»   » ರಕ್ಷಿತಾ ಆಡಿದ ಮಾತನ್ನು ಕೇಳಿ 'ಇದು ಅವಮಾನ ನಂಗೆ' ಎಂದು ಎದ್ದು ನಿಂತ ಶಿವಣ್ಣ!

ರಕ್ಷಿತಾ ಆಡಿದ ಮಾತನ್ನು ಕೇಳಿ 'ಇದು ಅವಮಾನ ನಂಗೆ' ಎಂದು ಎದ್ದು ನಿಂತ ಶಿವಣ್ಣ!

Posted By:
Subscribe to Filmibeat Kannada
ರಕ್ಷಿತಾ ಮಾತಿನಿಂದ ನೊಂದ ಶಿವಣ್ಣ | shivrajkumar is hurt by rakshitha's words | Filmibeat Kannada

ನಟಿ ರಕ್ಷಿತಾ ಪ್ರೇಮ್ ಅಕ್ಷರಶಃ ಸುಂಟರಗಾಳಿ. ಎದುರಿಗೆ ಯಾರೇ ಇರಲಿ, ಅನಿಸಿದ್ದನ್ನ ನೇರವಾಗಿ ಹೇಳುವ ಜಾಯಮಾನ ರಕ್ಷಿತಾ ರದ್ದು. ಮನಸ್ಸಿಗೂ-ನಾಲಿಗೆಗೂ ಫಿಲ್ಟರ್ ಇಲ್ಲದೆ ಮಾತನಾಡುವ ರಕ್ಷಿತಾ ಸ್ಯಾಂಡಲ್ ವುಡ್ ನಲ್ಲಿ 'ಬೋಲ್ಡ್' ವ್ಯಕ್ತಿತ್ವಕ್ಕೆ ಹೆಸರುವಾಸಿ.

ಇಂತಿಪ್ಪ ರಕ್ಷಿತಾ ಪ್ರೇಮ್ ಹಾಗೂ ನಟಿ ರಾಗಿಣಿ ದ್ವಿವೇದಿ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಿರೂಪಣೆಯಲ್ಲಿ ಮೂಡಿಬರುತ್ತಿರುವ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಾತಾಡ್ತಾ, ಮಾತಾಡ್ತಾ ಶಿವಣ್ಣನಿಗೆ ರಕ್ಷಿತಾ 'ಫಾದರ್ ಫಿಗರ್' ಎಂದುಬಿಟ್ಟರು. ಅದನ್ನ ಕೇಳಿಸಿಕೊಂಡ್ಮೇಲೆ, ''ಇದು ಅವಮಾನ ನನಗೆ, ಇವತ್ತಿನ ಶೂಟಿಂಗ್ ಕ್ಯಾನ್ಸಲ್ ಮಾಡಿ, ಲೈಟ್ಸ್ ಆಫ್'' ಎಂದು ಶಿವಣ್ಣ ಎದ್ದು ನಿಂತರು. ಶಿವಣ್ಣನ ಆಜ್ಞೆ ಮೇರೆಗೆ ಲೈಟ್ಸ್ ಕೂಡ ಆಫ್ ಆಗ್ಹೋಯ್ತು.

ಅಷ್ಟಕ್ಕೂ, ಅಲ್ಲಾಗಿದ್ದೇನು.? ರಕ್ಷಿತಾ ಯಾಕೆ ಹಾಗೆ ಹೇಳಿದರು.? ಸಂಪೂರ್ಣ ವಿವರ ಇಲ್ಲಿದೆ ಓದಿರಿ...

