Don't Miss!
- News
ಉತ್ತರ ಕೊರಿಯಾ ಅಣ್ವಸ್ತ್ರ ಧಮ್ಕಿ ನಡುವೆ ಜಪಾನ್ಗೆ ಬಂದಿಳಿದ ಬೈಡನ್
- Sports
ಜಸ್ಪ್ರೀತ್ ಬುಮ್ರಾ ದಾಖಲೆ: ಸತತ ಏಳು ಸೀಸನ್ಗಳಲ್ಲಿ ಈ ಸಾಧನೆ ಮಾಡಿದ ಏಕೈಕ ಬೌಲರ್
- Technology
ಎಸ್ಬಿಐ ಬ್ಯಾಂಕ್ ಗ್ರಾಹಕರಿಗೆ ಎಚ್ಚರಿಕೆಯ ಸಂದೇಶ ನೀಡಿದ ಸರ್ಕಾರ!
- Finance
Gold Rate Today: ಸತತವಾಗಿ ಚಿನ್ನದ ದರ ಹೆಚ್ಚಳ, ಮೇ 22ರ ಬೆಲೆ ಪರಿಶೀಲಿಸಿ
- Education
ICSI CS Admit Card 2022 : ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Automobiles
ಕೆಟಿಎಂ ಡ್ಯೂಕ್ 390 ಪ್ರತಿಸ್ಪರ್ಧಿ 2022ರ ಕಿಮ್ಕೊ ಕೆ ರೈಡರ್ 400 ಬೈಕ್ ಅನಾವರಣ
- Lifestyle
ಮೇ 22ರಿಂದ ರಿಂದ ಮೇ 28ರ ವಾರ ಭವಿಷ್ಯ: ಈ ರಾಶಿಯ ಉದ್ಯೋಗಿಗಳು ಯಾವುದೇ ಕೆಲಸದಲ್ಲೂ ನಿರ್ಲಕ್ಷ್ಯ ಮಾಡಬೇಡಿ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಪ್ಪು'ಯುವರತ್ನ' ಪ್ರಸಾರದ ವೇಳೆ ಟಿವಿಗಳಿಗೆ ಆರತಿ ಬೆಳಗಿ ಸಂಭ್ರಮಿಸಿದ ಅಭಿಮಾನಿಗಳು: ವಿಡಿಯೋ ವೈರಲ್
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಸಿನಿಮಾ ಹೆಸರಿಗೆ ತಕ್ಕಂತೆ ಪವರ್‌ಫುಲ್. ಮಾಸ್ ಸಿನಿಮಾ ಇಷ್ಟ ಪಡುವವರಿಗೆ ಮಾಸ್. ಕ್ಲಾಸ್ ಸಿನಿಮಾ ಇಷ್ಟ ಪಡುವವರಿಗೆ ಕ್ಲಾಸ್. ಅದಕ್ಕೆ ಅಪ್ಪು ಅಂದರೆ, ಚಿಕ್ಕ ಮಕ್ಕಳಿಂದ ಹಿರಿಯರವರೆಗೂ ಇಷ್ಟ ಪಡುತ್ತಿದ್ದರು. ಹಾಗಂತ ಮಾಸ್, ಕ್ಲಾಸ್ ಅಂಶಗಳಷ್ಟೇ ಅಲ್ಲ. ಸಮಾಜಕ್ಕೊಂದು ಅದ್ಭುತ ಸಂದೇಶವನ್ನೂ ನೀಡುತ್ತಿದ್ದರು. ಅಂತಹ ಸಿನಿಮಾಗಳಲ್ಲೊಂದು 'ಯುವರತ್ನ'.
ಪುನೀತ್ ರಾಜ್‌ಕುಮಾರ್ ನಿಧನಕ್ಕೂ ಮುನ್ನ ಬಿಡುಗಡೆಗೊಂಡ ಕೊನೆಯ ಸಿನಿಮಾ. ಅಭಿಮಾನಿಗಳು ಥಿಯೇಟರ್‌ಗಳಲ್ಲಿ ಮುಗಿಬಿದ್ದು ಸಿನಿಮಾ ನೋಡುತ್ತಿದ್ದರು. ಅದೇ ವೇಳೆ ಲಾಕ್‌ಡೌನ್ ಆಗಿದ್ದರಿಂದ ಚಿತ್ರಮಂದಿರದಲ್ಲಿ ಹೆಚ್ಚು ದಿನ ಪ್ರದರ್ಶನ ಕಂಡಿರಲಿಲ್ಲ. ಈಗ ಸಂಕ್ರಾಂತಿ ಹಬ್ಬಕ್ಕೆ ಉದಯ ಟಿವಿಯಲ್ಲಿ 'ಯುವರತ್ನ' ಪ್ರಸಾರ ಆಗಿತ್ತು. ಈ ವೇಳೆ ಮನೆಯಲ್ಲೇ ಅಪ್ಪು ಅಭಿಮಾನಿಗಳ ಸಂಭ್ರಮಿಸಿದ ವಿಡಿಯೋ ವೈರಲ್ ಆಗುತ್ತಿದೆ.

'ಯುವರತ್ನ'ನಿಗೆ ಅಪ್ಪು ಫ್ಯಾನ್ಸ್ ಮರುಳು
'ಯುವರತ್ನನ' ಅಪ್ಪು ಅಭಿಮಾನಿಗಳು ಎಂದಿಗೂ ಮರೆಯಲಾಗದ ಸಿನಿಮಾ. ಪುನೀತ್ ರಾಜ್‌ಕುಮಾರ್ ಹಿಂದೆಂದೂ ಇಂತಹದ್ದೊಂದು ಪಾತ್ರದಲ್ಲಿ ಕಂಡಿರಲಿಲ್ಲ. ಕಾಲೇಜು ಉಪನ್ಯಾಸಕನಾಗಿ ಅಪ್ಪು ಕಾಣಿಸಿಕೊಂಡಿದ್ದ ಅಪ್ಪು ಹೊಸ ಅವತಾರಕ್ಕೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದರು. ಹೊಸ ಅವತಾರದಲ್ಲಿ ನೆಚ್ಚಿನ ನಟನನ್ನ ನೋಡಿ ಕುಣಿದು ಕುಪ್ಪಳಿಸಿದ್ದರು. ಆದರೆ, ಅಪ್ಪು ಅಕಾಲಿಕ ಮರಣ ಇದೇ ಅಭಿಮಾನಿಗಳು ನೋವಿನಲ್ಲಿ ಕಾಲ ಕಳೆಯುವಂತೆ ಮಾಡಿದೆ. ಹೀಗಾಗಿ ಉದಯ ಟಿವಿಯಲ್ಲಿ ಪ್ರಸಾರ ಆಗಿದ್ದ ಯುವರತ್ನ ಸಿನಿಮಾ ವೇಳೆ ಪುನೀತ್ ಅಭಿಮಾನಿಗಳು ಸಂಭ್ರಮಿಸಿದ್ದಾರೆ.
|
'ಯುವರತ್ನ' ಪ್ರಸಾರ: ಟಿವಿಗೆ ಆರತಿ ಬೆಳಗಿದ ಫ್ಯಾನ್ಸ್
ಸಂಕ್ರಾಂತಿ ಹಬ್ಬಕ್ಕೆ ಉದಯ ಟಿವಿಯಲ್ಲಿ 'ಯುವರತ್ನ' ಸಿನಿಮಾ ನಿನ್ನೆ (ಜನವರಿ 15) ಪ್ರದರ್ಶನ ಕಂಡಿತ್ತು. ಕಿರುತೆರೆಯಲ್ಲಿ ಅಪ್ಪು ಸಿನಿಮಾ ಪ್ರಸಾರ ಆರಂಭ ಆಗುತ್ತಿದ್ದಂತೆ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಟಿವಿ ಸ್ಕ್ರೀನ್‌ಗೆ ಆರತಿ ಬೆಳಗಿದ್ದಾರೆ. ಕೆಲವರು ಟಿವಿ ಪರದೆಗೆ ಹೂವಿನ ಹಾರ ಹಾಕಿ ಆರತಿ ಬೆಳೆಗಿದ್ದಾರೆ. ಕರ್ನಾಟಕದ ಮೂಲೆ ಮೂಲೆಯಲ್ಲೂ ಇದೇ ದೃಶ್ಯ ಕಂಡುಬಂದಿದ್ದು, ಅಪ್ಪು ಫ್ಯಾನ್ಸ್ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.

ಅಪ್ಪು ನೆನಪಿನಲ್ಲಿಯೇ 'ಯುವರತ್ನ' ಪ್ರದರ್ಶನ
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಿಧನದ ಬಳಿಕ 'ಯುವರತ್ನ' ಸಿನಿಮಾ ಬಿಡುಗಡೆ ಮಾಡುವಂತೆ ಅಭಿಮಾನಿಗಳು ಪಟ್ಟು ಹಿಡಿದಿದ್ದರು. ಹೀಗಾಗಿ ಕೆಲವು ಚಿತ್ರಮಂದಿರಗಳಲ್ಲಿ 'ಯುವರತ್ನ' ಸಿನಿಮಾವನ್ನು ಸ್ವಯಂ ಪ್ರೇರಿತವಾಗಿ ಬಿಡುಗಡೆ ಮಾಡಲಾಗಿತ್ತು. ಕೆಲವೆಡೆ ಸಿನಿಮಾವನ್ನು ಉಚಿತವಾಗಿ ಅಭಿಮಾನಿಗಳಿಗೆ ತೋರಿಸಿದ್ದರು. ಈ ವೇಳೆ ಕರ್ನಾಟಕದಾದ್ಯಂತ ಸಿನಿಮಾ ಬಿಡುಗಡೆ ಮಾಡುವಂತೆ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಬಳಿಕ ಬೇಡಿಕೆ ಇಟ್ಟಿದ್ದರು.

ರಿಲೀಸ್ ಆದ 9 ದಿನಕ್ಕೆ ಓಟಿಟಿ ರಿಲೀಸ್
'ಯುವರತ್ನ' ಬಿಡುಗಡೆಯಾದ ಕೆಲವು ದಿನಗಳಲ್ಲಿಯೇ ಕೊರೊನಾ 2ನೇ ಅಲೆ ಹೆಚ್ಚಾಗಿತ್ತು. ಹೀಗಾಗಿ ಚಿತ್ರಮಂದಿರದಲ್ಲಿ ಶೇ.50 ರಷ್ಟು ಸೀಟು ಭರ್ತಿಗೆ ಆದೇಶ ನೀಡಲಾಗಿತ್ತು. ಈ ವೇಳೆ ಪುನೀತ್ ರಾಜ್‌ಕುಮಾರ್ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಒಂದಿಷ್ಟು ಹೋರಾಟದ ಬಳಿಕ ಒಂದು ವಾರ ಶೇ.100ರಷ್ಟು ಆಸನ ವ್ಯವಸ್ಥೆಗೆ ಅವಕಾಶ ನೀಡಲಾಗಿತ್ತು. ಹೀಗಾಗಿ 'ಯುವರತ್ನ' ಬಿಡುಗಡೆಯಾದ ಕೇವಲ 9 ದಿನಕ್ಕೆ ಅಮೆಜಾನ್ ಪ್ರೈಂನಲ್ಲಿ ರಿಲೀಸ್ ಮಾಡಲಾಯ್ತು.