»   » 'ಅಗ್ನಿಸಾಕ್ಷಿ' ಸನ್ನಿಧಿ (ವೈಷ್ಣವಿ) ಮದುವೆ ಆಗುವ ಹುಡುಗ ಹೀಗಿರಬೇಕು.!

'ಅಗ್ನಿಸಾಕ್ಷಿ' ಸನ್ನಿಧಿ (ವೈಷ್ಣವಿ) ಮದುವೆ ಆಗುವ ಹುಡುಗ ಹೀಗಿರಬೇಕು.!

Posted By:
Subscribe to Filmibeat Kannada

ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿಗಳ ಪೈಕಿ 'ಅಗ್ನಿಸಾಕ್ಷಿ' ಕೂಡ ಒಂದು. 'ಅಗ್ನಿಸಾಕ್ಷಿ' ಸೀರಿಯಲ್ ನಿಂದ ಜನಪ್ರಿಯತೆ ಪಡೆದುಕೊಂಡವರು ಸನ್ನಿಧಿ ಅಲಿಯಾಸ್ ವೈಷ್ಣವಿ.

ಕಿರುತೆರೆಯಲ್ಲಿ ಮುದ್ದು ಮುದ್ದಾಗಿ ಕಾಣುವ ವೈಷ್ಣವಿ ರವರ ಡ್ರೀಮ್ ಬಾಯ್ ಹೇಗಿರಬೇಕು ಗೊತ್ತಾ.?

ತಮ್ಮ ಹುಡುಗ ಶ್ರೀಮಂತನಾಗಿರಬೇಕು, ಸ್ಮಾರ್ಟ್ ಆಗಿರಬೇಕು, ಹ್ಯಾಂಡ್ಸಮ್ ಆಗಿರಬೇಕು ಎಂಬ ನಿರೀಕ್ಷೆ ವೈಷ್ಣವಿಗಿಲ್ಲ. ಬದಲಾಗಿ ಹುಡುಗ ತುಂಬಾ ಸಿಂಪಲ್ ಆಗಿರಬೇಕಂತೆ.

Qualities should 'Agnisakshi' Sannidhi's dream boy should have

ಹಾಗಂತ ಸ್ವತಃ ವೈಷ್ಣವಿ ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

''ನಿಮ್ಮ ಡ್ರೀಮ್ ಬಾಯ್ ಹೇಗಿರಬೇಕು'' ಅಂತ ನಿರೂಪಕ ಅಕುಲ್ ಕೇಳಿದಾಗ ''ತುಂಬಾ ಸಿಂಪಲ್ ಆಗಿರಬೇಕು, ಹುಡುಗಿಯರಿಗೆ ಗೌರವ ಕೊಡಬೇಕು, ಅವರ ತಾಯಿಯನ್ನ ತುಂಬಾ ಪ್ರೀತಿಸಬೇಕು, ನನ್ನನ್ನೂ ತುಂಬಾ ಇಷ್ಟ ಪಡಬೇಕು, ಆದರೆ ಯಾವತ್ತೂ ಹೇಳಬಾರದು'' ಎಂದಿದ್ದಾರೆ ನಟಿ ವೈಷ್ಣವಿ.

ಒಂದು ವೇಳೆ ನಿಮ್ಮಲ್ಲಿ ಇಂತಹ ಸ್ವಭಾವ ಇದ್ದರೆ, ವೈಷ್ಣವಿ ಲಕ್ಷ್ಯ ನಿಮ್ಮ ಮೇಲೆ ಬೀಳಬಹುದು.

English summary
Sannidhi (Vaishnavi) of 'Agnisakshi' fame revealed the qualities that her Dream Boy should have in Colors Super Channel's popular show 'Super Talk Time'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada