For Quick Alerts
  ALLOW NOTIFICATIONS  
  For Daily Alerts

  ಅವಕಾಶ ಇದ್ದಿದ್ರೆ ರಕ್ಷಿತ್ ಶೆಟ್ಟಿ 'ಕೋಟ್ಯಧಿಪತಿ'ಯಲ್ಲಿ ಹೆಚ್ಚು ಹಣ ಗೆಲ್ತಿದ್ರು.! ಹಾಗಿದ್ರೆ ಎಷ್ಟು ಗೆದ್ರು.?

  By Bharath Kumar
  |

  Recommended Video

  Kannadada Kotyadipathi Season 3 : ಕೋಟಿ ಆಟದಲ್ಲಿ ರಕ್ಷಿತ್ ಗೆದ್ದಿದೆಷ್ಟು..? | Filmibeat Kannada

  ಕನ್ನಡದ ಕೋಟ್ಯಧಿಪತಿ ಮೂರನೇ ಆವೃತ್ತಿಯ 50ನೇ ಸಂಚಿಕೆಗೆ ರಕ್ಷಿತ್ ಶೆಟ್ಟಿ ಸ್ಪರ್ಧಿಯಾಗಿ ಆಗಮಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಅವರ ನಂತರ ಹಾಟ್ ಸೀಟ್ ನಲ್ಲಿ ಕೂತಿರುವ ಮೂರನೇ ಸೆಲೆಬ್ರಿಟಿ ಸ್ಪರ್ಧಿ ರಕ್ಷಿತ್ ಶೆಟ್ಟಿ.

  50ನೇ ಸಂಚಿಕೆಯಲ್ಲಿ ಭರ್ಜರಿಯಾಗಿ ಆಟವಾಡಿದ ರಕ್ಷಿತ್ ಶೆಟ್ಟಿ ದೊಡ್ಡ ಮೊತ್ತವನ್ನ ಗೆದ್ದಿದ್ದಾರೆ. ಬಹುಶಃ ಸಿಂಪಲ್ ಹುಡುಗನ ಈ ಆಟ ನೋಡ್ತಿದ್ರೆ, ಗಣೇಶ್ ಮತ್ತು ಯಶ್ ಅವರ ಗಳಿಸಿದ ಮೊತ್ತವನ್ನ ದಾಟಿ ಮುನ್ನುಗ್ಗುತ್ತಾರೆ ಎಂಬ ಭರವಸೆ ಮೂಡಿಸಿತ್ತು. ಆದ್ರೆ, ಅದಕ್ಕೆ ಅವಕಾಶ ಸಿಕ್ಕಿಲ್ಲ.

  ಹೌದು, ಎರಡು ಜಗಲಿಕಟ್ಟೆಯನ್ನ ಯಶಸ್ವಿಯಾಗಿ ದಾಟಿದ್ದ ರಕ್ಷಿತ್ ಶೆಟ್ಟಿ ಕೋಟಿ ರೂಪಾಯಿ ಗೆಲ್ಲುವ ಸನಿಹದಲ್ಲಿದ್ದರು. ಆದ್ರೆ, ವಿಶೇಷ ಸಂಚಿಕೆಯಾಗಿದ್ರಿಂದ ಆಟವನ್ನ ಅಲ್ಲಿಗೆ ಮುಕ್ತಾಯಗೊಳಿಸಿದರು. ಹಾಗಿದ್ರೆ, ಕೋಟ್ಯಧಿಪತಿಯಲ್ಲಿ ರಕ್ಷಿತ್ ಶೆಟ್ಟಿ ಗೆದ್ದ ಹಣವೆಷ್ಟು.? ಮುಂದೆ ಓದಿ.....

  ರಕ್ಷಿತ್ ಶೆಟ್ಟಿಯ ಮೊದಲ ಪ್ರಶ್ನೆ.?

  ರಕ್ಷಿತ್ ಶೆಟ್ಟಿಯ ಮೊದಲ ಪ್ರಶ್ನೆ.?

  ತುಳು ಭಾಷೆಯಲ್ಲಿ 'ಮರಿಯಾಲ' ಎಂದು ಯಾವ ಕಾಲವನ್ನ ಕರೆಯುತ್ತಾರೆ.?
  A ಮಳೆಗಾಲ
  B ಚಳಿಗಾಲ
  C ಬೇಸಿಗೆ ಕಾಲ
  D ಬರಗಾಲ
  ಸರಿ ಉತ್ತರ: A ಮಳೆಗಾಲ

  'ಕನ್ನಡದ ಕೋಟ್ಯಧಿಪತಿ'ಯಲ್ಲಿ ದಾಖಲೆ ಬರೆದ ರಾಕಿಂಗ್ ಸ್ಟಾರ್'ಕನ್ನಡದ ಕೋಟ್ಯಧಿಪತಿ'ಯಲ್ಲಿ ದಾಖಲೆ ಬರೆದ ರಾಕಿಂಗ್ ಸ್ಟಾರ್

  ಶೆಟ್ರು ಎದುರಿಸಿದ ಎರಡನೇ ಪ್ರಶ್ನೆ.?

  ಶೆಟ್ರು ಎದುರಿಸಿದ ಎರಡನೇ ಪ್ರಶ್ನೆ.?

  ಯಕ್ಷಗಾನ ಮತ್ತು ಬಯಲಾಟಗಳಲ್ಲಿ ಬರುವ ಹಾಸ್ಯಗಾರ ವಿದೂಷಕನ ಪಾತ್ರವನ್ನ ಯಾವ ಹೆಸರಿನಿಂದ ಕರೆಯುತ್ತಾರೆ.
  A ಖೋಡಿ
  B ಕೋಣ
  C ಕೋಡಂಗಿ
  D ಕೋಳಿ
  ಸರಿ ಉತ್ತರ: B ಕೋಣ

  ಹತ್ತು ಸಾವಿರ ಪ್ರಶ್ನೆ.?

  ಹತ್ತು ಸಾವಿರ ಪ್ರಶ್ನೆ.?

  ಬಾರ್ಡರ್-ಗವಾಸ್ಕರ್ ಟೆಸ್ಟ್ ಕ್ರಿಕೆಟ್ ಸರಣಿಯೂ ಯಾವ ಭಾರತ ಮತ್ತು ಯಾವ ದೇಶದ ನಡುವೆ ನಡೆಯುತ್ತೆ.?
  A ಇಂಗ್ಲೆಂಡ್
  B ನ್ಯೂಜಿಲ್ಯಾಂಡ್
  C ಆಸ್ಟ್ರೇಲಿಯಾ
  D ಪಾಕಿಸ್ತಾನ
  ಸರಿ ಉತ್ತರ: C ಆಸ್ಟ್ರೇಲಿಯಾ

  'ಕನ್ನಡದ ಕೋಟ್ಯಧಿಪತಿ-3'ಯಲ್ಲಿ ಅತಿ ಹೆಚ್ಚು ಹಣ ಗೆದ್ದ 'ಗೋಲ್ಡನ್ ಸ್ಟಾರ್''ಕನ್ನಡದ ಕೋಟ್ಯಧಿಪತಿ-3'ಯಲ್ಲಿ ಅತಿ ಹೆಚ್ಚು ಹಣ ಗೆದ್ದ 'ಗೋಲ್ಡನ್ ಸ್ಟಾರ್'

  ಇಪ್ಪತ್ತು ಸಾವಿರ ರೂಪಾಯಿ ಹಂತ

  ಇಪ್ಪತ್ತು ಸಾವಿರ ರೂಪಾಯಿ ಹಂತ

  ಮಹಾತ್ಮಾ ಗಾಂಧೀಜಿಯವರ ದಿನನಿತ್ಯದ ಪ್ರಾರ್ಥನೆಗಳಲ್ಲಿ ಒಂದಾಗಿದ್ದ 'ವೈಷ್ಣವ ಜನ ತೋ' ಭಜನೆಯು ಮೂಲವಾಗಿ ಯಾವ ಭಾಷೆಯಲ್ಲಿ ರಚಿಸಲಾಗಿತ್ತು.?
  A ಹಿಂದಿ
  B ಗುಜರಾತಿ
  C ಬಂಗಾಳಿ
  D ಮೈಥಿಲಿ
  ಸರಿ ಉತ್ತರ: B ಗುಜರಾತಿ

  40 ಸಾವಿರ ರೂಪಾಯಿ ಪ್ರಶ್ನೆ.?

  40 ಸಾವಿರ ರೂಪಾಯಿ ಪ್ರಶ್ನೆ.?

  ಜರ್ಮನಿಯ ಕಾರ್ ತಯಾರಕ ಕಂಪನಿ 'ಫೋಕ್ಸ್ ವ್ಯಾಗನ್'ನ ಅರ್ಥ ಏನು.?
  A ಕೇಳು
  B ಮಹಾಪ್ರಪಂಚ
  C ಆಧುನಿಕತೆ
  D ಜನಗಳ ಕಾರು
  ಸರಿ ಉತ್ತರ: D ಜನಗಳ ಕಾರು

  80 ಸಾವಿರ ರೂಪಾಯಿ ಪ್ರಶ್ನೆ.?

  80 ಸಾವಿರ ರೂಪಾಯಿ ಪ್ರಶ್ನೆ.?

  ಇವುಗಳಲ್ಲಿ ಷೇಕ್ಸ್ ಪಿಯರ್ ಅವರ 'ಮ್ಯಾಕ್ ಬೆತ್' ನಾಟಕವನ್ನ ಆಧರಿಸಿದ, 2017ನೇ ಸಾಲಿನ ರಾಷ್ಟ್ರಪ್ರಶಸ್ತಿಯನ್ನ ಪಡೆದುಕೊಂಡ ಚಿತ್ರ ಯಾವುದು.?
  A ಪಿಲಿಬೈಲ್ ಯಮುನಕ್ಕ
  B ಅಪ್ಪೆ ಟೀಚರ್
  C ಪಡ್ಡಾಯಿ
  D ಅರೆ ಮರ್ಲೆರ್
  ಸರಿ ಉತ್ತರ: C ಪಡ್ಡಾಯಿ

  'ಲೈಫ್ ಲೈನ್' ಇದ್ರೂ 50 ಲಕ್ಷದ ಪ್ರಶ್ನೆಗೆ ಆಟ 'ಕ್ವಿಟ್' ಮಾಡಿದ ಸುಜಾತ, ಯಾಕೆ.? 'ಲೈಫ್ ಲೈನ್' ಇದ್ರೂ 50 ಲಕ್ಷದ ಪ್ರಶ್ನೆಗೆ ಆಟ 'ಕ್ವಿಟ್' ಮಾಡಿದ ಸುಜಾತ, ಯಾಕೆ.?

  1.60 ಲಕ್ಷದ ಪ್ರಶ್ನೆ.?

  1.60 ಲಕ್ಷದ ಪ್ರಶ್ನೆ.?

  ಬೀದರ್ ಮೇಲೆ ದಾಳಿ ನಡೆಸುವಂತೆ ಒರಿಸ್ಸಾದ ರಾಜನಿಗೆ ಪತ್ರ ಬರೆದಿರುವುದಾಗಿ ಸುಳ್ಳು ಆರೋಪವನ್ನ ಎದುರಿಸಿದ ಬಹಮನಿ ಸಾಮ್ರಾಜ್ಯದ ಪ್ರಧಾನಮಂತ್ರಿ ಯಾರು.?
  A ಮೊಹಮ್ಮದ್ ಗವಾನ್
  B ಮುನ್ನಾವರ್ ಖಾನ್
  C ಯಾಹ್ಯ ಸಲೆಹ್
  D ಮೊಹಮ್ಮದ್ ಸಲೆಹ್
  ಸರಿ ಉತ್ತರ: A ಮೊಹಮ್ಮದ್ ಗವಾನ್

  'ಕನ್ನಡದ ಕೋಟ್ಯಧಿಪತಿ'ಯಲ್ಲಿ ಇತಿಹಾಸ ಸೃಷ್ಟಿಸಿದ ಸುಜಾತ 'ಕನ್ನಡದ ಕೋಟ್ಯಧಿಪತಿ'ಯಲ್ಲಿ ಇತಿಹಾಸ ಸೃಷ್ಟಿಸಿದ ಸುಜಾತ

  3.20 ಲಕ್ಷದ ಪ್ರಶ್ನೆ.?

  3.20 ಲಕ್ಷದ ಪ್ರಶ್ನೆ.?

  1992ರಲ್ಲಿ 'ಭಾರತ ರತ್ನ' ಪ್ರಶಸ್ತಿ ಪಡೆದ ಮೊದಲ ಭಾರತೀಯ ಉದ್ಯಮಿ ಯಾರು.?
  A ಘನಶ್ಯಾಮ್ ದಾಸ್ ಬಿರ್ಲಾ
  B ಜೆಆರ್ ಡಿ ಟಾಟಾ
  C ಧೀರೂಭಾಯಿ ಅಂಬಾನಿ
  D ವಾಲ್ ಚಂದ್ ಹಿರಾಚಂದ್
  ಸರಿ ಉತ್ತರ: B ಜೆಆರ್ ಡಿ ಟಾಟಾ

  1 ಕೋಟಿ ರೂಪಾಯಿಯ ಪ್ರಶ್ನೆ ಎದುರಿಸಿದ ಸುಜಾತ.!1 ಕೋಟಿ ರೂಪಾಯಿಯ ಪ್ರಶ್ನೆ ಎದುರಿಸಿದ ಸುಜಾತ.!

  6.40 ಲಕ್ಷದ ಪ್ರಶ್ನೆ.?

  6.40 ಲಕ್ಷದ ಪ್ರಶ್ನೆ.?

  1932 ರಲ್ಲಿ ಆರಂಭಿಸಲಾದ ಯಾವ ಚಲನಚಿತ್ರೋತ್ಸವ ವಿಶ್ವದಲ್ಲೇ ಅತ್ಯಂತ ಹಳೆಯದಾಗಿದೆ.?
  A ಸನ್ ಡ್ಯಾನ್ಸ್ ಚಲನಚಿತ್ರೋತ್ಸವ
  B ಬರ್ಲಿನ್ ಚಲನಚಿತ್ರೋತ್ಸವ
  C ಮುಂಬಯಿ ಚಲನಚಿತ್ರೋತ್ಸವ
  D ವೆನಿಸ್ ಚಲನಚಿತ್ರೋತ್ಸವ
  ಸರಿ ಉತ್ತರ: D ವೆನಿಸ್ ಚಲನಚಿತ್ರೋತ್ಸವ

  ಆಟ ಮುಗಿಸಿದ ರಕ್ಷಿತ್

  ಆಟ ಮುಗಿಸಿದ ರಕ್ಷಿತ್

  ಹನ್ನೊಂದು ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡಿದ ರಕ್ಷಿತ್ ಶೆಟ್ಟಿ 6.40 ಲಕ್ಷ ಗೆದ್ದಿದ್ದಾರೆ. ಅಲ್ಲಿಗೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ನಟ ರಕ್ಷಿತ್ ಶೆಟ್ಟಿ ಅವರು ತಮ್ಮ ಆಟ ಮುಗಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ 25 ಲಕ್ಷ ಹಾಗೂ ಗಣೇಶ್ 12.5 ಲಕ್ಷವನ್ನ ಗೆದ್ದಿದ್ದಾರೆ.

  English summary
  Kannada actor rakshit shetty participate in Kannadada Kotyadipathi Reality show. here is the highlights of rakshit shetty episode in kannadada kotyadhipathi'.
  Saturday, September 1, 2018, 13:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X