»   » ಜೂನ್ 24 ರಿಂದ ನಿಮ್ಮನೆ ಟಿವಿಯಲ್ಲಿ ರಾಧಿಕಾ ಕುಮಾರಸ್ವಾಮಿ ಬರ್ತಾರೆ

ಜೂನ್ 24 ರಿಂದ ನಿಮ್ಮನೆ ಟಿವಿಯಲ್ಲಿ ರಾಧಿಕಾ ಕುಮಾರಸ್ವಾಮಿ ಬರ್ತಾರೆ

Posted By:
Subscribe to Filmibeat Kannada

ನಟಿ ರಾಧಿಕಾ ಕುಮಾರ ಸ್ವಾಮಿ ಕಿರುತೆರೆಗೆ ಬರುವ ಬಗ್ಗೆ ಈ ಹಿಂದೆ 'ಫಿಲ್ಮಿಬೀಟ್ ಕನ್ನಡ'ದಲ್ಲಿ ಓದಿದ್ರಿ. ಇದೀಗಾ ಆ ಟೈಂ ಹತ್ತಿರಕ್ಕೆ ಬಂದಿದೆ. ರಾಧಿಕಾ ಕುಮಾರಸ್ವಾಮಿ ಅವರ ಕಿರುತೆರೆಯ ಕಾರ್ಯಕ್ರಮ ಇದೇ ತಿಂಗಳ 24 ರಿಂದ ಶುರುವಾಗಲಿದೆ.

'ಡ್ಯಾನ್ಸ್ ಡ್ಯಾನ್ಸ್ ಜೂನಿಯರ್' ಎಂಬ ಹೊಸ ಕಿರುತೆರೆಯ ಕಾರ್ಯಕ್ರಮ ಶುರುವಾಗಲಿದ್ದು, ಈ ಕಾರ್ಯಕ್ರಮದಲ್ಲಿ ರಾಧಿಕಾ ಕುಮಾರಸ್ವಾಮಿ ತೀರ್ಪುಗಾರರಾಗಿ ಭಾಗಿಯಾಗಲಿದ್ದಾರೆ. 'ಡ್ಯಾನ್ಸ್ ಡ್ಯಾನ್ಸ್ ಜೂನಿಯರ್' ಸ್ಟಾರ್ ಸುವರ್ಣ ವಾಹಿನಿಯ ಡ್ಯಾನ್ ರಿಯಾಲಿಟಿ ಶೋ ಆಗಿದ್ದು, ಕಾರ್ಯಕ್ರಮದ ಪ್ರೋಮೋ ಈಗ ರಿಲೀಸ್ ಆಗಿದೆ.

[ಹೊಸ ಅದೃಷ್ಟ ಪರೀಕ್ಷೆಗೆ ನಿಂತ ರಾಧಿಕಾ ಕುಮಾರಸ್ವಾಮಿ, ಏನದು?]

'Radhika Kumaraswamy' to judge for Star Suvarna's Dance Reality Show.

ಪ್ರೋಮೋದಲ್ಲಿ ರಾಧಿಕ ಜೊತೆ ಇತರೆ ತೀರ್ಪುಗಾರರಾದ ನೆನಪಿರಲಿ ಪ್ರೇಮ್ ಮತ್ತು ಬಾಲಿವುಡ್ ಕೊರಿಯೋಗ್ರಾಫರ್ ಸಲ್ಮಾನ್ ಮಿಂಚಿದ್ದಾರೆ. ಕಾರ್ಯಕ್ರಮದ ನಿರೂಪಕಿ ಶ್ವೇತ ಚೆಂಗಪ್ಪಾ ಸಹ ಇಲ್ಲಿ ಕಾಣಿಸಿಕೊಂಡಿದ್ದು ಪ್ರೋಮೋ ಹಾಡನ್ನು ವಿಜಯ ಪ್ರಕಾಶ್ ಹಾಡಿದ್ದಾರೆ.

['ಮಜಾ ಟಾಕೀಸ್'ನಲ್ಲಿ ಸೃಜನ್ ಜೊತೆ ರಾಧಿಕಾ ಕುಮಾರಸ್ವಾಮಿ ಮಸ್ತ್ ಮಜಾ]

'Radhika Kumaraswamy' to judge for Star Suvarna's Dance Reality Show.

ಹೇಳಿ ಕೇಳಿ ರಾಧಿಕಾ ಕುಮಾರಸ್ವಾಮಿ ಅವರಿಗೆ ಡ್ಯಾನ್ಸ್ ಅಂದ್ರೆ ತುಂಬ ಇಷ್ಟ. ಅಲ್ಲದೆ ಅವರು ಒಳ್ಳೆಯ ಡ್ಯಾನ್ಸರ್ ಸಹ ಹೌದು. ಇದರಿಂದಲೇ ಈ ಕಾರ್ಯಕ್ರಮವನ್ನು ಅವರು ಆಯ್ಕೆ ಮಾಡಿಕೊಂಡಿದ್ದಾರೆ. ಅಂದಹಾಗೆ, ಮೊದಲ ಬಾರಿಗೆ ಕಿರುತೆರೆಯಲ್ಲಿ ಬರುವ ರಾಧಿಕಾ ಅವರನ್ನು ನೋಡುವುದಕ್ಕೆ ಅವರ ಅಭಿಮಾನಿಗಳು ಸಹ ಕಾಯುತ್ತಿದ್ದಾರೆ. 'ಡ್ಯಾನ್ಸ್ ಡ್ಯಾನ್ಸ್ ಜೂನಿಯರ್' ಪ್ರೋಮೋ ನೋಡುವುದಕ್ಕೆ ಈ ಲಿಂಕ್ ಕ್ಲಿಕಿಸಿ.

English summary
Kannada Actress 'Radhika Kumaraswamy' will be the judge for Star Suvarna's 'Dance Dance Juniors' Reality show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada