»   » ಸಿಂಪಲ್ ಹುಡುಗನ ಲಕ್ ಬದಲಾಯಿಸಿದ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ'

ಸಿಂಪಲ್ ಹುಡುಗನ ಲಕ್ ಬದಲಾಯಿಸಿದ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ'

Posted By: Naveen
Subscribe to Filmibeat Kannada

'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಸಿನಿಮಾ ಮೂಲಕ ನಟ ರಕ್ಷಿತ್ ಶೆಟ್ಟಿ 'ಸಿಂಪಲ್ ಸ್ಟಾರ್' ಅಂತ್ಲೇ ಫೇಮಸ್ ಆದರು. ಮೊದಲೆರಡು ಸಿನಿಮಾಗಳು ಕೈ ಕೊಟ್ಟಾಗ ಚಿತ್ರರಂಗಕ್ಕೆ ಗುಡ್ ಬೈ ಹೇಳಲು ಮನಸ್ಸು ಮಾಡಿದ್ದ ರಕ್ಷಿತ್ ಮತ್ತೆ ಪುಟಿದೇಳಿದ್ದು ಇದೇ ಸಿನಿಮಾದ ಮೂಲಕ.![ತ್ರಿಭುವನ್ ಚಿತ್ರಮಂದಿರದ ಮುಂದೆ ನಟ ರಕ್ಷಿತ್ ಶೆಟ್ಟಿ ಕಣ್ಣೀರಿಟ್ಟಿದ್ಯಾಕೆ.? ]

ಸೋಲು, ನೋವು, ಅವಮಾನ ಗಳಿಂದ ತುಂಬಿದ ರಕ್ಷಿತ್ ಶೆಟ್ಟಿ ಸಿನಿಜರ್ನಿಯಲ್ಲಿ ಮೊದಲ ನಗು ಮೂಡಿಸಿದ್ದು 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಎನ್ನುವ ಮ್ಯಾಜಿಕಲ್ ಸಿನಿಮಾ. ಈ ಸಿನಿಮಾದಿಂದ ರಕ್ಷಿತ್ ಶೆಟ್ಟಿಯ ಅಸಲಿ ಪ್ರತಿಭೆ ಹೊರಗೆ ಬಂತು.['ಕಿರಿಕ್ ಜೋಡಿ' ರಕ್ಷಿತ್ ಶೆಟ್ಟಿ-ರಶ್ಮಿಕಾ ಮದುವೆ ಅಂತೆ!]

'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಸಿನಿಮಾದಿಂದ ರಕ್ಷಿತ್ ಅದೃಷ್ಟ ಖುಲಾಯಿಸಿತು. ಈ ಸಿನಿಮಾ ಮಾಡದಿದ್ದರೆ ಬಹುಶಃ ರಕ್ಷಿತ್ ಇವತ್ತು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಇಂತಿಪ್ಪ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಸಿನಿಮಾ ಹುಟ್ಟಿದ ಕಥೆಯನ್ನ ರಕ್ಷಿತ್ ಶೆಟ್ಟಿ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಬಿಚ್ಚಿಟ್ಟರು.

ಸುನಿ ಪರಿಚಯ ಆಗಿದ್ದು ಹೇಗೆ?

ಎರಡು ಸಿನಿಮಾಗಳ ಸೋಲಿನಿಂದ ಕಂಗೆಟ್ಟಿದ್ದ ರಕ್ಷಿತ್ ಗೆ ಆಕಸ್ಮಿಕವಾಗಿ ಒಮ್ಮೆ ನಿರ್ದೇಶಕ ಸುನಿ ಪರಿಚಯವಾದರು. ರಕ್ಷಿತ್ ಶೆಟ್ಟಿ ರವರನ್ನ ನೋಡಿ 'ಹುಡುಗ ನೋಡಲು ಚೆನ್ನಾಗಿದ್ದಾನೆ'. ತಮ್ಮ ಪಾತ್ರಕ್ಕೂ ಸೂಟ್ ಆಗ್ತಾನೆ ಅಂತ ಸುನಿ ಆಫರ್ ನೀಡಿದರು.['ಕರ್ಣ-ಸಾನ್ವಿ'ಯ ಮದುವೆ: ರಶ್ಮಿಕಾ ಕಡೆಯಿಂದ ಡೌಟ್ ಕ್ಲಿಯರ್ ]

