For Quick Alerts
  ALLOW NOTIFICATIONS  
  For Daily Alerts

  ಹೊಸ ಅದೃಷ್ಟ ಪರೀಕ್ಷೆಗೆ ನಿಂತ ರಾಧಿಕಾ ಕುಮಾರಸ್ವಾಮಿ, ಏನದು?

  By Naveen
  |

  ನಟಿ ರಾಧಿಕಾ ಕುಮಾರಸ್ವಾಮಿ ಈಗ ಕಿರುತೆರೆಗೆ ಬಲಗಾಲಿಟ್ಟು ಬರುವುದಕ್ಕೆ ರೆಡಿಯಾಗಿದ್ದಾರೆ. ಸಿನಿಮಾಗಳಿಂದ ಸ್ವಲ್ಪ ಕಾಲ ಮರೆಯಾಗಿದ್ದ ಇವರು ಒಂದು ಟಿವಿ ಕಾರ್ಯಕ್ರಮದ ಮೂಲಕ ನಿಮ್ಮ ಮನೆ ಮನೆಗೆ ಬರಲಿದ್ದಾರೆ.

  'ರುದ್ರತಾಂಡವ' ಸಿನಿಮಾದ ನಂತರ ರಾಧಿಕಾ ಎಲ್ಲಿ ಮರೆಯಾದರು.. ಏನ್ ಮಾಡುತ್ತಿದ್ದಾರೆ.. ಅಂತ ಯಾರಿಗೂ ಗೊತ್ತಿರಲಿಲ್ಲ. ಆದರೆ, ಇತ್ತೀಚಿಗೆ ಅರ್ಜುನ್ ಸರ್ಜಾ ಜೊತೆ 'ಕಾಂಟ್ರಾಕ್ಟ್' ಎನ್ನುವ ಹೊಸ ಸಿನಿಮಾ ಮಾಡುತ್ತಿರುವ ಬಗ್ಗೆ ರಾಧಿಕಾ ಹೇಳಿಕೊಂಡಿದ್ದರು.['ಮಜಾ ಟಾಕೀಸ್'ನಲ್ಲಿ ಸೃಜನ್ ಜೊತೆ ರಾಧಿಕಾ ಕುಮಾರಸ್ವಾಮಿ ಮಸ್ತ್ ಮಜಾ]

  ಒಂದು ಕಡೆ ಸಿನಿಮಾ ಮಾಡುತ್ತಿದ್ರೇ, ಇನ್ನೊಂದು ಕಡೆ ರಾಧಿಕಾ ಕಿರುತೆರೆಯಲ್ಲಿಯೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ರಾಧಿಕಾ ಕುಮಾರ ಸ್ವಾಮಿ ಅವರ ಸ್ಮಾಲ್ ಸ್ಕ್ರೀನ್ ಎಂಟ್ರಿಯ ಬಗ್ಗೆ ಒಂದಷ್ಟು ಡೀಟೆಲ್ಸ್ ಮುಂದಿದೆ ಓದಿ...

  'ಸ್ಟಾರ್ ಸುವರ್ಣ' ದಲ್ಲಿ ರಾಧಿಕಾ ತಕಧಿಮಿತ

  'ಸ್ಟಾರ್ ಸುವರ್ಣ' ದಲ್ಲಿ ರಾಧಿಕಾ ತಕಧಿಮಿತ

  'ಸ್ಟಾರ್ ಸುವರ್ಣ' ವಾಹಿನಿಯ ಹೊಸ ಕಾರ್ಯಕ್ರಮದಲ್ಲಿ ರಾಧಿಕಾ ಕುಮಾರಸ್ವಾಮಿ ಕಾಣಿಸಿಕೊಳ್ಳಲಿದ್ದಾರೆ.

  ಡ್ಯಾನ್ ಶೋ

  ಡ್ಯಾನ್ ಶೋ

  'ಡ್ಯಾನ್ಸ್ ಡ್ಯಾನ್ಸ್ ಜೂನಿಯರ್' ಎಂಬ ಹೊಸ ಕಾರ್ಯಕ್ರಮ ಶುರುವಾಗಲಿದ್ದು, ಈ ಕಾರ್ಯಕ್ರಮದಲ್ಲಿ ರಾಧಿಕಾ ಕುಮಾರಸ್ವಾಮಿ ತೀರ್ಪುಗಾರರಾಗಿ ಭಾಗಿಯಾಗಲಿದ್ದಾರೆ.[ಹೊಸ ಮದುವೆ ಗುಲ್ಲು: ನಟಿ ರಾಧಿಕಾ ಕುಮಾರಸ್ವಾಮಿ ಬಾಯ್ಬಿಟ್ಟ ಸತ್ಯ ಏನು?]

  ಒಳ್ಳೆಯ ಡ್ಯಾನ್ಸರ್

  ಒಳ್ಳೆಯ ಡ್ಯಾನ್ಸರ್

  ರಾಧಿಕಾ ಕುಮಾರಸ್ವಾಮಿ ಅವರಿಗೆ ಡ್ಯಾನ್ಸ್ ಅಂದ್ರೆ ತುಂಬ ಇಷ್ಟ. ಅಲ್ಲದೆ ಅವರು ಒಳ್ಳೆಯ ಡ್ಯಾನ್ಸರ್ ಸಹ ಹೌದು. ಇದರಿಂದಲೇ ಈ ಕಾರ್ಯಕ್ರಮವನ್ನು ಅವರು ಆಯ್ಕೆ ಮಾಡಿಕೊಂಡಿದ್ದಾರೆ.

  ರಾಧಿಕಾ ಜೊತೆ ಪ್ರೇಮ್

  ರಾಧಿಕಾ ಜೊತೆ ಪ್ರೇಮ್

  'ಡ್ಯಾನ್ಸ್ ಡ್ಯಾನ್ಸ್ ಜೂನಿಯರ್' ಕಾರ್ಯಕ್ರಮದಲ್ಲಿ ರಾಧಿಕಾ ಕುಮಾರಸ್ವಾಮಿ ಜೊತೆ ನಟ ನೆನಪಿರಲಿ ಪ್ರೇಮ್ ಮತ್ತು ಬಾಲಿವುಡ್ ಕೊರಿಯೋಗ್ರಾಫರ್ ಸಲ್ಮಾನ್ ಕೂಡ ತೀರ್ಪುಗಾರರಾಗಿದ್ದಾರೆ.[ಅರೇ..ಮರಳಿ ಟ್ರ್ಯಾಕ್ ಗೆ ಬಂದ್ರಾ 'ಸ್ವೀಟಿ' ರಾಧಿಕಾ ಕುಮಾರಸ್ವಾಮಿ?]

  ತಯಾರಿ ನಡೆಯುತ್ತಿದೆ

  ತಯಾರಿ ನಡೆಯುತ್ತಿದೆ

  ಸದ್ಯ ರಾಧಿಕಾ ಕುಮಾರಸ್ವಾಮಿ ಇದೇ ಕಾರ್ಯಕ್ರಮದ ಪೂರ್ವಬಾವಿ ತಯಾರಿಯಲ್ಲಿ ಬಿಜಿಯಾಗಿದ್ದಾರಂತೆ.[ದಿಢೀರ್ ನಾಪತ್ತೆ ಆಗಿದ್ದ ರಾಧಿಕಾ ಕುಮಾರಸ್ವಾಮಿ ಪತ್ತೆ ಆಗಿದ್ದೆಲ್ಲಿ.?]

  ಕಾರ್ಯಕ್ರಮದ ಬಗ್ಗೆ

  ಕಾರ್ಯಕ್ರಮದ ಬಗ್ಗೆ

  'ಡ್ಯಾನ್ಸ್ ಡ್ಯಾನ್ಸ್ ಜೂನಿಯರ್' ಸ್ಟಾರ್ ಸುವರ್ಣ ವಾಹಿನಿಯ ಡ್ಯಾನ್ ರಿಯಾಲಿಟಿ ಶೋ ಆಗಿದ್ದು, ಜೂನ್ ತಿಂಗಳ ಎರಡನೇ ವಾರದಿಂದ ಶುರುವಾಗಲಿದೆ. ಶ್ವೇತ ಚಂಗಪ್ಪ ಈ ಕಾರ್ಯಕ್ರಮದ ನಿರೂಪಕಿಯಾಗಿದ್ದಾರೆ.

  ಮೊದಲ ಅನುಭವ

  ಮೊದಲ ಅನುಭವ

  ಅನೇಕ ಸಿನಿಮಾಗಳನ್ನು ಮಾಡಿದ್ದ ನಟಿ ರಾಧಿಕಾ ಕುಮಾರಸ್ವಾಮಿ ಈಗ ಮೊದಲ ಬಾರಿಗೆ ಕಿರುತೆರೆಯ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲಿದ್ದು ತುಂಬ ಉತ್ಸುಕರಾಗಿದ್ದಾರಂತೆ.[ರಾಧಿಕಾ ಕುಮಾರಸ್ವಾಮಿ ನಟನೆ ಮಾಡಲ್ಲ ಅಂದಿದ್ಯಾಕೆ? ಕಾರಣ ಇದೇನಾ?]

  English summary
  Kannada Actress 'Radhika Kumaraswamy' will be the judge for Star Suvarna Channel's 'Dance Dance Juniors' Reality show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X