ರಕ್ಷಿತಾ-ರಾಗಿಣಿ ಅತಿಥಿ

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ನಿರೂಪಣೆಯಲ್ಲಿ ಮೂಡಿಬರುತ್ತಿರುವ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ರಕ್ಷಿತಾ ಹಾಗೂ ರಾಗಿಣಿ ಅತಿಥಿಗಳಾಗಿ ಭಾಗವಹಿಸಿದರು. ಕಾರ್ಯಕ್ರಮದ ಮೊದಲನೇ ಸೆಗ್ಮೆಂಟ್ (ಸತ್ಯ ಅಥವಾ ಧೈರ್ಯ) ನಲ್ಲಿ ಸತ್ಯವನ್ನ ಹೇಳಲು ರಕ್ಷಿತಾ ಆಯ್ಕೆ ಮಾಡಿಕೊಂಡರು. ಆಗ ಶಿವಣ್ಣ ಕೇಳಿದ ಪ್ರಶ್ನೆ...

ಶಿವಣ್ಣ ಕೇಳಿದ್ದೇನು? ರಕ್ಷಿತಾ ಹೇಳಿದ್ದೇನು?

''ಹೀರೋಯಿನ್ ಆಗಿ ಮತ್ತೆ ನೀವು ವೃತ್ತಿ ಶುರು ಮಾಡಿದರೆ, ಈಗಿನ ಯಾವ ಹೀರೋ ಜೊತೆ ಆಕ್ಟ್ ಮಾಡಲು ಇಷ್ಟ ಪಡ್ತೀರಾ?'' ಎಂದು ರಕ್ಷಿತಾಗೆ ಶಿವಣ್ಣ ಪ್ರಶ್ನಿಸಿದರು. ಅದಕ್ಕೆ, ''ನಾನು ಆಕ್ಟ್ ಮಾಡಬೇಕು ಅಂತ ಮತ್ತೆ ನನಗೆ ಯಾವಾಗಾದರೂ ಅನಿಸಿದರೆ, ಅಭಿಮಾನಿಗಳ ಒತ್ತಾಯದ ಮೇರೆಗೆ ಮತ್ತೆ ದರ್ಶನ್ ಜೊತೆಗೆ ಆಕ್ಟ್ ಮಾಡಲು ಇಷ್ಟ ಪಡುತ್ತೇನೆ'' ಎಂದರು ರಕ್ಷಿತಾ.

ದರ್ಶನ್ ಜೊತೆಗೆ ಮತ್ತೆ ನಟಿಸುವ ಇಷ್ಟ ರಕ್ಷಿತಾಗೆ ಈಗಲೂ ಇದೆ

ಜೋಡಿ ಸೂಪರ್.!

ರಕ್ಷಿತಾ ಕೊಟ್ಟ ಉತ್ತರ ಕೇಳಿ ಶಿವಣ್ಣನಿಗೆ ಖುಷಿ ಆಯ್ತು. ''ನಿಮ್ಮಿಬ್ಬರ ಜೋಡಿ ತುಂಬಾ ಚೆನ್ನಾಗಿದೆ'' ಅಂತಲೂ ಶಿವಣ್ಣ ಹೇಳಿದರು. ಹೀಗಿರುವಾಗಲೇ, ಶಿವಣ್ಣ ಮತ್ತೊಂದು ಪ್ರಶ್ನೆ ಕೇಳಿದರು.

ಶಿವಣ್ಣನ ಶೋ ಗೆ ಬಂದ್ರು 'ರಾ' ಸ್ಟಾರ್ಸ್

ಶಿವಣ್ಣ ಜೊತೆ ಆಕ್ಟ್ ಮಾಡಲ್ವಾ.?

ದರ್ಶನ್ ಜೊತೆ ಆಕ್ಟ್ ಮಾಡ್ತೀನಿ ಅಂತ ರಕ್ಷಿತಾ ಹೇಳಿದ್ಮೇಲೆ, ''ಯಾಕೆ ನಮ್ಮ ಜೊತೆ ಆಕ್ಟ್ ಮಾಡೋಕೆ ಇಷ್ಟ ಇಲ್ವಾ?'' ಎಂದು ರಕ್ಷಿತಾಗೆ ಶಿವಣ್ಣ ಕೇಳಿದರು. ಆಗ, ''ನೀವು ನನಗೆ ಫಾದರ್ ಫಿಗರ್'' ಎಂದುಬಿಟ್ಟರು ನಟಿ ರಕ್ಷಿತಾ.

ಶಿವಣ್ಣ ನಿರೀಕ್ಷಿಸದ ಉತ್ತರ!

'ಫಾದರ್ ಫಿಗರ್' ಅಂತ ರಕ್ಷಿತಾ ಹೇಳುತ್ತಿದ್ದಂತೆಯೇ, ''ಓ ಮೈ ಗಾಡ್.. ಇದೇನಪ್ಪಾ ಅನ್ಯಾಯ ಇದು'' ಎನ್ನುತ್ತಾ ಶಿವಣ್ಣ ಶಾಕ್ ಆಗ್ಬಿಟ್ರು.

ಶೂಟಿಂಗ್ ಕ್ಯಾನ್ಸಲ್.!

''ಇದು ಅವಮಾನ ನನಗೆ. ಇವತ್ತಿನ ಶೂಟಿಂಗ್ ಕ್ಯಾನ್ಸಲ್ ಮಾಡಿ, ಲೈಟ್ಸ್ ಆಫ್..'' ಅಂತ ಶಿವಣ್ಣ ತಮ್ಮ ಆಸನದಿಂದ ಎದ್ದು ಬಿಟ್ಟರು. ಆಗ, ''ಅಣ್ಣ ಓಕೆ ಅಣ್ಣ, ನೀವು ನನ್ನ ಬಾಯ್ ಫ್ರೆಂಡ್ ಕೂತ್ಕೊಳ್ಳಿ, ಕಾಲಿಗೆ ಬೀಳ್ತೀನಿ'' ಎಂದು ರಕ್ಷಿತಾ ಹೇಳಿದರು. ರಕ್ಷಿತಾ ಇಷ್ಟು ಹೇಳಿದ್ಮೇಲೆ, ಲೈಟ್ಸ್ ಆನ್ ಆಯ್ತು.

ಹೇಗಮ್ಮ ಹೇಳ್ದೆ.?

''ಫಾದರ್ ಫಗರ್ ಅಂತ ಹೇಗಮ್ಮ ಹೇಳ್ದೆ?'' ಎಂದು ಶಿವಣ್ಣ ಪ್ರಶ್ನಿಸಿದಾಗ, ''ಸ್ಕ್ರೀನ್ ಮೇಲೆ ರೋಮ್ಯಾನ್ಸ್ ಮಾಡಬೇಕು ಅಂದಾಗ ನನಗೆ ಖಂಡಿತ ಆ ಭಾವನೆ ಬರುವುದಿಲ್ಲ'' ಅಂತ ರಕ್ಷಿತಾ ಹೇಳಿದರು. ರಕ್ಷಿತಾ 'ಸತ್ಯ' ಹೇಳಿದ್ದಕ್ಕೆ ಶಿವಣ್ಣ ಖುಷಿ ಪಟ್ಟರು.

ಇದು ಕಾಲೆಳೆಯುವ ಪ್ರೋಗ್ರಾಮ್

ಅಷ್ಟಕ್ಕೂ, ರಕ್ಷಿತಾ ಮತ್ತು ಶಿವಣ್ಣ ಮಧ್ಯೆ ಇಷ್ಟೆಲ್ಲ ನಡೆದಿದ್ದು ಕಾಲೆಳೆಯುವ ಸಲುವಾಗಿ. ತಮಾಷೆಗಾಗಿ. ಅಷ್ಟೇ ಹೊರತು ಸೀರಿಯಸ್ ಆಗಿ ಅಲ್ಲ.

English summary
Kannada Actress Rakshita Prem calls Shiva Rajkumar as Father Figure in 'No.1 yari with Shivanna' program.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X