»   » ಮತ್ತೆ ಕಿರುತೆರೆಗೆ ಕಾಲಿಡುತ್ತಾರಾ ರಕ್ಷಿತಾ ಪ್ರೇಮ್.?

ಮತ್ತೆ ಕಿರುತೆರೆಗೆ ಕಾಲಿಡುತ್ತಾರಾ ರಕ್ಷಿತಾ ಪ್ರೇಮ್.?

Posted By:
Subscribe to Filmibeat Kannada

ಒಂದ್ಕಾಲದಲ್ಲಿ ಸ್ಯಾಂಡಲ್ ವುಡ್ ನಲ್ಲಿ ಸುಂಟರಗಾಳಿ ಎಬ್ಬಿಸಿದ ನಟಿ ರಕ್ಷಿತಾ ಪ್ರೇಮ್. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಸುದೀಪ್, ಡಾ.ವಿಷ್ಣುವರ್ಧನ್ ಸೇರಿದಂತೆ ಕನ್ನಡದ ಹೆಸರಾಂತ ತಾರೆಗಳ ಜೊತೆ ಪರದೆ ಹಂಚಿಕೊಂಡಿದ್ದ ಈ ನಟೀಮಣಿ ಈಗ ನಿರ್ಮಾಪಕಿ.

ನಿರ್ದೇಶಕ ಜೋಗಿ ಪ್ರೇಮ್ ಕೈಹಿಡಿದ ಮೇಲೆ ಮನೆ, ಮಗು ಅನ್ನುವುದರಲ್ಲೇ ಬಿಜಿಯಾದ ರಕ್ಷಿತಾ, ಇದೀಗ ಚಿತ್ರ ನಿರ್ಮಾಣದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. 'ಡಿ.ಕೆ' ಚಿತ್ರವನ್ನ ಸದ್ಯದಲ್ಲೇ ತೆರೆಮೇಲೆ ತರುವುದಕ್ಕೆ ಓಡಾಡುತ್ತಿರುವ ರಕ್ಷಿತಾ, ಮತ್ತೆ ಕಿರುತೆರೆ ಕಡೆ ಮುಖ ಮಾಡುತ್ತಾರಾ.?

Rakshitha Prem

ಈ ಪ್ರಶ್ನೆ, ಅವರ ಅಭಿಮಾನಿಗಳನ್ನ ಕಾಡುತ್ತಿದೆ. ಜನಪ್ರಿಯ ರಿಯಾಲಿಟಿ ಶೋ 'ಡ್ಯಾನ್ಸಿಂಗ್ ಸ್ಟಾರ್' ನಲ್ಲಿ ಮೂವರು ತೀರ್ಪುಗಾರರ ಪೈಕಿ ಒಬ್ಬರಾಗಿದ್ದ ರಕ್ಷಿತಾ, ಕಾರ್ಯಕ್ರಮ ಸಕ್ಸಸ್ ಆಗುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. [ಸುಂಟರಗಾಳಿ ರಕ್ಷಿತಾ ಬೆನ್ನ ಹಿಂದೆ ಭದ್ರವಾದ 'ಮಾ' ಮಮತಾ ]

ಇದೀಗ ಅದೇ ಕಾರ್ಯಕ್ರಮದ ಎರಡನೇ ಆವೃತ್ತಿ ಸದ್ಯದಲ್ಲೇ ಶುರುವಾಗುತ್ತಿದೆ. ಹಾಗಾದ್ರೆ, ಮತ್ತೊಮ್ಮೆ ರಕ್ಷಿತಾ ರನ್ನ ಕಿರುತೆರೆ ಮೂಲಕ ನೋಡಬಹುದಲ್ಲಾ ಅಂತ ಕಾಯುತ್ತಿದ್ದ ಅವರ ಅಭಿಮಾನಿಗಳಿಗೆ ರಕ್ಷಿತಾ ಕೊಂಚ ಕಹಿ ಸುದ್ದಿ ಕೊಟ್ಟಿದ್ದಾರೆ.

Rakshitha Prem2

ಹಾಗಂತ ರಕ್ಷಿತಾ, ಶೋ ನಿರಾಕರಿಸಿದ್ದಾರೆ ಅಂತಲ್ಲ. ''ಡ್ಯಾನ್ಸಿಂಗ್ ಸ್ಟಾರ್-2 ನಲ್ಲಿ ನಾನು ಕಾಣಿಸಿಕೊಳ್ಳುವುದಿಲ್ಲ'', ಅಂತಷ್ಟೇ ಹೇಳಿ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

'ಸ್ವಯಂವರ', 'ಡ್ಯಾನ್ಸಿಂಗ್ ಸ್ಟಾರ್' ಸೇರಿದಂತೆ ಮುಂತಾದ ಕಿರುತೆರೆ ಕಾರ್ಯಕ್ರಮಗಳಿಂದ ರಕ್ಷಿತಾ ಸ್ಮಾಲ್ ಸ್ಕ್ರೀನ್ ನಲ್ಲೂ ಜನರ ಮೆಚ್ಚುಗೆ ಗಳಿಸಿದ್ದರು. ಸದ್ಯಕ್ಕೆ ನಿರ್ಮಾಪಕಿಯಾಗಿ ಬಿಜಿಯಿರುವ ರಕ್ಷಿತಾ, ಪ್ರೇಕ್ಷಕರ ಒತ್ತಾಯದ ಮೇರೆಗೆ ಮುಂದೆ ಮತ್ತೊಮ್ಮೆ ಕಿರುತೆರೆಯಲ್ಲಿ ಸುಂಟರಗಾಳಿ ಬೀಸಿದ್ರೆ, ಅವರ ಅಭಿಮಾನಿಗಳಿಗೇ ಖುಷಿ. (ಫಿಲ್ಮಿಬೀಟ್ ಕನ್ನಡ)

English summary
Rakshitha Prem has cleared all speculations in being part of Popular TV Reality Show Dancing Stars-2. Rakshitha Prem has stated that she will not be in the Judges Panel in Dancing Stars-2

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada