»   » 'ಬಿಗ್' ಶಾಕ್: 'ಪುಟ್ಟಗೌರಿ' ಮುಂದೆ 'ಬಿಗ್ ಬಾಸ್' ಆಟ ನಡೆಯಲಿಲ್ಲ.!

'ಬಿಗ್' ಶಾಕ್: 'ಪುಟ್ಟಗೌರಿ' ಮುಂದೆ 'ಬಿಗ್ ಬಾಸ್' ಆಟ ನಡೆಯಲಿಲ್ಲ.!

Posted By:
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5ನ ಹಿಂದಿಕ್ಕಿದ ಪುಟ್ಟ ಗೌರಿ ಮದುವೆ ಧಾರಾವಾಹಿ

'ಬಿಗ್ ಬಾಸ್' ಕನ್ನಡ ರಿಯಾಲಿಟಿ ಶೋ ಎನ್ನುವುದು ಕನ್ನಡ ಕಿರುತೆರೆಯಲ್ಲಿ ಅತಿ ದೊಡ್ಡ ಕಾರ್ಯಕ್ರಮ. ಸಾಮಾನ್ಯವಾಗಿ ಈ ಕಾರ್ಯಕ್ರಮಕ್ಕೆ ಅತಿ ಹೆಚ್ಚು ರೇಟಿಂಗ್ ಬರುವುದು ಸಹಜ.

ಆದ್ರೆ, ಈ ಬಾರಿಯ 'ಬಿಗ್ ಬಾಸ್'ಗೆ ಕನ್ನಡ ಧಾರಾವಾಹಿಗಳು ಶಾಕ್ ನೀಡುತ್ತಿದೆ. ಅದರಲ್ಲೂ 'ಪುಟ್ಟಗೌರಿ ಮದುವೆ' ಅಂತೂ ಎಷ್ಟೇ ಟೀಕೆ, ಟ್ರೋಲ್ ಗೆ ಒಳಪಟ್ಟರು ಪ್ರೇಕ್ಷಕರನ್ನ ಹಿಡಿದಿಟ್ಟುಕೊಳ್ಳುವಲ್ಲಿ ಮಾತ್ರ ಸ್ವಲ್ಪವೂ ಹಿನ್ನೆಡೆ ಅನುಭವಿಸಿಲ್ಲ.

ಹಾಗಿದ್ರೆ, 'ಬಿಗ್ ಬಾಸ್' ರೇಟಿಂಗ್ ಎಷ್ಟು? ಪುಟ್ಟಗೌರಿ ಮದುವೆ ರೇಟಿಂಗ್ ಎಷ್ಟು? ಉಳಿದ ಧಾರಾವಾಹಿಗಳ ಕಥೆ ಏನು ಎಂದು ತಿಳಿಯಲು ಮುಂದೆ ಓದಿ.....

'ಬಿಗ್ ಬಾಸ್'ಗೆ ಶಾಕ್ ಕೊಟ್ಟ 'ಗೌರಿ'

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಟಿವಿ ರೇಟಿಂಗ್ ನಲ್ಲಿ ನಂಬರ್.1 ಸ್ಥಾನದಲ್ಲಿರುತ್ತೆ ಎಂದುಕೊಂಡವರಿಗೆ 'ಪುಟ್ಟಗೌರಿ' ಶಾಕ್ ನೀಡಿದೆ. ಹೌದು, ಎಲ್ಲರ ಲೆಕ್ಕಚಾರವನ್ನ ಉಲ್ಟಾ ಮಾಡಿರುವ ಗೌರಿ ನಂಬರ್ 1 ಸ್ಥಾನ ಪಡೆದುಕೊಂಡಿದೆ.

ನೀವು 'ಪುಟ್ಟಗೌರಿ ಮದುವೆ' ಸೀರಿಯಲ್ ಭಕ್ತರಾ? ಇದನ್ನೊಮ್ಮೆ ತಪ್ಪದೆ ಓದಿ..

'ಟಾಪ್-5'ನಲ್ಲಿಲ್ಲ 'ಬಿಗ್ ಬಾಸ್'

ನಂಬರ್ 1 ಸ್ಥಾನದಲ್ಲಿ ಮಿಸ್ ಆದ 'ಬಿಗ್ ಬಾಸ್' ಟಾಪ್ 5ನೇ ಸ್ಥಾನದಲ್ಲೂ ಮಿಸ್ ಆಗಿದೆ. ಮೊದಲ ಐದು ರೇಟಿಂಗ್ ನಲ್ಲಿ 'ಬಿಗ್ ಬಾಸ್' ಶೋಗೆ ಸ್ಥಾನವೇ ಇಲ್ಲದಂತಾಗಿದೆ.

'ದೊಡ್ಮನೆ'ಯ 'ಹೆಬ್ಬುಲಿ' ಜಯಶ್ರೀನಿವಾಸನ್ ಡೈಲಾಗ್ ಗಳು ಒಂದಾ ಎರಡಾ.. ಅಬ್ಬಬ್ಬಾ.!

ಯಾವ ಯಾವ ಧಾರಾವಾಹಿಗಳು ರೇಸ್ ನಲ್ಲಿದೆ

'ಪುಟ್ಟಗೌರಿ ಮದುವೆ' ಮೊದಲ ಸ್ಥಾನದಲ್ಲಿದ್ರೆ, 'ಲಕ್ಷ್ಮಿ ಬಾರಮ್ಮ' ಎರಡನೇ ಸ್ಥಾನ, 'ಶನಿ ಮಹಾಸಂಚಿಕೆ' ಮೂರನೇ ಸ್ಥಾನ, 'ಕುಲವಧು' ನಾಲ್ಕನೇ ಸ್ಥಾನ ಹಾಗೂ 'ಅಗ್ನಿಸಾಕ್ಷಿ' ಐದನೇ ಸ್ಥಾನದಲ್ಲಿದೆ.

43ನೇ ವಾರದ ರೇಟಿಂಗ್ ಇದು

ಅಂದ್ಹಾಗೆ, ಇದು 43ನೇ ವಾರದಲ್ಲಿ (ಅಕ್ಟೋಬರ್ 21 ರಿಂದ 27ನೇ ತಾರೀಖಿನವರೆಗೂ) ಯಾವ ಕಾರ್ಯಕ್ರಮದ ರೇಟಿಂಗ್ ಎಷ್ಟಿತ್ತು ಎಂದು ಬಾರ್ಕ್ ಇಂಡಿಯಾ ಸಂಸ್ಥೆ ಪ್ರಕಟಿಸಿರುವ ರೇಟಿಂಗ್.

ಜಗನ್ ಜೊತೆ ಪ್ರೀತಿ ಮುರಿದು ಬಿದ್ದಿದ್ದೇಕೆ.? ಅನುಪಮಾ ಗೌಡ ಕಣ್ಣೀರಧಾರೆ.!

ಧಾರಾವಾಹಿಗೆ ಹೆಚ್ಚಿದೆ ಬೇಡಿಕೆ

ಅಂದ್ಹಾಗೆ, ಕಿರುತೆರೆಯಲ್ಲಿ ಕೆಲವು ಧಾರಾವಾಹಿಗಳು ಹೆಚ್ಚು ಬೇಡಿಕೆ ಹೊಂದಿದೆ. ಯಾವುದೇ ಕಾರ್ಯಕ್ರಮ, ಯಾರೇ ಅತಿಥಿಗಳ ಕಾರ್ಯಕ್ರಮ ಬಂದರೂ ಈ ಧಾರಾವಾಹಿಗಳನ್ನ ನೋಡುವುದು ಮಾತ್ರ ಮಿಸ್ ಮಾಡುವುದಿಲ್ಲ ಟಿವಿ ಪ್ರೇಕ್ಷಕರು. ಹೀಗಾಗಿ, ರಿಯಾಲಿಟಿ ಶೋ ಮುಂದೆ ಧಾರಾವಾಹಿ ಗೆದ್ದು ಬೀಗಿದೆ.

English summary
Puttagowri maduve Serial Beats Bigg Boss Kannada 5 in 43rd Week TV Rating. 'ಬಿಗ್ ಬಾಸ್ ಕನ್ನಡ 5' ಕಾರ್ಯಕ್ರಮಕ್ಕಿಂತ 'ಪುಟ್ಟಗೌರಿ ಮದುವೆ' ಹೆಚ್ಚು ರೇಟಿಂಗ್ ಹೊಂದಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X