»   » 'ಅಪ್ಪು' ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಕ್ಷಣ ಬಂದೇ ಬಿಡ್ತು!

'ಅಪ್ಪು' ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಕ್ಷಣ ಬಂದೇ ಬಿಡ್ತು!

Posted By:
Subscribe to Filmibeat Kannada

ಮೊಟ್ಟ ಮೊದಲ ಬಾರಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 'ಮಜಾ ಟಾಕೀಸ್'ಗೆ ಅತಿಥಿಯಾಗಿ ಆಗಮಿಸಿದ್ದ ಎಪಿಸೋಡ್ ಇನ್ನೂ ಪ್ರಸಾರವಾಗಿಲ್ಲ. ಇದಕ್ಕೆ ಕಾರಣ ಏನು ಎಂದು ಈ ಹಿಂದೆ ನಿಮಗೆ ಹೇಳಿದ್ವಿ.

'ಮಜಾ ಟಾಕೀಸ್' ಪುನೀತ್ ಎಪಿಸೋಡ್ ಇನ್ನೂ ಪ್ರಸಾರವಾಗಿಲ್ಲ ಏಕೆ? ಕಾರಣ ಇಲ್ಲಿದೆ..

ಸೃಜನ್ ಲೋಕೇಶ್ ಸಾರಥ್ಯದಲ್ಲಿ ಮೂಡಿಬರುವ 'ಮಜಾ ಟಾಕೀಸ್' ಕಾರ್ಯಕ್ರಮಕ್ಕೆ 'ಅಣ್ಣ ಬಾಂಡ್' ಪುನೀತ್ ರಾಜ್ ಕುಮಾರ್ ಮೊಟ್ಟ ಮೊದಲ ಬಾರಿಗೆ ಆಗಮಿಸಿದ್ದ, 'ಅಪ್ಪು' ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಎಪಿಸೋಡ್ ಯಾವಾಗ ಎಂಬುದು ಈಗ ಕೊನೆಗೂ ರಿವೀಲ್ ಆಗಿದೆ. ಆ ಕ್ಷಣ ಹತ್ತಿರಕ್ಕೆ ಬಂದಿದೆ. ಮುಂದೆ ಬಂದಿದೆ.

ಮಜಾ ಟಾಕೀಸ್ ನಲ್ಲಿ 'ರಾಜಕುಮಾರ' ಸಂಭ್ರಮ

'ರಾಜಕುಮಾರ' ಚಿತ್ರ 50 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಪುನೀತ್ ರಾಜ್ ಕುಮಾರ್ 'ಮಜಾ ಟಾಕೀಸ್'ಗೆ ಅತಿಥಿಯಾಗಿ ಆಗಮಿಸಿದ್ದ ಎಪಿಸೋಡ್ ಪ್ರಸಾರ ಯಾವಾಗ ಎಂಬುದು ರಿವೀಲ್ ಆಗಿದೆ. ಈ ಎಪಿಸೋಡ್ ಪ್ರಸಾರ ವಿಶೇಷತೆ ಏನಂದ್ರೆ 'ರಾಜಕುಮಾರ' ಚಿತ್ರದ 50 ದಿನ ಸಂಭ್ರಮಾಚರಣೆಗೆ ಬಂದಿದ್ದ ಪುನೀತ್ ಸಂಚಿಕೆ 'ರಾಜಕುಮಾರ' ಚಿತ್ರ 100 ದಿನಗಳನ್ನು ಪೂರೈಸಿದ ದಿನದಂದು ಪ್ರಸಾರ ಆಗುತ್ತಿದೆ.

ಪುನೀತ್ ಅಭಿಮಾನಿಗಳಿಗೆ ಡಬಲ್ ಧಮಾಕ

'ರಾಜಕುಮಾರ' ಚಿತ್ರ ಜುಲೈ 1 ಕ್ಕೆ ನೂರನೇ ದಿನ ಪೂರೈಸಲಿದ್ದು, ಅದೇ ದಿನದಂದು ಪುನೀತ್ ರಾಜ್ ಕುಮಾರ್ 'ಮಜಾ ಟಾಕೀಸ್' ಎಪಿಸೋಡ್ ಪ್ರಸಾರ ಆಗುತ್ತಿದೆ. ಅಪ್ಪು ಅಭಿಮಾನಿಗಳಿಗೆ ಇದು ಒಂದು ರೀತಿಯ ಡಬಲ್ ಧಮಾಕ ಎಂದರೇ ತಪ್ಪಾಗಲಾರದು. ಅಣ್ಣಾ ಬಾಂಡ್ ರನ್ನು 'ಮಜಾ ಟಾಕೀಸ್' ನಲ್ಲಿ ನೋಡುವ ಭಾಗ್ಯ ಒಂದು ಕಡೆಯಾದರೆ, ಇನ್ನೊಂದು ಕಡೆ ಅವರ ಅಭಿನಯದ 'ರಾಜಕುಮಾರ' ಚಿತ್ರ ನೂರನೇ ದಿನ ಪೂರೈಸಿದ ಸಂಭ್ರಮವನ್ನು ಆಚರಿಸುವ ದಿನವು ಹೌದು. ಅದರ ಜೊತೆಗೆ ಇನ್ನೊಂದು ವಿಶೇಷತೆ ಅಂದ್ರೆ...

ಎರಡು ದಿನ ಪುನೀತ್ ಎಪಿಸೋಡ್ ಪ್ರಸಾರ

ಹೌದು, ಪುನೀತ್ ರಾಜ್ ಕುಮಾರ್ ಅತಿಥಿ ಆಗಿ ಆಗಮಿಸಿರುವ 'ಮಜಾ ಟಾಕೀಸ್' ಎಪಿಸೋಡ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಎರಡು ದಿನಗಳು ಪ್ರಸಾರ ಆಗುತ್ತಿದೆ. ಜುಲೈ 1 ರಂದು ರಾತ್ರಿ 8 ಕ್ಕೆ ಮತ್ತು ಜುಲೈ 2 ಕ್ಕೆ ರಾತ್ರಿ 7 ಗಂಟೆಗೆ ಪ್ರಸಾರ ಆಗಲಿದ್ದು, ಪುನೀತ್ ರಾಜ್ ಕುಮಾರ್ 'ಮಜಾ ಟಾಕೀಸ್' ಕಾರ್ಯಕ್ರಮ ಎರಡು ದಿನಗಳು ಪ್ರಸಾರವಾಗಲಿದೆ.

ಜುಲೈ 1 'ಮಜಾ ಟಾಕೀಸ್' ತಂಡಕ್ಕೂ ಸಂತೋಷದ ದಿನ

ಸೃಜನ್ ಲೋಕೇಶ್ ಸಾರಥ್ಯದ 'ಮಜಾ ಟಾಕೀಸ್' ತಂಡಕ್ಕೂ ಜುಲೈ 1 ನೇ ತಾರೀಖು ಮರೆಯಲಾಗದ ಸಂಚಿಕೆ. ಕಾರಣ ಅಂದು ಕನ್ನಡದ ರಾಜರತ್ನ ಪುನೀತ್ ಎಪಿಸೋಡ್ ಪ್ರಸಾರ ಎಂಬುದು ಒಂದು ಕಡೆ ಆದರೆ, ಅದು 'ಮಜಾ ಟಾಕೀಸ್' ಕಾರ್ಯಕ್ರಮದ 250 ನೇ ಎಪಿಸೋಡ್ ಎಂಬುದು ಇನ್ನೊಂದು ಸಂತೋಷದ ವಿಚಾರ.

'ಅಪ್ಪು' ಅಪ್ಪಿಕೊಂಡ ಅಪಾರ ಮಕ್ಕಳು

ಪುನೀತ್ ರಾಜ್ ಕುಮಾರ್ ಎಪಿಸೋಡ್ ಗೆ ಅಪಾರ ಮಕ್ಕಳು ಆಗಮಿಸಿದ್ದು ಅವರೊಂದಿಗೆ ಅಪ್ಪು ಡ್ಯಾನ್ಸ್ ಮಾಡಿ ಸಂತೋಷ ಪಟ್ಟಿದ್ದಾರೆ. ಈ ಎಪಿಸೋಡ್ ಅನ್ನು ಮಿಸ್ ಮಾಡದೇ ಜುಲೈ 1 ಮತ್ತು 2 ನೇ ತಾರೀಖು ನೋಡಿ. ಈ ಸಂಚಿಕೆಯ ಪ್ರೋಮೋ ನೋಡಲು ಕ್ಲಿಕ್ ಮಾಡಿ.

English summary
Power Star Puneeth Rajkumar participated 'Majaa Talkies' episode telecasting on July 1st. This episode is also 'Majaa Talkies' 250th special episode.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada