»   » ಯಶ್ ಹಾಕಿದ ಸವಾಲಿಗೆ ಪಬ್ಲಿಕ್ ಟಿವಿಯ ಎಚ್.ಆರ್.ರಂಗನಾಥ್ ಏನಂತಾರೆ.?

ಯಶ್ ಹಾಕಿದ ಸವಾಲಿಗೆ ಪಬ್ಲಿಕ್ ಟಿವಿಯ ಎಚ್.ಆರ್.ರಂಗನಾಥ್ ಏನಂತಾರೆ.?

By: ಒನ್ಇಂಡಿಯಾ ಕನ್ನಡ ಸಿಬ್ಬಂದಿ
Subscribe to Filmibeat Kannada

ಕನ್ನಡ ನ್ಯೂಸ್ ಚಾನೆಲ್ ಗಳ ವಿರುದ್ಧ ಸಿಡಿದೆದ್ದು, ನಟ ಯಶ್ ಓಪನ್ ಚಾಲೆಂಜ್ ಮಾಡಿದ್ದು, ಅದನ್ನ ಎಚ್.ಆರ್.ರಂಗನಾಥ್ ಸಾರಥ್ಯದ ಪಬ್ಲಿಕ್ ಟಿವಿ ಸ್ವೀಕರಿಸಿದ್ದು, ಅದಕ್ಕೆ ಪ್ರತಿಯಾಗಿ 'ಶಹಬ್ಬಾಸ್ ಪಬ್ಲಿಕ್ ಟಿವಿ' ಎನ್ನುತ್ತಾ ಯಶ್ ವಿಡಿಯೋ ಮಾಡಿದ್ದು ನಿಮಗೆಲ್ಲಾ ಗೊತ್ತೇ ಇದೆ. [ಯಶ್ v/s ಕನ್ನಡ ಮಾಧ್ಯಮ: ಕಥೆ ಶುರು ಆಗಿದ್ದು ಎಲ್ಲಿಂದ?]

ನಿನ್ನೆ ಬೆಳಗ್ಗಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ''ಬರೀ ಕಾರ್ಯಕ್ರಮ ಮಾತ್ರ ಮಾಡೋದಲ್ಲ, ರೈತರ ಪರವಾಗಿ ಜಾಹೀರಾತು ಕೊಡಬೇಕು. ರೈತರ ಪರ ಅಭಿಯಾನ ಮಾಡಬೇಕು. ಅದೂ ಕೂಡ ಪ್ರೈಮ್ ಟೈಮ್ ನಲ್ಲಿ...ನೀವು ಇದಕ್ಕೆ ರೆಡಿ ಇದ್ರೆ, ರಂಗನಾಥ್ ಸರ್ ನನಗೆ ಭರವಸೆ ಕೊಟ್ಟರೆ ನಾನು ಬರ್ತೀನಿ'' ಅಂತ ಯಶ್ ಹೇಳಿದ್ದರು. [ಖಾಸಗಿ ನ್ಯೂಸ್ ಚಾನೆಲ್ ವಿರುದ್ಧ ತೊಡೆ ತಟ್ಟಿ ನಿಂತ ಯಶ್]

Public TV H.R.Ranganath speaks about Yash's challenge

ಇದನ್ನ ವೀಕ್ಷಿಸಿರುವ ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್.ರಂಗನಾಥ್, ''ನಟ ಯಶ್ ಚರ್ಚೆಗೆ ಆಹ್ವಾನ ನೀಡಿರುವುದು ಒಳ್ಳೆಯ ಬೆಳವಣಿಗೆ. ಪ್ರಜಾಪ್ರಭುತ್ವದಲ್ಲಿ ಇಂತಹ ಚರ್ಚೆ ಅಗತ್ಯ. ಮಾಧ್ಯಮದವರು ಪ್ರಶ್ನಾತೀತರಲ್ಲ. ಯಾರದ್ದು ಸರಿ, ಯಾರದ್ದು ತಪ್ಪು ಅಂತ ಚರ್ಚೆ ನಡೆಯಲಿ. ಈ ಚರ್ಚೆಗೆ ಸಂಬಂಧಿಸಿದ ಕಾರ್ಯಕ್ರಮ ನಿರೂಪಕರಾಗಿ ಚಿತ್ರರಂಗ ಹಾಗೂ ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಪಡದವರು ಕಾರ್ಯ ನಿರ್ವಹಿಸಲಿ. ಬೇಕಾದರೆ ಅಂಥವರನ್ನು ನಟ ಯಶ್ ರವರೇ ಆಯ್ಕೆ ಮಾಡಲಿ'' ಅಂತ ಹೇಳಿಕೆ ನೀಡಿದ್ದಾರೆ.

English summary
Public TV H.R.Ranganath has spoken about Kannada Actor Yash's challenge over conducting Programmes which will facilitate Farmers during Prime Time slot.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada