»   » ರಾಕಿಂಗ್ ಸ್ಟಾರ್ ಯಶ್ ಗಡ್ಡದ ಬಗ್ಗೆ ಪ್ರಶ್ನೆ ಕೇಳಿದ ಪತ್ನಿ ರಾಧಿಕ ಪಂಡಿತ್

ರಾಕಿಂಗ್ ಸ್ಟಾರ್ ಯಶ್ ಗಡ್ಡದ ಬಗ್ಗೆ ಪ್ರಶ್ನೆ ಕೇಳಿದ ಪತ್ನಿ ರಾಧಿಕ ಪಂಡಿತ್

Posted By:
Subscribe to Filmibeat Kannada

ಯಶ್ ಮತ್ತು ರಾಧಿಕ ಪಂಡಿತ್ ಕನ್ನಡದ ರಾಕಿಂಗ್ ಜೋಡಿ. ರೀಲ್ ಮತ್ತು ರಿಯಲ್ ಲೈಫ್ ಎರಡರಲ್ಲಿಯೂ ಇವರಿಬ್ಬರು ಸೂಪರ್ ಜೋಡಿಗಳು. ಹೀಗಿರುವಾಗ ಪತ್ನಿ ರಾಧಿಕ ತಮ್ಮ ಪ್ರೀತಿಯ ಪತಿ ಯಶ್ ಅವರಿಗೆ ಒಂದು ಪ್ರಶ್ನೆ ಕೇಳಿದ್ದಾರೆ.

ಪೇಚಿಗೆ ಸಿಲುಕಿಸಿದ ''ಯಶ'ಸ್ವಿ ವಿನಾಯಕ''ನ ದರ್ಶನ ಇದೇ ಭಾನುವಾರ.!

ಇತ್ತೀಚಿಗಷ್ಟೆ ಯಶ್ ಮತ್ತು ರಾಧಿಕ ಪಂಡಿತ್ '55ನೇ ಬೆಂಗಳೂರು ಗಣೇಶ ಉತ್ಸವ' ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅಭಿಮಾನಿಗಳು ಯಶ್ ಅವರಿಗೆ ತಮ್ಮದೇ ಪ್ರಶ್ನೆಗಳನ್ನು ಕೇಳಿದರು. ಆ ಬಳಿಕ ರಾಧಿಕ ಕೂಡ ಒಂದು ಪ್ರಶ್ನೆಯನ್ನು ಯಶ್ ಮುಂದಿಟ್ಟರು.

Radhika Pandit asked funny question to Yash

ವೇದಿಕೆ ಮೇಲೆ ನಿಂತ್ತಿದ್ದ ಯಶ್ ಅವರಿಗೆ ರಾಧಿಕ ''ಈ ಗಡ್ಡವನ್ನು ಯಾವಾಗ ತೆಗೆಯುತ್ತೀರಿ'' ಎಂದು ಕೇಳಿದರು. ಅದಕ್ಕೆ ಯಶ್ ನಗುತ್ತಾ ''ಮನೆಯಲ್ಲಿ ಹೆಂಡತಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸಬೇಕು ಇಲ್ಲೂ ಬಿಡುವುದಿಲ್ವಾ.. ಎಂದು 'ಕೆ.ಜಿ.ಎಫ್' ಚಿತ್ರಕ್ಕಾಗಿ ಗಡ್ಡ ಬಿಟ್ಟಿದ್ದೇನೆ. ಆ ಸಿನಿಮಾದ ಶೂಟಿಂಗ್ ಮುಗಿದ ಮೇಲೆ ತೆಗೆಯುತ್ತೇನೆ'' ಎಂದು ಉತ್ತರಿಸಿದ್ದರು.

Radhika Pandit asked funny question to Yash

ಅಂದಹಾಗೆ, ಯಶ್ ಮತ್ತು ರಾಧಿಕ ಪಂಡಿತ್ ಭಾಗಿಯಾಗಿದ್ದ ಈ ಕಾರ್ಯಕ್ರಮ ಇಂದು ಸಂಜೆ 6 ಗಂಟೆಗೆ 'ಯಶಸ್ ವಿನಾಯಕ' ಹೆಸರಿನಲ್ಲಿ 'ಕಲರ್ಸ್ ಕನ್ನಡ' ವಾಹಿನಿಯಲ್ಲಿ ಪ್ರಸಾರವಾಗಲಿದೆ.

English summary
Actress Radhika Pandit asked funny question to her husband Actor Yash in 55thBengaluru Ganesh Utsava.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada