»   » ಪುನೀತ್ 'ರಾಜಕುಮಾರ'ನೊಂದಿಗೆ ಬೆಳಕಿನ ಹಬ್ಬ ದೀಪಾವಳಿ ಆಚರಿಸಿ.!

ಪುನೀತ್ 'ರಾಜಕುಮಾರ'ನೊಂದಿಗೆ ಬೆಳಕಿನ ಹಬ್ಬ ದೀಪಾವಳಿ ಆಚರಿಸಿ.!

Posted By:
Subscribe to Filmibeat Kannada

ಕರ್ನಾಟಕ ರಾಜ್ಯದ ಜನತೆಯ ಮನಮುಟ್ಟಿ, ಸೂಪರ್ ಡ್ಯೂಪರ್ ಹಿಟ್ ಆದ ಸಿನಿಮಾ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ'. ಕಮರ್ಶಿಯಲ್ ಎಂಟರ್ ಟೇನ್ಮೆಂಟ್ ಜೊತೆಗೆ ಉತ್ತಮ ಸಂದೇಶ ಹೊತ್ತಿದ್ದ ಸಂತೋಷ್ ಆನಂದ್ ರಾಮ್ ನಿರ್ದೇಶನದ 'ರಾಜಕುಮಾರ' ಸಿನಿಮಾ ದೀಪಾವಳಿ ಹಬ್ಬದ ಪ್ರಯುಕ್ತ ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರಸಾರ ಆಗಲಿದೆ.

ವಿಮರ್ಶೆ: ಡಾ'ರಾಜಕುಮಾರ' ಹೆಸರು ಉಳಿಸಿದ ಸಿನಿಮಾ


ಮಾರ್ಚ್ ತಿಂಗಳಲ್ಲಿ ರಾಜ್ಯಾದ್ಯಂತ ಬಿಡುಗಡೆ ಆಗಿ ಕಲೆಕ್ಷನ್ ವಿಚಾರದಲ್ಲಿ ಹಳೆ ದಾಖಲೆಗಳನ್ನೆಲ್ಲ ಉಡೀಸ್ ಮಾಡಿದ್ದ 'ರಾಜಕುಮಾರ' ಇದೀಗ ಟಿವಿ ಟಿ.ಆರ್.ಪಿಯಲ್ಲಿ ಧೂಳೆಬ್ಬಿಸಲು ಸಜ್ಜಾಗಿದೆ.


Puneeth Rajkumar starrer 'Raajakumara' premier in Udaya TV on October 20th

ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಬರೆದ 'ರಾಜಕುಮಾರ'ನ ಬೊಂಬೆ.!


ಅಪ್ಪನ ಹೆಸರಿಗೆ ಕಪ್ಪು ಚುಕ್ಕೆ ಬಾರದಂತೆ, ತಂದೆಯ ಹೆಸರನ್ನು ಉಳಿಸಲು ಮಗ ಅನುಸರಿಸುವ ಮಾರ್ಗವೇ 'ರಾಜಕುಮಾರ' ಚಿತ್ರದ ಕಥಾಹಂದರ. ಲವ್ ಸ್ಟೋರಿ, ಕಾಮಿಡಿ, ಸೆಂಟೆಮೆಂಟ್, ಆಕ್ಷನ್... ಎಲ್ಲವೂ ಹದವಾಗಿ ಬೆರೆತಿರುವ 'ರಾಜಕುಮಾರ' ಚಿತ್ರ ಅಕ್ಟೋಬರ್ 20 ರಂದು ಉದಯ ಟಿವಿಯಲ್ಲಿ ಪ್ರಸಾರ ಆಗಲಿದೆ. (ಸಮಯ ಇನ್ನೂ ನಿಗದಿ ಆಗಿಲ್ಲ)


ಅಣ್ಣಾವ್ರನ್ನ ನೆನಪಿಸುವ 'ರಾಜಕುಮಾರ' ಚಿತ್ರವನ್ನ ಥಿಯೇಟರ್ ನಲ್ಲಿ ನೀವು ನೋಡಿಲ್ಲ ಅಂದ್ರೆ ಅಕ್ಟೋಬರ್ 20 ರಂದು ಮಿಸ್ ಮಾಡಿಕೊಳ್ಳಲೇ ಬೇಡಿ.


ಒಂದ್ವೇಳೆ ಈಗಾಗಲೇ ನೋಡಿದ್ದರೂ, ದೀಪಾವಳಿ ಹಬ್ಬದ ಸಂಭ್ರಮದ ಜೊತೆಗೆ ಇಡೀ ಫ್ಯಾಮಿಲಿ ಕೂತು ಸಂಬಂಧಗಳ ಮೌಲ್ಯಗಳನ್ನು ಸಾರುವ 'ರಾಜಕುಮಾರ' ಚಿತ್ರವನ್ನ ಇನ್ನೊಮ್ಮೆ ನೋಡಿ ಆನಂದಿಸಿ...

English summary
Puneeth Rajkumar starrer 'Raajakumara' premier in Udaya TV on October 20th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X