟೆಸ್ಟೆಂಟ್ ಯಾರು ಅನ್ನುವ ಪ್ರಶ್ನೆಗೆ ನಟಿ ಪ್ರಿಯಾಮಣಿ ಮುಲಾಜಿಲ್ದೆ ಕೊಟ್ಟ ಉತ್ತರ 'ಹುಚ್ಚ ವೆಂಕಟ್'.

ಹೌದು, ನಟಿ ಪ್ರಿಯಾಮಣಿಗೆ ಹುಚ್ಚ ವೆಂಕಟ್ ಅಂದ್ರೆ ಸಖತ್ ಇಷ್ಟವಂತೆ. ಅದಕ್ಕೆ ಈ ಬಾರಿ ಅವರೇ 'ಬಿಗ್ ಬಾಸ್' ವಿನ್ನರ್ ಆಗ್ಬೇಕು ಅನ್ನೋದು ಪ್ರಿಯಾಮಣಿ ಬಯಕೆ. [ಯಾರೀ ಹುಚ್ಚ ವೆಂಕಟ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

'ಸೂಪರ್ ಸಂಡೆ, ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟಿ ಪ್ರಿಯಾಮಣಿ ಹುಚ್ಚ ವೆಂಕಟ್ ಬಗ್ಗೆ ಹೇಳಿದಿಷ್ಟು. ಇದನ್ನೆಲ್ಲಾ ಕೇಳ್ತಿದ್ದ ಹಾಗೆ, ಹುಚ್ಚ ವೆಂಕಟ್ ಸೇನೆ, ಪ್ರಿಯಾಮಣಿ ಅವರಿಗೆ ಆತ್ಮೀಯ ಆಮಂತ್ರಣ ನೀಡಿದೆ. ಒಟ್ನಿಲ್ಲಿ, ಹುಚ್ಚ ವೆಂಕಟ್ ಹವಾ ಎಲ್ಲಾ ಕಡೆ ಹೇಗಿದೆ ಅನ್ನೋದಕ್ಕೆ ಇದು ಸಣ್ಣ ಸ್ಯಾಂಪಲ್ ಅಷ್ಟೆ.!

English summary
Multilingual Actress Priyamani wants Huccha Venkat to win Bigg Boss Kannada 3 reality show. Priyamani has shared her thoughts about Huccha Venkat in 'Super Sunday with Kiccha Sudeep' show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada