»   » 'ನ್ಯೂಸ್'ನಲ್ಲಿ ಏನೂ ಇಲ್ಲ ಅಂದ್ರು, 'ವೀಕೆಂಡ್'ನಲ್ಲಿ ಇನ್ನೆರಡೇ ತಿಂಗಳು ಅಂದ್ರು: ನಿಜಾ ಏನು?

'ನ್ಯೂಸ್'ನಲ್ಲಿ ಏನೂ ಇಲ್ಲ ಅಂದ್ರು, 'ವೀಕೆಂಡ್'ನಲ್ಲಿ ಇನ್ನೆರಡೇ ತಿಂಗಳು ಅಂದ್ರು: ನಿಜಾ ಏನು?

Posted By:
Subscribe to Filmibeat Kannada

ಕಳೆದ ಕೆಲವು ದಿನಗಳಿಂದ ನಟ ರಕ್ಷಿತ್ ಶೆಟ್ಟಿ ಮದುವೆ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ, ಟಿವಿ ಮಾಧ್ಯಮಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಗಿದೆ.

ಈ ವಿಚಾರವಾಗಿ ಸ್ವತಃ ರಕ್ಷಿತ್ ಶೆಟ್ಟಿ ಅವರೇ ಪ್ರತಿಕ್ರಿಯೆ ನೀಡಿದ್ದು, ಇದೆಲ್ಲಾ ಸುಳ್ಳು, ಇನ್ನು 2 ವರ್ಷ ಮದುವೆ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ ಎಂದು ಸ್ವಷ್ಟನೆ ಕೊಟ್ಟಿದ್ದರು. ಆದ್ರೆ, 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಮದುವೆ ಬಗ್ಗೆ ಬೇರೆಯದ್ದೇ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ.['ಕಿರಿಕ್ ಜೋಡಿ' ರಕ್ಷಿತ್ ಶೆಟ್ಟಿ-ರಶ್ಮಿಕಾ ಮದುವೆ ಅಂತೆ!]

ಸದ್ಯಕ್ಕೆ, ಏನೂ ಇಲ್ಲ ಎನ್ನುತ್ತಿದ್ದ ಸಿಂಪಲ್ ಸ್ಟಾರ್, ಕರ್ನಾಟಕ ಜನರು ಮುಂದೆ ಸತ್ಯ ಬಾಯ್ಬಿಟ್ಟಿದ್ದಾರೆ. ಹಾಗಾದ್ರೆ, ರಕ್ಷಿತ್ ಶೆಟ್ಟಿ ತಮ್ಮ ಮದುವೆ ಬಗ್ಗೆ ಏನ್ ಹೇಳಿದರು ಅಂತ ಮುಂದೆ ಓದಿ............

ರಮೇಶ್ ಎಸೆದ ಗೂಗ್ಲಿಗೆ ಬೋಲ್ಡ್ ಆದ ಸಿಂಪಲ್ ಸ್ಟಾರ್!

ಟಿವಿ ಮಾಧ್ಯಮಗಳು, ಪತ್ರಿಕೆಗಳಿಗೆಲ್ಲ ಪ್ರತಿಕ್ರಿಯಿಸಿದ್ದ ರಕ್ಷಿತ್ ಶೆಟ್ಟಿ, ''ಮದುವೆ ಬಗ್ಗೆ ಯೋಚನೆ ಮಾಡಿಲ್ಲ, ಇನ್ನು ಎರಡು ವರ್ಷ ಅಂತ ಹೇಳಿದ್ದರು. ಆದ್ರೆ, ರಮೇಶ್ ಅರವಿಂದ್ ಅವರು ಎಸೆದ ಗೂಗ್ಲಿ ಪ್ರಶ್ನೆಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ.['ವೀಕೆಂಡ್' ಕಾರ್ಯಕ್ರಮಕ್ಕೆ ರಕ್ಷಿತ್ ಯಾಕೆ.? ಅಂತ ಕೇಳಿದವರಿಗೆ 'ಉತ್ತರ' ಸಿಕ್ಕಿದೆ.! ]

ರಮೇಶ್ ಅರವಿಂದ್ ಕೇಳಿದ ಪ್ರಶ್ನೆ?

''ಒಂದು ಗಾಳಿ ಸುದ್ದಿ ಕೇಳಿಸ್ತು. ಹೆಣ್ಮಕ್ಕಳು ಬೇಜಾರಾಗಬಹುದು...! ಆದ್ರೆ, ಗಂಡು ಮಕ್ಕಳು ಖುಷಿ ಪಡ್ತಾರೆ....ಇಟ್ ಈಸ್ ರಿಯಲಿ ಟ್ರೂ.....ಇದು ಸಸ್ಪೆನ್ಸ್ ಆಗಿ ಬಿಟ್ಬಿಡೋಣ್ವ ಅಥವಾ ಹೇಳ್ತಿರಾ'' ಎಂದು ರಮೇಶ್ ಅರವಿಂದ್ ಕೇಳಿದರು.[ತ್ರಿಭುವನ್ ಚಿತ್ರಮಂದಿರದ ಮುಂದೆ ನಟ ರಕ್ಷಿತ್ ಶೆಟ್ಟಿ ಕಣ್ಣೀರಿಟ್ಟಿದ್ಯಾಕೆ.?]

ಅಡ್ಡಗೋಡೆ ಮೇಲೆ ದೀಪವಿಟ್ಟ ರಕ್ಷಿತ್!

ಮಾಧ್ಯಮಗಳು ಕೇಳಿದಾಗ ಎರಡು ವರ್ಷ, ಸಿನಿಮಾದಲ್ಲಿ ಬ್ಯುಸಿಯಾಗಿದ್ದೀನಿ ಎಂದಿದ್ದ ರಕ್ಷಿತ್ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ''ಇನ್ನೆರೆಡು ತಿಂಗಳು ಗೊತ್ತಾಗುತ್ತೆ'' ಬಿಡಿ ಸಾರ್ ಎಂದು ಪರೋಕ್ಷವಾಗಿ ಇದು ಸತ್ಯವೆಂದು ಒಪ್ಪಿಕೊಂಡಿದ್ದಾರೆ.[ಈ ವಾರ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ 'ಯುವ' ಸಾಧಕರು.! ]

ಇನ್ನೆರೆಡು ತಿಂಗಳಲ್ಲಿ ಏನು ಗೊತ್ತಾಗಲಿದೆ!

ಸ್ವತಃ ರಕ್ಷಿತ್ ಶೆಟ್ಟಿ ಅವರೇ ಹೇಳಿದಾಗೆ, ಇನ್ನೆರೆಡು ತಿಂಗಳಲ್ಲಿ ಗೊತ್ತಾಗಲಿದೆ ಎಂದಿದ್ದಾರೆ. ಹಾಗಾದ್ರೆ, ಈ ಎರಡು ತಿಂಗಳಲ್ಲಿ ಏನು ಗೊತ್ತಾಗಲಿದೆ? ಲವ್ ವಿಚಾರನಾ ಅಥವಾ ಮದುವೆ ವಿಚಾರನಾ?[ಪ್ರೋಮೋ ನೋಡಿ: ಸಾಧಕರ ಸೀಟ್ ಮೇಲೆ ಕೂತು ಕಣ್ಣೀರಿಟ್ಟ ರಕ್ಷಿತ್ ಶೆಟ್ಟಿ ]

ಎಂಗೆಜ್ ಮೆಂಟ್ ಪ್ಲಾನ್ ಇರಬಹುದಾ?

ಸದ್ಯ, ಗಾಂಧಿನಗರದಲ್ಲಿ ಹರಿದಾಡುತ್ತಿರುವ ಮಾಹಿತಿಗಳ ಪ್ರಕಾರ, ಮೇ ತಿಂಗಳ ಕೊನೆಯಲ್ಲಿ ರಕ್ಷಿತ್ ಶೆಟ್ಟಿ ಅವರ ಎಂಗೆಜ್ ಮೆಂಟ್ ನಡೆಯಲಿದೆ. ಜುಲೈ ತಿಂಗಳಲ್ಲಿ ಮದುವೆ ಆಗಲಿದ್ದಾರೆ ಎನ್ನಲಾಗುತ್ತಿತ್ತು. ಬಹುಶಃ ಇನ್ನೆರೆಡು ತಿಂಗಳು ಅಂದಿದ್ದು ಇದೇ ವಿಚಾರಕ್ಕೆ ಇರಬಹುದು ಎಂಬ ಕುತೂಹಲ ಈಗ ಕಾಡುತ್ತಿದೆ.['ವೀಕೆಂಡ್ ವಿತ್ ರಮೇಶ್'ನಲ್ಲಿ ರಕ್ಷಿತ್ ಶೆಟ್ಟಿ: ಸಿಡಿಮಿಡಿಗೊಂಡ ವೀಕ್ಷಕರು.! ]

ಹುಡುಗಿ ಯಾರು?

ಅಂದ್ಹಾಗೆ, ರಕ್ಷಿತ್ ಶೆಟ್ಟಿ ಅವರ ಜೊತೆಯಲ್ಲಿ ತಳುಕುಹಾಕಿಕೊಂಡಿರುವ ಹೆಸರು ಬೇರೆ 'ಕಿರಿಕ್ ಪಾರ್ಟಿ' ಚಿತ್ರದ ನಾಯಕಿ 'ರಶ್ಮಿಕಾ ಮಂದಣ್ಣ'. ರಶ್ಮಿಕಾ ಮತ್ತು ರಕ್ಷಿತ್ ಪರಸ್ಪರ ಪ್ರೀತಿಸುತ್ತಿದ್ದಾರಂತೆ. ಎರಡು ಮನೆಯವರು ಕೂಡ ಒಪ್ಪಿಕೊಂಡಿದ್ದಾರಂತೆ.['ಕರ್ಣ-ಸಾನ್ವಿ'ಯ ಮದುವೆ: ರಶ್ಮಿಕಾ ಕಡೆಯಿಂದ ಡೌಟ್ ಕ್ಲಿಯರ್]

ರಶ್ಮಿಕಾ ಮಂದಣ್ಣ ಏನ್ ಹೇಳಿದ್ದರು!

ಈ ಬಗ್ಗೆ ರಶ್ಮಿಕಾ ಅವರು ಕೂಡ ಮಾಧ್ಯಮಗಳಿಗೆ ಪ್ರತಿಕ್ರಿಯೆಸಿದ್ದು, ಇದೆಲ್ಲಾ ಸುಳ್ಳು ಸುದ್ದಿ, ಸದ್ಯಕ್ಕೆ ಮದುವೆ ಆಗುವ ಪ್ಲಾನ್ ಇಲ್ಲ, ನಾನು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದೀನಿ'' ಎಂದಿದ್ದರು.

2 ತಿಂಗಳು ಕಾದು ನೋಡಿ!

ಈ ಎಲ್ಲ ಅಂತೆ ಕಂತೆಗಳ ಮಧ್ಯೆ 2 ತಿಂಗಳು ಕಾದರೇ, ರಕ್ಷಿತ್ ಶೆಟ್ಟಿ ಹೇಳಿದ್ದೇನು ಎಂದು ಗೊತ್ತಾಗಲಿದೆ. ಲವ್ವಾ.....ಮದುವೆನೇ.....ಬೇರೆ ಏನಾದರೂ ಇದಿಯಾ? ಎಂದು ಕಾದು ನೋಡಿ.....

English summary
Kannada Actor Rakshit Shetty Gives Hint About Latest Gossip in Weekend with Ramesh-3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada