For Quick Alerts
  ALLOW NOTIFICATIONS  
  For Daily Alerts

  ಇಲ್ಲ ಸಲ್ಲದ ಅಪವಾದ: ಕನ್ನಡ ಚಿತ್ರರಂಗದ ಮೇಲೆ ಮುನಿಸಿಕೊಂಡ ರಘು ದೀಕ್ಷಿತ್.!

  By Harshitha
  |

  ಪ್ರತಿಭಾವಂತ ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್ ಬೇಸರಗೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕೆಲವರ ಮೇಲೆ ಮುನಿಸಿಕೊಂಡಿದ್ದಾರೆ.

  ''ರಘು ದೀಕ್ಷಿತ್ ಯಾವಾಗಲೂ ಫಾರಿನ್ ನಲ್ಲೇ ಇರುತ್ತಾರೆ'' ಎಂದು ಕೆಲವರು ಆಗಾಗ ಹೇಳಿ ಹೇಳಿ ರಘು ದೀಕ್ಷಿತ್ ಗೆ ಕನ್ನಡ ಚಿತ್ರರಂಗದಲ್ಲಿ ಕೆಲಸ ಸಿಗದಂತೆ ಮಾಡಿದ್ದಾರೆ. ಅಂಥವರ ವಿರುದ್ಧ ರಘು ದೀಕ್ಷಿತ್ ಕೋಪಗೊಂಡಿದ್ದಾರೆ.

  ಗಾಯಕ ರಘು ದೀಕ್ಷಿತ್ ಅಂತಹ ಸಾಧನೆ ಏನು ಮಾಡಿದ್ದಾರೆ?

  ತಮ್ಮ ಬಗ್ಗೆ ಇಲ್ಲ ಸಲ್ಲದ ಅಪವಾದ ಮಾಡುತ್ತಿರುವವರ ವಿರುದ್ಧ ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ರಘು ದೀಕ್ಷಿತ್ ಗುಡುಗಿದ್ದಾರೆ. ಮುಂದೆ ಓದಿರಿ...

  ರಘು ದೀಕ್ಷಿತ್ ಮೇಲೆ ಇರುವ ದೊಡ್ಡ ಕಂಪ್ಲೇಂಟ್

  ರಘು ದೀಕ್ಷಿತ್ ಮೇಲೆ ಇರುವ ದೊಡ್ಡ ಕಂಪ್ಲೇಂಟ್

  ''ರಘು ದೀಕ್ಷಿತ್ ಮೇಲೆ ಇರುವ ದೊಡ್ಡ ಕಂಪ್ಲೇಂಟ್ ಅಂದರೆ ಯಾವಾಗಲೂ ಫಾರಿನ್ ನಲ್ಲಿ ಇರುತ್ತಾರೆ... ಕೈಗೆ ಸಿಗುವುದೇ ಇಲ್ಲ ಅಂತ'' ಎಂದು 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಅಕುಲ್ ಬಾಲಾಜಿ ಹೇಳಿದರು.

  ಗಾಯಕ ರಘು ದೀಕ್ಷಿತ್ ಗೆ ಸಲಾಂ ಹೊಡೆದ ಬಾಲಿವುಡ್ ದಿಗ್ಗಜರು!

  ಸಿಡಿಮಿಡಿಗೊಂಡ ರಘು ದೀಕ್ಷಿತ್

  ಸಿಡಿಮಿಡಿಗೊಂಡ ರಘು ದೀಕ್ಷಿತ್

  ''ಇದೇ ನನಗೆ ಪ್ರಾಬ್ಲಂ ಆಗಿ, ಕೆಲಸ ಸಿಗದೆ ಇರುವ ಹಾಗೆ ಆಗಿದೆ ಈಗ. ನಾನು ಫಾರಿನ್ ಗೆ ಹೋಗುವುದು ವರ್ಷಕ್ಕೆ ಎರಡು ಬಾರಿ ಮಾತ್ರ. ಮಾರ್ಚ್ ಹಾಗೂ ಜುಲೈನಲ್ಲಿ ಮಾತ್ರ ನಾನು ವಿದೇಶಕ್ಕೆ ಹೋಗುತ್ತೇನೆ. ಹೋದರೂ, ಹದಿನೈದು ದಿನ ಮಾತ್ರ ಇರುತ್ತೇನೆ ಅಷ್ಟೇ'' ಎಂದು ಸ್ಪಷ್ಟನೆ ನೀಡಿದರು ರಘು ದೀಕ್ಷಿತ್

  ರಘು ದೀಕ್ಷಿತ್ ವೃತ್ತಿ ಬದುಕಿನ ಬಗ್ಗೆ ಯಾರಿಗೂ ಗೊತ್ತಿಲ್ಲದ ಸತ್ಯಗಳು!

  ಅವಕಾಶ ಮಿಸ್ ಆಗುತ್ತಿತ್ತು.!

  ಅವಕಾಶ ಮಿಸ್ ಆಗುತ್ತಿತ್ತು.!

  ''ನಾನು ಯು.ಎಸ್ ನಲ್ಲಿ ಇದ್ದಾಗ, ಪನ್ನಗಾಭರಣ ಚಿತ್ರಕ್ಕೆ ಮ್ಯೂಸಿಕ್ ಮಾಡಬೇಕು ಅಂತ ನಾನೇ ಅವರಿಗೆ ಫೋನ್ ಮಾಡಿದ್ದು. ಯಾಕಂದ್ರೆ, ಪನ್ನಗಾಭರಣ ನಿರ್ದೇಶನ ಮಾಡುವ ಮೊದಲ ಚಿತ್ರಕ್ಕೆ ನಾನೇ ಮ್ಯೂಸಿಕ್ ಮಾಡಬೇಕು ಅಂತ ವರ್ಷಗಳ ಹಿಂದೆಯೇ ಮಾತನಾಡಿಕೊಂಡಿದ್ವಿ. ಹೀಗಿದ್ದೂ, ಅವರು ಸಿನಿಮಾ ಅನೌನ್ಸ್ ಮಾಡಿದ್ದರೂ ನನಗೆ ಹೇಳಲೇ ಇಲ್ಲ. ಫೇಸ್ ಬುಕ್ ಮೂಲಕ ನನಗೆ ಪನ್ನಗಾಭರಣ ಸಿನಿಮಾ ಮಾಡ್ತಿರೋದು ಗೊತ್ತಾಯ್ತು'' ಎಂದು ನಡೆದ ಒಂದು ಘಟನೆಯನ್ನ ಇದೇ ಸಂದರ್ಭದಲ್ಲಿ ರಘು ದೀಕ್ಷಿತ್ ನೆನಪಿಸಿಕೊಂಡರು.

  ಫಾರಿನ್ ನಲ್ಲಿ ಇದ್ದರೆ ಕೆಲಸ ಆಗಲ್ಲ

  ಫಾರಿನ್ ನಲ್ಲಿ ಇದ್ದರೆ ಕೆಲಸ ಆಗಲ್ಲ

  ''ಪನ್ನಗಾಭರಣಗೆ ಫೋನ್ ಮಾಡಿ ಕೇಳಿದಾಗ, ''ನೀವು ಯು.ಎಸ್ ನಲ್ಲಿ ಇದ್ದೀರಾ. ಸಾಂಗ್ ರೆಕಾರ್ಡಿಂಗ್ ಬೇಗ ಆಗಬೇಕು. ಅದಕ್ಕೆ ಹೇಳಲಿಲ್ಲ'' ಎಂದರು. ರಾತ್ರೋ ರಾತ್ರಿ ಎರಡು ಹಾಡುಗಳನ್ನು ನಾನು ರೆಡಿ ಮಾಡಿ ಕಳುಹಿಸಿದೆ. ಆ ಎರಡೂ ಹಾಡುಗಳನ್ನು ಅವರು ಅಪ್ರೂವ್ ಮಾಡಿದರು. ಹಾಗಾಗಿ ಪನ್ನಗಾಭರಣ ಚಿತ್ರಕ್ಕೆ ಕೆಲಸ ಮಾಡುವ ಅವಕಾಶ ಸಿಕ್ತು'' - ರಘು ದೀಕ್ಷಿತ್, ಸಂಗೀತ ನಿರ್ದೇಶಕ

  ತಪ್ಪು ಕಲ್ಪನೆ

  ತಪ್ಪು ಕಲ್ಪನೆ

  ''ಜನ ಹೇಳ್ತಾರೆ 'ಕೈಗೇ ಸಿಗಲ್ಲ' ಅಂತ. ಸಿಗುವವರಿಗೆ ನಾನು ಸಿಗುತ್ತೇನೆ. ಆದರೆ ಯಾರೂ ಟ್ರೈ ಮಾಡಲ್ಲ'' - ರಘು ದೀಕ್ಷಿತ್, ಸಂಗೀತ ನಿರ್ದೇಶಕ

  ತುಂಬಾ ನೋವಾಗಿದೆ

  ತುಂಬಾ ನೋವಾಗಿದೆ

  ''ಇದರಿಂದ ನನಗೆ ತುಂಬಾ ನೋವಾಗಿದೆ. ಪ್ರಪಂಚಾದ್ಯಂತ ನನಗೆ ಮರ್ಯಾದೆ ಸಿಕ್ಕಿದೆ. ಆದರೆ ಗಾಂಧಿನಗರದ ಮೂರು ಗಲ್ಲಿಗಳಲ್ಲಿ ಮಾತ್ರ ಸಿಕ್ಕಿಲ್ಲ ನನಗೆ'' ಎಂದು ರಘು ದೀಕ್ಷಿತ್ ಬೇಸರದಿಂದ ನುಡಿದರು.

  English summary
  Music Director Raghu Dixit is annoyed with Gossips against him in Kannada Film Industry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X