For Quick Alerts
  ALLOW NOTIFICATIONS  
  For Daily Alerts

  ರಾಜ್ ಕುಮಾರ್ ಹೇಳಿದ ರಾಮಾಯಣದ ಕಥೆಯಿದು

  |

  ರಾಮಾಯಣದ ಕಥೆಯನ್ನು ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಾರೆ. ಈ ಮಹಾ ಕಾವ್ಯವನ್ನು ರಾಜ್ ಕುಮಾರ್ ಪ್ರಾಣಯಮಕ್ಕೆ ಹೋಲಿಕೆ ಮಾಡಿ ಹೇಳುತ್ತಿದ್ದರಂತೆ. ಈ ವಿಷಯವನ್ನು ರಾಘವೇಂದ್ರ ರಾಜ್ ಕುಮಾರ್ ಹಂಚಿಕೊಂಡಿದ್ದಾರೆ.

  ''ನನ್ನ ಆಯಸ್ಸನ್ನೂ ಅವನಿಗೆ ನೀಡಲಿ'' ಎಂದ ಶಿವಣ್ಣ : ಭಾವುಕರಾದ ರಾಘಣ್ಣ ದಂಪತಿ

  ರಾಘವೇಂದ್ರ ರಾಜ್ ಕುಮಾರ್ 'ವಿಕೇಂಡ್ ವಿತ್ ರಮೇಶ್' ಕಾರ್ಯಕ್ರಮದ ಅತಿಥಿಯಾಗಿದ್ದಾರೆ. ಅವರ ಸಂಚಿಕೆಯ ಎರಡನೇ ಪ್ರಮೋ ಹೊರಬಂದಿದೆ. ರಾಮಾಯಣದ ಕಥೆಯನ್ನು ರಾಜ್ ಹೇಳುತ್ತಿದ್ದ ಶೈಲಿ ಈ ಮೂಲಕ ತಿಳಿದಿದೆ.

  ರಾಜ್ ಕುಮಾರ್ ರಾಮಾಯಣದ ಕಥೆಯನ್ನು ಪ್ರಣಾಯಮಕ್ಕೆ ಹೋಲಿಕೆ ಮಾಡುತ್ತಿದ್ದರಂತೆ. ''ಹೃದಯ ರಾಮ ಇರುವ ಜಾಗ... ತಲೆ ರಾವಣ ಇರುವ ಜಾಗ.. ಅವರಿಬ್ಬರ ನಡುವೆ ದಿನವೂ ಯುದ್ಧ ಆಗುತ್ತಿರುತ್ತದೆ. ಅದಕ್ಕೆ ನಾನು ಪ್ರಾಣಯಮ ಮಾಡುತ್ತೇನೆ. ಪ್ರಾಣದೇವರು ಹನುಮಂತ. ಅವನು ರಾಮನ ಬಳಿ ಹೋಗಿ ಅವನ ಸಮಸ್ಯೆ ಕೇಳುತ್ತಾನೆ. ಆಗ ಹನುಮಂತ ಎಲ್ಲ ಜೀವಕೋಶಗಳ ಮೂಲಕ ರಾವಣನ ವಿರುದ್ಧ ಹೋರಾಟ ಮಾಡಿ ಗೆಲ್ಲುತ್ತಾನೆ.'' ಎಂದು ಈ ರೀತಿಯಾಗಿ ರಾಜ್ ರಾಮಾಯಣವನ್ನು ವಿವರಿಸುತ್ತಿದ್ದರಂತೆ.

  ರಾಜ್ ಕುಮಾರ್ ಹೇಳಿದ್ದ ರಾಮಾಯಣವನ್ನು ರಾಘಣ್ಣ ಅದ್ಬುತವಾಗಿ ಹಂಚಿಕೊಂಡಿದ್ದಾರೆ. ಅಂದಹಾಗೆ, ಸದ್ಯಕ್ಕೆ ಕಾರ್ಯಕ್ರಮದ ಪ್ರೊಮೋ ಹೊರಬಂದಿದ್ದು, ಇಡೀ ಕಾರ್ಯಕ್ರಮ ಶನಿವಾರ ರಾತ್ರಿ 9.30ಕ್ಕೆ ಪ್ರಸಾರ ಆಗಲಿದೆ.

  English summary
  Kannada actor Raghavendra rajkumar participate in weekend with ramesh 4 as a guest. Raghavendra Rrajkumar's second promo out.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X