ಸುನಿ ಹೇಳಿದ ಕಥೆ ಇಷ್ಟ ಆಯ್ತು

ರಕ್ಷಿತ್ ಗೆ ತುಂಬ ಜನ ನಿರ್ದೇಶಕರು ಕಥೆ ಹೇಳಿದ ಬಳಿಕ ನೀವೇ ಪ್ರೊಡ್ಯೂಸ್ ಮಾಡಿ ಅಂತ ಕೇಳಿಬಿಡುತ್ತಿದ್ದರಂತೆ. ಅದಕ್ಕೆ ಸುನಿ ಕೂಡ ಅದೇ ತರಹ ಇರಬೇಕು ಅಂತ ರಕ್ಷಿತ್ ತಿಳಿದಿದ್ದರು. ಆದರೆ ನಂತರ ಕಥೆ ಕೇಳಿ ಇಷ್ಟ ಆಗಿ ಸಿನಿಮಾ ಒಪ್ಪಿಕೊಂಡರಂತೆ.[ಫೇಸ್ ಬುಕ್ ರಣರಂಗ: ಜೋರಾಯ್ತು ಯಶ್-ರಕ್ಷಿತ್ ಶೆಟ್ಟಿ ಅಭಿಮಾನಿಗಳ ಮುಷ್ಟಿ ಕಾಳಗ.!]

ಬಜೆಟ್ ಇರಲಿಲ್ಲ

'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಸಿನಿಮಾ ಮಾಡಲು ಸರಿಯಾಗಿ ಬಜೆಟ್ ಇರಲಿಲ್ಲವಂತೆ. ಆಗ ಕೇವಲ 30 ಲಕ್ಷದಲ್ಲಿ ಸಿನಿಮಾ ಮಾಡೋಣ ಅಂತ ನಿರ್ಧಾರ ಮಾಡಿದರಂತೆ.

ಟ್ರೇಲರ್ ಟ್ರೆಂಡ್ ಸೃಷ್ಠಿ ಮಾಡಿತು.!

ಒಂದು ಸಿನಿಮಾಗೆ ಟ್ರೇಲರ್ ಎಷ್ಟು ಮುಖ್ಯ ಅಂತ ಕನ್ನಡದಲ್ಲಿ ತೋರಿಸಿಕೊಟ್ಟಿದ್ದು 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಸಿನಿಮಾ. ಈ ಸಿನಿಮಾದ ಟ್ರೇಲರ್ ಹಿಟ್ ಆದ ಮೇಲೆ ಸಿನಿಮಾಗೆ ಬಂಡವಾಳ ಹೂಡಲು ಅನೇಕ ನಿರ್ಮಾಪಕರು ಮುಂದೆ ಬಂದರಂತೆ.

ಭರವಸೆ ಮೂಡಿಸಿದರು

'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಸಿನಿಮಾದಲ್ಲಿ ಮೂರು ಶೇಡ್ ಗಳಲ್ಲಿ ರಕ್ಷಿತ್ ಕಾಣಿಸಿಕೊಂಡಿದ್ದರು. ಸಹಜ ಅಭಿನಯದ ಮೂಲಕ ಗಮನ ಸೆಳೆದ ರಕ್ಷಿತ್ ಒಬ್ಬ ಹೊಸ ತಲೆಮಾರಿನ ಭರವಸೆಯ ನಟನಾದರು.['ನ್ಯೂಸ್'ನಲ್ಲಿ ಏನೂ ಇಲ್ಲ ಅಂದ್ರು, 'ವೀಕೆಂಡ್'ನಲ್ಲಿ ಇನ್ನೆರಡೇ ತಿಂಗಳು ಅಂದ್ರು: ನಿಜಾ ಏನು?]

ಮೊದಲ ಗೆಲುವು

ಒಬ್ಬ ಸಾಧಕನಿಗೆ ಮೊದಲ ಗೆಲುವು ಎನ್ನುವುದು ಬಹು ಮುಖ್ಯ. ಅದು ದೊಡ್ಡ ಸಾಧನೆ ಮಾಡಲು ಬೇಕಾದ ದೊಡ್ಡ ಶಕ್ತಿ ನೀಡುತ್ತದೆ. ಆ ಶಕ್ತಿ ರಕ್ಷಿತ್ ಗೆ ಸಿಕ್ಕಿದ್ದು 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಸಿನಿಮಾದ ಮೂಲಕ.!

English summary
Kannada Actor Rakshit Shetty spoke about 'Simpallag ondh love story' movie in Weekend With Ramesh-3

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada