For Quick Alerts
  ALLOW NOTIFICATIONS  
  For Daily Alerts

  'ನಂದಿನಿ' ಧಾರಾವಾಹಿಯನ್ನು ನಿರ್ಮಾಣ ಮಾಡ್ತಿದ್ದಾರೆ ರಮೇಶ್

  |

  ನಟ ರಮೇಶ್ ಅರವಿಂದ್ ಕಿರುತೆರೆಯಲ್ಲಿ ನಿರೂಪಕನಾಗಿ ಗುರುತಿಸಿಕೊಂಡಿದ್ದಾರೆ. 'ವಿಕೇಂಡ್ ವಿತ್ ರಮೇಶ್' ಕಾರ್ಯಕ್ರಮದ ಮೂಲಕ ದೊಡ್ಡ ಜನಪ್ರಿಯತೆ ಪಡೆದಿದ್ದ ಅವರು ಬಳಿಕ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮಕ್ಕೆ ಅಂಕರ್ ಆಗಿದ್ದರು.

  ನಿರೂಪಕನ ನಂತರ ಈಗ ಕಿರುತೆರೆಯಲ್ಲಿ ರಮೇಶ್ ನಿರ್ಮಾಪಕನಾಗಿ ಬಡ್ತಿ ಪಡೆದಿದ್ದಾರೆ. ನಟಿ ರಚಿತಾ ರಾಮ್ ಸಹೋದರಿ ನಿತ್ಯಾರಾಮ್ ನಟನೆಯ 'ನಂದಿನಿ' ಧಾರಾವಾಹಿಯ ಮುಂದಿನ ಭಾಗವನ್ನು ರಮೇಶ್ ನಿರ್ಮಾಣ ಮಾಡುತ್ತಿದ್ದಾರೆ.

  ಕನ್ನಡ ಧಾರಾವಾಹಿ ಲೋಕಕ್ಕೆ ಕಾಲಿಟ್ಟ 'ರಣಧೀರನ ರಾಣಿ' ಖುಷ್ಬೂ

  ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಂದಿನಿ' ಧಾರಾವಾಹಿ ತನ್ನ ನವೀನ ಕತೆ, ಕುತೂಹಲಕಾರಿ ಚಿತ್ರಕಥೆ, ಗ್ರಾಫಿಕ್ ವಿಶುವಲ್ಸ್ ಗಳಿಂದ ಜನರನ್ನು ಮೋಡಿ ಮಾಡಿದೆ. ಈ ರೀತಿ ಮನೆ ಮಾತಾಗಿರುವ 'ನಂದಿನಿ' ಧಾರಾವಹಿಯ ಮುಂದುವರೆದ ಭಾಗದ ನಿರ್ಮಾಣದ ಸಾರಥ್ಯವನ್ನು ನಟ, ನಿರ್ದೇಶಕ, ನಿರೂಪಕ ರಮೇಶ್ ಅರವಿಂದ್ ವಹಿಸಿಕೊಂಡಿದ್ದಾರೆ. ಮುಂದೆ ಓದಿ...+

  ರಮೇಶ್ ಅರವಿಂದ್ ನಿರ್ಮಾಣ

  ರಮೇಶ್ ಅರವಿಂದ್ ನಿರ್ಮಾಣ

  'ನಂದಿನಿ' ಸೀರಿಯಲ್ ನಿರ್ಮಾಣದ ಜವಾಬ್ದಾರಿಯನ್ನು ನಟ ರಮೇಶ್ ಅರವಿಂದ್ ಹೊತ್ತಿದ್ದಾರೆ. ವಂದನಾ ಮೀಡಿಯಾ ಕ್ರಿಯೇಶನ್ಸ್ ನಡಿಯಲ್ಲಿ ಸ್ವತ: ರಮೇಶ್ ಅರವಿಂದ್‍ ಅವರು ಇನ್ಮುಂದೆ ನಿರ್ಮಿಸಲಿದ್ದಾರೆ. ಈ ಮೂಲಕ ಮೊಟ್ಟ ಮೊದಲ ಬಾರಿಗೆ ನಿರ್ಮಾಪಕನಾಗಿ ರಮೇಶ್ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ.

  'ನಂದಿನಿ' ಧಾರಾವಾಹಿ ನೋಡಿ ಪ್ರಾಣ ಕಳೆದುಕೊಂಡ ಪುಟ್ಟ ಬಾಲಕಿ

  ರಮೇಶ್ ಅರವಿಂದ್ ಮಾತು

  ರಮೇಶ್ ಅರವಿಂದ್ ಮಾತು

  ಈ ಬಗ್ಗೆ ಮಾತನಾಡಿದರುವ ರಮೇಶ್ "ಮೊದಲಸಲ ಇಡೀ ಕಿರುತೆರೆ ಲೋಕಕ್ಕೆ ನಿರ್ಮಾಪಕನಾಗಿ ಪರಿಚಯಗೊಳ್ಳುತ್ತಿದ್ದೇನೆ ನಂದಿನಿ ಸೀರಿಯಲ್ ಮೂಲಕ. ನಂದಿನಿಯ ಮೂಲಕತೆಯೇ ನನ್ನನ್ನು ಆಕರ್ಷಿಸಿತ್ತು. ನೈಜ ಕತೆಗಳಲ್ಲಿ ನಟಿಸಿ, ನಿರ್ದೇಶಿಸಿದ ನನಗೆ ಈ ತರಹದ ಫ್ಯಾಂಟಸಿ ಕಥೆ ಹೊಸತೆನಿಸಿತು. ಆ ಸೂಪರ್ ನ್ಯಾಚುರಲ್ ಎಲಿಮೆಂಟ್ಸ್ ಹಾವುಗಳು, ಪ್ರೇತಾತ್ಮಗಳು, ನಮ್ಮನ್ನೆಲ್ಲಾ ಮೀರಿದ ವಿಶೇಷ ಶಕ್ತಿಗಳು, ಅಷ್ಟೇ ಅಲ್ಲದೆ ಕುಟುಂಬದ ಭಾವನಾತ್ಮಕ ಸಂಬಂಧಗಳು. ಇವೆಲ್ಲವೂ ಈ ನಂದಿನಿ ಧಾರಾವಾಹಿಯನ್ನು ನಿರ್ಮಾಣ ಮಾಡಲು ನನ್ನನ್ನು ಪ್ರೇರೇಪಿಸಿತು.'' ಹೇಳಿದ್ದಾರೆ.

  ನಿತಿನ್ ನಿರ್ದೇಶನ

  ನಿತಿನ್ ನಿರ್ದೇಶನ

  'ನಂದಿನಿ' ಧಾರಾವಾಹಿಯನ್ನು ನಿತಿನ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ರವಿ ಜೋಶಿಯವರು ನಿರ್ಮಾಣ ನಿರ್ವಹಣೆ ಮಾಡುತ್ತಿದ್ದಾರೆ, ಇಂಥಹ ಉತ್ತಮ ತಂಡದೊಂದಿಗೆ ನನಗೆ ಅದ್ಭುತ ಜವಾಬ್ದಾರಿಯನ್ನು ಕೊಟ್ಟ ಉದಯ ಟಿವಿಗೆ ಧನ್ಯವಾದಗಳು ಎಂದಿದ್ದಾರೆ ರಮೇಶ್.

  ರಾತ್ರಿ 8.30ಕ್ಕೆ ಪ್ರಸಾರ

  ರಾತ್ರಿ 8.30ಕ್ಕೆ ಪ್ರಸಾರ

  'ನಂದಿನಿ' ಧಾರಾವಾಹಿಯ ಮಗಳು ಜನನಿ ಪಾತ್ರವನ್ನು, ಗಂಗಾ ಪಾತ್ರದಿಂದ ಜನಮನ ಸೆಳೆದಿದ್ದ ನಿತ್ಯಾರಾಮ್ ಅವರೇ ನಿರ್ವಹಿಸಲಿದ್ದಾರೆ. ಹಾಗೆ ಈಗಾಗಲೇ ಕಿರುತೆರೆಯಲ್ಲಿ ಗಮನ ಸೆಳೆದ ನಟಿ ಮತ್ತು ನಿರೂಪಕಿ ಕಾವ್ಯ ಶಾಸ್ತ್ರಿ ದೇವಸೇನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ನಂದಿನಿ' ಧಾರಾವಾಹಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.

  English summary
  Ramesh Aravind, the popular cine artist has taken the responsibility of producing Nandini serial. Actress Nithya Ram's Nandini serial is airs on Udaya TV from Monday to Friday at 8.30 P.M.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X