»   » 'ಹಂಬಲ್ ಪೊಲಿಟಿಷಿಯನ್ ನಾಗರಾಜ್' ಚೆನ್ನಾಗಿಲ್ಲ ಅಂತಲ್ಲ. ಆದ್ರೆ...

'ಹಂಬಲ್ ಪೊಲಿಟಿಷಿಯನ್ ನಾಗರಾಜ್' ಚೆನ್ನಾಗಿಲ್ಲ ಅಂತಲ್ಲ. ಆದ್ರೆ...

Posted By:
Subscribe to Filmibeat Kannada
ಹಂಬಲ್ ಪೊಲಿಟಿಷಿಯನ್ ಬಗ್ಗೆ ಮಾತನಾಡಿದ ರಮೇಶ್ ಅರವಿಂದ್ | Filmibeat Kannada

ಡ್ಯಾನಿಶ್ ಸೇಠ್ ನಟನೆಯ 'ಹಂಬಲ್ ಪೊಲಿಟಿಷಿಯನ್ ನಾಗರಾಜ್' ಸಿನಿಮಾ ಬಿಡುಗಡೆಗೂ ಮುನ್ನ ಸಿಕ್ಕಾಪಟ್ಟೆ ಕುತೂಹಲ ಸೃಷ್ಟಿಸಿತ್ತು. ಟ್ರೈಲರ್ ಮಾತ್ರದಿಂದಲೇ ಗಾಂಧಿನಗರದ ತುಂಬೆಲ್ಲ ಸದ್ದು ಮಾಡಿದ 'ಹಂಬಲ್ ಪೊಲಿಟಿಷಿಯನ್ ನಾಗರಾಜ್' ರಿಲೀಸ್ ಆದ್ಮೇಲೆ ಮಂಕಾಯಿತು.

ನಿರೀಕ್ಷಿಸಿದ ಮಟ್ಟಿಗೆ 'ಹಂಬಲ್ ಪೊಲಿಟಿಷಿಯನ್ ನಾಗರಾಜ್' ಸಿನಿಮಾ ಯಶಸ್ವಿ ಆಗಲಿಲ್ಲ. ಉತ್ತಮ ಓಪನ್ನಿಂಗ್ ಪಡೆದುಕೊಂಡರೂ ಕ್ರಮೇಣ ಬಾಕ್ಸ್ ಆಫೀಸ್ ನಲ್ಲಿ 'ಹಂಬಲ್ ಪೊಲಿಟಿಷಿಯನ್ ನಾಗರಾಜ್' ಕಲೆಕ್ಷನ್ ಡಲ್ ಆಯ್ತು.

ವಿಮರ್ಶಕರಿಂದಲೂ 'ಹಂಬಲ್ ಪೊಲಿಟಿಷಿಯನ್ ನಾಗರಾಜ್' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ರಾಜಕಾರಣಿಗಳನ್ನು ವಿಡಂಬನೆ ಮಾಡುವ ಈ ಚಿತ್ರದಲ್ಲಿ ಅಷ್ಟೇನೂ ನಗು ತರಿಸುವುದಿಲ್ಲ ಎಂದು ಹಲವರು ಕಾಮೆಂಟ್ ಮಾಡಿದ್ದರು.

ಅಸಲಿಗೆ, ಮೂರು ತಿಂಗಳ ಹಿಂದೆ ಅಂದ್ರೆ ಜನವರಿಯಲ್ಲಿ ಬಿಡುಗಡೆ ಆದ 'ಹಂಬಲ್ ಪೊಲಿಟಿಷಿಯನ್ ನಾಗರಾಜ್' ಚಿತ್ರದ ಬಗ್ಗೆ ನಾವು ಇಷ್ಟೆಲ್ಲ ಮಾತನಾಡಲು ಕಾರಣ ನಟ, ನಿರ್ದೇಶಕ ರಮೇಶ್ ಅರವಿಂದ್. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹವಾ ಕ್ರಿಯೇಟ್ ಮಾಡಿದ್ದ 'ಹಂಬಲ್ ಪೊಲಿಟಿಷಿಯನ್ ನಾಗರಾಜ್' ಬಗ್ಗೆ ರಮೇಶ್ ಅರವಿಂದ್ ಒಂದೆರಡು ಮಾತುಗಳನ್ನಾಡಿದ್ದಾರೆ. ಅದೇನು ಅಂತ ತಿಳಿಯಲು ಮುಂದೆ ಓದಿರಿ...

ಕೆಟ್ಟ ಸಿನಿಮಾ ಅಲ್ಲ.!

''ಹಂಬಲ್ ಪೊಲಿಟಿಷಿಯನ್ ನಾಗರಾಜ್' ಕೆಟ್ಟ ಸಿನಿಮಾ ಅಂತ ನಾನು ಹೇಳಲ್ಲ. ಆದ್ರೆ, ನಾನು ನಿರೀಕ್ಷೆ ಮಾಡಿದ ಲೆವೆಲ್ ಗೆ ಇರಲಿಲ್ಲ'' ಎಂದು ನಟ, ನಿರ್ದೇಶಕ ರಮೇಶ್ ಅರವಿಂದ್ ಹೇಳಿದ್ದಾರೆ. ಅದು ಶಿವಣ್ಣ ನಿರೂಪಣೆಯ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ.

'ಹಂಬಲ್ ಪೊಲಿಟಿಷಿಯನ್'ಗೆ ವಿಮರ್ಶಕರು ಕೊಟ್ಟ ಮತ ಎಷ್ಟು?

ರಮೇಶ್ ಗೆ ಶಿವಣ್ಣ ಕೇಳಿದ ಪ್ರಶ್ನೆ ಏನು?

'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ನಟ, ನಿರ್ದೇಶಕ ರಮೇಶ್ ಅರವಿಂದ್ ಅತಿಥಿಯಾಗಿ ಬಂದಿದ್ದರು. ಕಾರ್ಯಕ್ರಮದ ಮೊದಲನೇ ಸೆಗ್ಮೆಂಟ್ ನಲ್ಲಿ (ಸತ್ಯ ಅಥವಾ ಧೈರ್ಯ) ರಮೇಶ್ ಅರವಿಂದ್ ಸತ್ಯವನ್ನ ಆಯ್ಕೆ ಮಾಡಿಕೊಂಡರು. ಆಗ ಶಿವಣ್ಣ, ''ಯಾವುದಾದರೂ ಸಿನಿಮಾಗೆ ಹೋಗಿ, ಅರ್ಧದಲ್ಲೇ ಎದ್ದು ಬಂದಿರೋದು ಇದ್ಯಾ.?'' ಅಂತ ಪ್ರಶ್ನೆ ಮಾಡಿದರು.

'ಹಂಬಲ್ ಪೊಲಿಟಿಷಿಯನ್ ನಾಗರಾಜ್' ಚಿತ್ರದ ಟ್ರೇಲರ್ ಈಗ ಯೂ ಟ್ಯೂಬ್ ನಲ್ಲಿ ನಂ1

ರಮೇಶ್ ಕೊಟ್ಟ ಉತ್ತರ ಏನು.?

''ಎಷ್ಟೋ ಸಿನಿಮಾಗಳಿಗೆ ಹೋಗಿ ಅರ್ಧದಲ್ಲೇ ಎದ್ದು ಬಂದಿರೋದು ಇದೆ. ಅದರಲ್ಲೂ ಅಮಿತಾಬ್ ಬಚ್ಚನ್ ಅಭಿನಯದ 'ಝೂಮ್ ಬರಾಬರ್ ಝೂಮ್' ಚಿತ್ರಕ್ಕೆ ಹೋಗಿ ಅರ್ಧಕ್ಕೆ ಎದ್ದು ಬಂದೆ'' ಎಂದು ರಮೇಶ್ ಉತ್ತರಿಸಿದರು. ಆಗ ''ಕನ್ನಡದಲ್ಲಿ.?'' ಎಂದು ಶಿವಣ್ಣ ಮರು ಪ್ರಶ್ನಿಸಿದರು. ಆಗ ರಮೇಶ್ ಕೊಟ್ಟ ಉತ್ತರ....

ರಮೇಶ್ ಕೊಟ್ಟ ಉತ್ತರ ಏನು.?

''ನಾನು 'ಹಂಬಲ್ ಪೊಲಿಟಿಷಿಯನ್ ನಾಗರಾಜ್' ಚಿತ್ರ ನೋಡಿದೆ. ಆ ಸಿನಿಮಾದಲ್ಲಿ ತಪ್ಪೇನೂ ಇಲ್ಲ. ಚಿತ್ರ ಚೆನ್ನಾಗಿಲ್ಲ ಅಂತ ಹೇಳ್ತಿಲ್ಲ. ಆದ್ರೆ, ಅವರ ಸ್ಕ್ರಿಪ್ಟ್ ಕೇಳಿದಾಗ ಬಹಳ ಚೆನ್ನಾಗಿತ್ತು. ಆದ್ರೆ ತೆರೆಗೆ ತರುವಾಗ ಅದು ಎಲ್ಲೋ ಮಿಸ್ ಆಗಿದೆ ಅನಿಸ್ತು. 'ಹಂಬಲ್ ಪೊಲಿಟಿಷಿಯನ್ ನಾಗರಾಜ್' ಕೆಟ್ಟ ಸಿನಿಮಾ ಅಂತ ಹೇಳಲ್ಲ. ಆದ್ರೆ, ನಾನು ನಿರೀಕ್ಷೆ ಮಾಡಿದ ಲೆವೆಲ್ ಗೆ ಇಲ್ಲ ಅಂತ ಅನಿಸ್ತು'' ಎಂದರು ರಮೇಶ್ ಅರವಿಂದ್.

English summary
Kannada Actor, Director Ramesh Aravind has commented about Kannada Film 'Humble Politician Nograj' in a Popular show No.1 Yari with Shivanna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X