For Quick Alerts
  ALLOW NOTIFICATIONS  
  For Daily Alerts

  ಶುಕ್ರವಾರ ಸಂಜೆ 7ಕ್ಕೆ ಉದಯ ಟಿವಿಯಲ್ಲಿ 'ರಾಜಕುಮಾರ' ಪ್ರೀಮಿಯರ್

  By Harshitha
  |

  ಸ್ಯಾಂಡಲ್ ವುಡ್ ನಲ್ಲಿ ಶತದಿನೋತ್ಸವ ಆಚರಿಸಿ ಹೊಸ ದಾಖಲೆ ನಿರ್ಮಿಸಿದ ಸೂಪರ್ ಹಿಟ್ ಚಲನಚಿತ್ರ 'ರಾಜಕುಮಾರ' ದೀಪಾವಳಿ ಹಬ್ಬದ ವಿಶೇಷವಾಗಿ ಅಕ್ಟೋಬರ್ 20 ರಂದು ಸಂಜೆ 7 ಗಂಟೆಗೆ ನಿಮ್ಮ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರ ಸ್ಯಾಂಡಲ್ ವುಡ್ ಪಾಲಿಗೆ ಅತ್ಯಂತ ವಿಶೇಷವಾದ ಚಿತ್ರ. ಪಕ್ಕಾ ಕೌಟುಂಬಿಕ ಹಾಗೂ ಕಮರ್ಶಿಯಲ್ ಅಂಶಗಳನ್ನು ಹೊಂದಿರುವ 'ರಾಜಕುಮಾರ' ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು.

  ವಿಮರ್ಶೆ: ಡಾ'ರಾಜಕುಮಾರ' ಹೆಸರು ಉಳಿಸಿದ ಸಿನಿಮಾ

  ವಿಮಾನ ಅಪಘಾತದಲ್ಲಿ ತನ್ನ ಇಡೀ ಕುಟುಂಬವನ್ನು ಕಳೆದುಕೊಳ್ಳುವ ನಾಯಕ ತಾನು ಬಾಲ್ಯದಲ್ಲಿ ಬೆಳೆದ ಅನಾಥಾಶ್ರಮಕ್ಕೆ ಮರಳುತ್ತಾನೆ. ಅಲ್ಲಿನ ಹಿರಿಯರಿಗೆ ಆತ ಆಶ್ರಯ ನೀಡುವ ಕಥೆಯೇ 'ರಾಜಕುಮಾರ'.

  ನಾಯಕನಾಗಿ ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅದ್ಭುತವಾಗಿ ನಟಿಸಿ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಮೊಟ್ಟ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ಅಭಿನಯಿಸಿರುವ ನಾಯಕಿ ಪ್ರಿಯಾ ಆನಂದ್ ತನ್ನ ಸೌಂದರ್ಯ ಹಾಗೂ ನಟನೆಯಿಂದ ಮೋಡಿ ಮಾಡಿದ್ದಾರೆ. ಪುನೀತ್ ಗೆ ತಂದೆಯಾಗಿರುವ ಶರತ್ ಕುಮಾರ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

  ಪ್ರಕಾಶ್ ರೈ, ಅನಂತ್ ನಾಗ್, ಸಾಧು ಕೋಕಿಲ, ದತ್ತಣ್ಣ ಸೇರಿದಂತೆ ದೊಡ್ಡ ತಾರಾಬಳಗ ಇರುವ 'ರಾಜಕುಮಾರ' ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿದ್ದು, ಚಿತ್ರದ ಎಲ್ಲಾ ಹಾಡುಗಳು ಜನಪ್ರಿಯವಾಗಿವೆ. ಅದರಲ್ಲೂ 'ಬೊಂಬೆ ಹೇಳುತೈತೆ..', 'ಅಪ್ಪು ಡ್ಯಾನ್ಸ್..' ಹಾಡುಗಳು ಯಶಸ್ವಿಯಾಗಿದೆ.

  ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಬರೆದ 'ರಾಜಕುಮಾರ'ನ ಬೊಂಬೆ.!

  'ರಾಜಕುಮಾರ' ಚಿತ್ರವನ್ನ ವಿಜಯ್ ಕಿರಗಂದೂರು ನಿರ್ಮಿಸಿದ್ದು, ಸಂತೋಷ್ ಆನಂದ್ ರಾಮ್ ಆಕ್ಷನ್ ಕಟ್ ಹೇಳಿದ್ದಾರೆ. 'ರಾಜಕುಮಾರ' ಚಿತ್ರವನ್ನ ನೀವು ಥಿಯೇಟರ್ ನಲ್ಲಿ ನೋಡಲು ಮಿಸ್ ಮಾಡಿಕೊಂಡಿದ್ದರೆ, ಅಕ್ಟೋಬರ್ 20 ರಂದು ಸಂಜೆ 7 ಗಂಟೆಗೆ ತಪ್ಪದೆ ಉದಯ ಟಿವಿಯಲ್ಲಿ ವೀಕ್ಷಿಸಿ...

  English summary
  Puneeth Rajkumar starrer 'Raajakumara' premier in Udaya TV on October 20th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X