»   » ಕಿರುತೆರೆಯಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರಸಾರ ಆಗುತ್ತಿದೆ 'ರಾಗ' ಸಿನಿಮಾ

ಕಿರುತೆರೆಯಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರಸಾರ ಆಗುತ್ತಿದೆ 'ರಾಗ' ಸಿನಿಮಾ

Posted By:
Subscribe to Filmibeat Kannada

ಇತ್ತೀಚಿನ ದಿನಗಳಲ್ಲಿ ಬಂದ ಕನ್ನಡದ ವಿಭಿನ್ನ ಸಿನಿಮಾಗಳಲ್ಲಿ 'ರಾಗ' ಕೂಡ ಒಂದು. ಇಂತಹ ವಿಭಿನ್ನ ಸಿನಿಮಾ ಈಗ ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ.

ಪಿ.ಸಿ.ಶೇಖರ್ ನಿರ್ದೇಶನದ ಈ ಚಿತ್ರದ ಕಥೆ ಇಬ್ಬರು ಅಂಥ ಪ್ರೇಮಿಗಳ ಸುತ್ತ ಇತ್ತು. ನಟ ಮಿತ್ರ ಹಾಗೂ ನಟಿ ಭಾಮಾ ಅಮೋಘವಾಗಿ ಅಭಿನಯಿಸಿದ್ದರು. ಇಬ್ಬರ ನಟನೆಗೆ ದೊಡ್ಡ ಮಟ್ಟದ ಪ್ರಶಂಸೆ ವ್ಯಕ್ತವಾಗಿತ್ತು. ಇನ್ನೂ ಮಿತ್ರ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಅರ್ಜುನ್ ಜನ್ಯ ಚಿತ್ರಕ್ಕೆ ಸಂಗೀತ ನೀಡಿದ್ದು, ಸಿನಿಮಾದ ಮ್ಯೂಸಿಕ್ ದೊಡ್ಡ ಹಿಟ್ ಆಗಿತ್ತು.

'Raaga' movie will be telecasting in Zee kannada on october 29th

ಇನ್ನೂ ರಿಲೀಸ್ ಸಮಯದಲ್ಲಿ ಚಿತ್ರಮಂದಿರದ ಸಮಸ್ಯೆಯಿಂದ 'ರಾಗ' ಸಿನಿಮಾ ಅಷ್ಟೊಂದು ಜನರಿಗೆ ತಲುಪಲಿಲ್ಲ. ಆದರೆ ಇದೀಗ ಈ ಚಿತ್ರ ಟಿವಿಯಲ್ಲಿ ಪ್ರಸಾರವಾಗುತ್ತಿದೆ. 'ರಾಗ' ಸಿನಿಮಾ ಅಕ್ಟೋಬರ್ 29ಕ್ಕೆ ಅಂದರೆ ಇದೇ ಭಾನುವಾರ ಸಂಜೆ 4.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿಲಿದೆ.

English summary
Kannada movie 'Raaga' will be telecasting in zee kannada on october 29th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X