For Quick Alerts
  ALLOW NOTIFICATIONS  
  For Daily Alerts

  'ವೀಕೆಂಡ್'ನಲ್ಲಿ ಸಾಧಕರ ಸೀಟ್ ಮೇಲೆ ಕೂರಲು ದ್ರಾವಿಡ್, ಕುಂಬ್ಳೆ ಒಪ್ಪಿಕೊಂಡ್ರಾ.?

  By Harshitha
  |

  ಅಸಮಾನ್ಯ ಸಾಧನೆ ಮಾಡಿರುವ ಕರುನಾಡಿನ ಪ್ರತಿಭಾವಂತರನ್ನ ಸಾಧಕರ ಸೀಟ್ ಮೇಲೆ ಕೂರಿಸಿ... ಅವರ ಮುಂದೆಯೇ... ಅವರ ಸಾಧನೆಯ ಜರ್ನಿಯನ್ನ ಅನಾವರಣ ಮಾಡುವ ವಿಶಿಷ್ಟ ಶೋ 'ವೀಕೆಂಡ್ ವಿತ್ ರಮೇಶ್'.

  ಜೀ ಕನ್ನಡ ವಾಹಿನಿಯಲ್ಲಿ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಶುರು ಆದಾಗಿನಿಂದಲೂ, ಸಾಧಕರ ಸೀಟ್ ಮೇಲೆ ಕರ್ನಾಟಕದ ಹೆಮ್ಮೆಯ 'ದಿ ವಾಲ್' ರಾಹುಲ್ ದ್ರಾವಿಡ್ ಹಾಗೂ 'ಜಂಬೋ' ಅನಿಲ್ ಕುಂಬ್ಳೆ ರವರನ್ನ ನೋಡಬೇಕು ಎಂಬ ಕನವರಿಕೆ ಅದೆಷ್ಟು ಜನರಿಗೆ ಇದ್ಯೋ... ಲೆಕ್ಕವೇ ಇಲ್ಲ.!

  ಇಲ್ಲಿಯವರೆಗೂ ಇವರನ್ನೆಲ್ಲ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಮಿಸ್ ಮಾಡಿಕೊಂಡ ವೀಕ್ಷಕರಿಗೆ, ಇನ್ಮೇಲಾದರೂ ಅವರ ಸಾಧನೆಯನ್ನ ಕಣ್ತುಂಬಿಕೊಳ್ಳುವ ಭಾಗ್ಯ ಇದ್ಯಾ.? ಈ ಪ್ರಶ್ನೆಗೆ ಸ್ವತಃ ರಮೇಶ್ ಅರವಿಂದ್ 'ವೀಕೆಂಡ್' ವೇದಿಕೆ ಮೇಲೆ ನಿಂತು ಉತ್ತರ ಕೊಟ್ಟಿದ್ದಾರೆ. ಅದೇನು ಅಂತ ತಿಳಿಯಲು ಮುಂದೆ ಓದಿ....

  'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಉದ್ದೇಶ ಏನು.?

  'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಉದ್ದೇಶ ಏನು.?

  ವೀಕ್ಷಕರು ಇಷ್ಟ ಪಡುವವರನ್ನ ಸಾಧಕರ ಸೀಟ್ ಮೇಲೆ ಕೂರಿಸಿ, ಅವರ ಕಥೆಯನ್ನ ವೀಕ್ಷಕರಿಗೆ ಹೇಳಬೇಕು ಎಂಬುದೇ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಉದ್ದೇಶ ಎಂದು ಮೊನ್ನೆ ಪ್ರಸಾರವಾದ ಸಂಚಿಕೆಯಲ್ಲಿ 'ವೀಕೆಂಡ್ ಟೆಂಟ್' ಮುಂದೆ ನಿಂತು ನಟ ರಮೇಶ್ ಅರವಿಂದ್ ಮಾತನಾಡಲು ಆರಂಭಿಸಿದರು.['ವೀಕೆಂಡ್ ವಿತ್ ರಮೇಶ್'ಗೆ ಸಾಧಕರನ್ನು ಕರೆತರುವುದೇ ದೊಡ್ಡ ಚಾಲೆಂಜ್: ರಾಘವೇಂದ್ರ ಹುಣಸೂರು]

  ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಬರ್ತಾರಾ.?

  ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಬರ್ತಾರಾ.?

  ''ನೀವು ಇಷ್ಟ ಪಡುವವರನ್ನ ಇಲ್ಲಿ ಕೂರಿಸಿ, ಅವರ ಕಥೆಯನ್ನ ನಿಮಗೆ ಹೇಳಬೇಕು ಎಂಬುದೇ ನಮ್ಮ ಆಸೆ. ನೀವು ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ನಾರಾಯಣ ಮೂರ್ತಿ, ವೀರೇಂದ್ರ ಹೆಗಡೆ ಅವರು ಬರಬೇಕು ಅಂತ ಹೇಳ್ತಿದ್ದೀರಾ.. ಅದೇ ಪ್ರಯತ್ನದಲ್ಲಿ ಇದ್ದೀವಿ. ಒಬ್ಬೊಬ್ಬರಾಗಿ ಬರ್ತಾರೆ. ಸಹಕರಿಸಿ...'' ಅಂತ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ರಮೇಶ್ ಅರವಿಂದ್ ಹೇಳಿದರು.['ವೀಕೆಂಡ್ ವಿತ್ ರಮೇಶ್-3' ಸಾಧಕರ ಪಟ್ಟಿ ಬಹಿರಂಗ ಪಡಿಸಿದ ಜೀ ಕನ್ನಡ ವಾಹಿನಿ ಮುಖ್ಯಸ್ಥ!]

  ಅಲ್ಲಿಗೆ, 'ಇವರೆಲ್ಲ' ಬರ್ತಾರಾ.?

  ಅಲ್ಲಿಗೆ, 'ಇವರೆಲ್ಲ' ಬರ್ತಾರಾ.?

  ನಟ ರಮೇಶ್ ಅರವಿಂದ್ ಮಾತನಾಡಿರುವ ಧಾಟಿ ನೋಡಿದ್ರೆ, 'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದಲ್ಲಿ ಅನಿಲ್ ಕುಂಬ್ಳೆ ಮತ್ತು ರಾಹುಲ್ ದ್ರಾವಿಡ್ ಭಾಗವಹಿಸುವುದು ಬಹುತೇಕ ಖಚಿತ.

  ರಾಘವೇಂದ್ರ ಹುಣಸೂರು ಏನು ಹೇಳ್ತಾರೆ.?

  ರಾಘವೇಂದ್ರ ಹುಣಸೂರು ಏನು ಹೇಳ್ತಾರೆ.?

  ''ಜನರು ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ರವರನ್ನ ಕರೆದುಕೊಂಡು ಬನ್ನಿ ಅಂತಾರೆ. ಅವರನ್ನ ಕರೆದುಕೊಂಡು ಬರಲು ಕಳೆದ ಎರಡು ಸೀಸನ್ ಗಳಲ್ಲೂ ಪ್ರಯತ್ನ ಪಟ್ಟಿದ್ವಿ. ಆದ್ರೆ, ಅವರ ಬಿಜಿ ಶೆಡ್ಯೂಲ್ ನಿಂದ ಸಾಧ್ಯವಾಗಿರಲಿಲ್ಲ'' ಎನ್ನುತ್ತಾರೆ ಜೀ ಕನ್ನಡ ವಾಹಿನಿ ಮುಖ್ಯಸ್ಥ ರಾಘವೇಂದ್ರ ಹುಣಸೂರು.

  ಬಹಿರಂಗ ಆಗಿರುವ ಪಟ್ಟಿಯಲ್ಲಿ ಅನಿಲ್ ಕುಂಬ್ಳೆ ಹೆಸರಿದೆ.!

  ಬಹಿರಂಗ ಆಗಿರುವ ಪಟ್ಟಿಯಲ್ಲಿ ಅನಿಲ್ ಕುಂಬ್ಳೆ ಹೆಸರಿದೆ.!

  ಈಗಾಗಲೇ ರಾಘವೇಂದ್ರ ಹುಣಸೂರು ಬಹಿರಂಗ ಪಡಿಸಿರುವ 'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದಲ್ಲಿ ಭಾಗವಹಿಸುವವರ ಸಾಧಕರ ಪಟ್ಟಿಯಲ್ಲಿ ಅನಿಲ್ ಕುಂಬ್ಳೆ ಹೆಸರಿದೆ. ಅಲ್ಲಿಗೆ, 'ವೀಕೆಂಡ್ ಟೆಂಟ್' ನಲ್ಲಿ ಅನಿಲ್ ಕುಂಬ್ಳೆ ಜೀವನ ಚರಿತ್ರೆ ಅನಾವರಣ ಆಗುವುದು ಪಕ್ಕಾ.

  ಹಾಗಾದ್ರೆ, ರಾಹುಲ್ ದ್ರಾವಿಡ್.?

  ಹಾಗಾದ್ರೆ, ರಾಹುಲ್ ದ್ರಾವಿಡ್.?

  ಸದ್ಯಕ್ಕೆ ಅನಿಲ್ ಕುಂಬ್ಳೆ ಹೆಸರು ಮಾತ್ರ ಖಾತ್ರಿ ಆಗಿದೆ. ರಾಹುಲ್ ದ್ರಾವಿಡ್ ಒಪ್ಪಿಗೆ ನೀಡಿದ್ದಾರೋ, ಇಲ್ವೋ... ಇನ್ನೂ ಕನ್ಫರ್ಮ್ ಆಗಿಲ್ಲ.

  English summary
  Kannada Actor Ramesh Aravind confirms regarding Anil Kumble and Rahul Dravid taking part in Zee Kannada's popular show 'Weekend With Ramesh'

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X