»   » ಶಿವಣ್ಣ ಜೊತೆ ಪುನೀತ್ ಗೇಮ್, ಯಾರಿಗೆ ಗೆಲುವು?

ಶಿವಣ್ಣ ಜೊತೆ ಪುನೀತ್ ಗೇಮ್, ಯಾರಿಗೆ ಗೆಲುವು?

Posted By:
Subscribe to Filmibeat Kannada
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಿರೂಪಣೆಯಲ್ಲಿ ಸೊಗಸಾಗಿ ಮೂಡಿಬರುತ್ತಿರುವ ಸುವರ್ಣ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ 'ಕನ್ನಡದ ಕೋಟ್ಯಾಧಿಪತಿ' ಸಿಸನ್ 2ಗೆ ತೆರೆಬೀಳುವ ಸಮಯ ಹತ್ತಿರವಾಗಿದೆ. ಇತ್ತೀಚೆಗೆ ಚೆನ್ನೈನ ಸ್ಟುಡಿಯೋದಲ್ಲಿ ಕೋಟ್ಯಾಧಿಪತಿಯ ಕೊನೆಯ ಸಂಚಿಕೆಯನ್ನು ಚಿತ್ರೀಕರಿಸಿಕೊಳ್ಳಲಾಯಿತು.

ಕೊನೆಯ ಸಂಚಿಕೆಯ ಹಾಟ್ ಸೀಟ್ ನಲ್ಲಿ ಕೂರುತ್ತಿರುವವರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಎಂಬುದು ವಿಶೇಷ. ಎರಡನೇ ಆವೃತ್ತಿಯ ಕೊನೆಯ ಸೆಲೆಬ್ರಿಟಿಯಾಗಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಸ್ಪರ್ಧಿಸುತ್ತಿದ್ದಾರೆ.

ಸಹೋದರರಿಬ್ಬರ ಸವಾಲಿಗೆ ಜವಾಬು ಹೇಗಿರುತ್ತವೆ, ಇವರಿಬ್ಬರ ನಡುವೆ ನಡೆದ ಮಾತುಕತೆ ಹೇಗಿದೆ ಎಂಬ ಕುತೂಹಲ ಸುವರ್ಣ ವಾಹಿನಿಯ ವೀಕ್ಷಕರಲ್ಲಿ ಮನೆಮಾಡಿದೆ. ಈ ಸಂಚಿಕೆಯಲ್ಲಿ ಶಿವಣ್ಣ ಎಷ್ಟು ಲಕ್ಷ ಗೆದ್ದಿದ್ದಾರೆ ಎಂಬ ಬಗ್ಗೆಯೂ ಅಚ್ಚರಿ ಇದ್ದೇ ಇದೆ.

ಈ ಹಿಂದೆ ರಿಯಲ್ ಸ್ಟಾರ್ ಉಪೇಂದ್ರ, ಲಕ್ಕಿ ಸ್ಟಾರ್ ರಮ್ಯಾ, ನವರಸ ನಾಯಕ ಜಗ್ಗೇಶ್, ಮಾಲಾಶ್ರೀ, ಪ್ರಿಯಾಮಣಿ, ರಾಧಿಕಾ ಪಂಡಿತ್, ಪ್ರಭುದೇವ, ಲಕ್ಷ್ಮಿ, ಕ್ರೇಜಿಸ್ಟಾರ್ ರವಿಚಂದ್ರನ್ ಸೇರಿದಂತೆ ಮುಂತಾದವರು ಸೆಲೆಬ್ರಿಟಿಗಳಾಗಿ ಭಾಗವಹಿಸಿದ್ದರು.

ಈಗ ಇದೇ ಮೊದಲ ಬಾರಿಗೆ ಶಿವಣ್ಣ ಜೊತೆ ಪುನೀತ್ ಗೇಮ್ ಆಡುತ್ತಿದ್ದಾರೆ. ಗೆಲುವು ಯಾರಿಗೆ ಸಿಗಲಿದೆ? ಈ ಸಂಚಿಕೆ ಬಗೆಗಿನ ವಿವರಗಳು ಶೀಘ್ರದಲ್ಲೇ ನಿಮ್ಮ ಮುಂದೆ ಬರಲಿವೆ, ನಿರೀಕ್ಷಿಸಿ! (ಒನ್ಇಂಡಿಯಾ ಕನ್ನಡ)

English summary
Hat trick hero Shivrajkumar will be facing a volley of questions from Power Star Puneet Rajkumar, in the last episode of famous Kannada reality show Kannadada Kotyadhipati. More details about the show are awaited.
Please Wait while comments are loading...