ಜನಶ್ರೀ ಚಾನಲ್ಲಿಗೆ ಪಬ್ಲಿಕ್ ಟಿವಿ ರಂಗಾ

ಹೌದು, ಜನಶ್ರೀಗೆ ರಂಗನಾಥ್ ಬಂದಿರುವುದು ನಿಜ. ಈ ಭೇಟಿ ಕೇವಲ ಸ್ಟುಡಿಯೋ ನೋಡಲಿಕ್ಕೆ ಎನ್ನುತ್ತಾರೆ ಜನಶ್ರೀ ಸಿಬ್ಬಂದಿ. ಪಬ್ಲಿಕ್ ಟಿವಿಯನ್ನು ರಂಗನಾಥ್ ಕನ್ನಡದ ನಂಬರ್ 1 ಚಾನಲ್ ಮಾಡಲು ಹೊರಟಿದ್ದಾರೆ ಎನ್ನುವುದಂತೂ ಸತ್ಯ. ಇದಕ್ಕಾಗಿ ಬಲಿಷ್ಠ ತಂಡವನ್ನು ಕಟ್ಟುತ್ತಿರುವುದೂ ಅಷ್ಟೇ ನಿಜ.
ಆದರೆ ಅವರು ಜನಶ್ರೀಗೆ ಯಾಕೆ ಹೋಗಿದ್ದರು ಎನ್ನುವುದು ಅಷ್ಟೇ ಕುತೂಹಲ. ಇವೆಲ್ಲದರ ಮಧ್ಯೆಯೇ, ಬೇರೆಬೇರೆ ಚಾನಲ್ಲುಗಳಿಗೆ ಭೇಟಿ ನೀಡಿ, ಅಲ್ಲಿನ ಸ್ಟುಡಿಯೋ, ಸೆಟ್ ಅಪ್ ಕಾರ್ಯವೈಖರಿ ಬಗ್ಗೆ ಆದಷ್ಟೂ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ನಮ್ಮ ಕಿರುತೆರೆ ಮೂಲಗಳು ಹೇಳಿವೆ.
ಒಂದು ಚಾನಲ್ ಆರಂಭವಾದರೆ ಅವರು ನಮಗೆ ಪ್ರತಿಸ್ಪರ್ಧಿಗಳು, ನಮಗೆ ಟಿಆರ್‌ಪಿ ಕಡಿಮೆ ಆಗುತ್ತದೆ ಎನ್ನುವ ಕಾಲಘಟ್ಟದಲ್ಲಿ ರಂಗನಾಥ್ ಅವರ ಸ್ಟುಡಿಯೋ ರೌಂಡ್ ಅಪ್ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಹೀಗೆ, ಎಲ್ಲರೂ ಸೇರಿ ಸ್ಪರ್ಧಿಗಳಂತೆ ಕೆಲಸ ಮಾಡುವುದನ್ನು ಬಿಟ್ಟು ಜನರಿಗಾಗಿ ಕೆಲಸ ಮಾಡಿ, ತನ್ಮೂಲಕ ಉತ್ತಮ ಸಮಾಜ ಕಟ್ಟಲು ಒಟ್ಟಾಗಿ ದುಡಿಯಬಹುದು, ಅಲ್ಲವೇ?
More from Filmibeat
English summary
Chairman and Managing director of Public TV, Journalist H R Ranganath pays visit to Janashree Channel, why?


Click it and Unblock the Notifications











