twitter
    For Quick Alerts
    ALLOW NOTIFICATIONS  
    For Daily Alerts

    ಉಪೇಂದ್ರ ಅವರ ಚಾಮರಾಜಪೇಟೆಯ ಆ ದಿನಗಳು

    |

    ರಿಯಲ್ ಸ್ಟಾರ್ ಉಪೇಂದ್ರ ಹೇಗೆ ತೆರೆಯ ಮೇಲೆ ವಿಭಿನ್ನತೆಯಿಂದ ಇರಲು ಬಯಸುತ್ತಾರೋ, ಅವರ ಹಳೆಯ ನೆನಪುಗಳು ಕೂಡಾ ಹಾಗೆಯೇ. ಶಾಲಾ ಕಾಲೇಜಿನ, ಸಿನಿಮಾ ಬದುಕಿನ ಆದಿಯಲ್ಲಿನ ತನ್ನ ಜೀವನದ ಘಟನೆಗಳನ್ನು ಉಪೇಂದ್ರ ಮೆಲುಕು ಹಾಕಿದಾಗ ಅವರ ಜೀವನ ವಿಭಿನ್ನತೆಯಿಂದ ಕೂಡಿದ್ದು ಅಂದು ಅನಿಸದೇ ಇರದು.

    ರಮೇಶ್ ಅರವಿಂದ್ ನಡೆಸಿಕೊಡುವ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಪ್ರಮುಖ ಮಜಲೆಂದೇ ಬಿಂಬಿತವಾಗಿದ್ದ ಶನಿವಾರ ಮತ್ತು ಭಾನುವಾರದ (ಸೆ21) ಶೋನಲ್ಲಿ ಕನ್ನಡ ಚಿತ್ರೋದ್ಯಮದ ಬಹು ಪ್ರತಿಭಾನ್ವಿತ ಕಲಾವಿದ ಉಪೇಂದ್ರ ಭಾಗವಹಿಸಿದ್ದರು.

    ಎಂದಿನಂತೆ ತನ್ನದೇ ಶೈಲಿಯಲ್ಲಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡ ಉಪೇಂದ್ರ, ತನ್ನ ಅಂದಿನ ಮತ್ತು ಇಂದಿನ ಬದುಕಿನ ಕಣ್ಣೀರಿನ, ಕಷ್ಟಸುಖದ ಜೀವನವನ್ನು ವಿವರಿಸಿದ ರೀತಿ ಕೂಡಾ ಅಷ್ಟೇ ವಿಭಿನ್ನವಾಗಿತ್ತು. (ರಿಯಲ್ ಸ್ಟಾರ್ ಉಪ್ಪಿ ಬಗ್ಗೆ ಅವರ ತಾಯಿ ಹೇಳಿದ್ದೇನು)

    ಕಾರ್ಯಕ್ರಮದಲ್ಲಿ ಉಪೇಂದ್ರ ತನ್ನ ಜೀವನದದ ಘಟನೆಗಳನ್ನು ಮೆಲುಕು ಹಾಕುತ್ತಿದ್ದ ಒಂದೊಂದು ಘಟನೆಗೂ ಅಲ್ಲಿದ್ದ ಪ್ರೇಕ್ಷಕರು ಕರತಾಡನ ಮಾಡುತ್ತಿದ್ದರು. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಇದುವರೆಗಿನ ಕಾರ್ಯಕ್ರಮಕ್ಕಿಂತ ಈ ಕಾರ್ಯಕ್ರಮ ಕೊಂಚ ಭಿನ್ನವಾಗಿ ಮೂಡಿಬಂದಿತ್ತು.

    ಕಾರ್ಯಕ್ರಮದಲ್ಲಿ ತನ್ನ ಅಂದಿನ ಜೀವನ, ಚಾಮರಾಜಪೇಟೆಯ ಜೀವನದ ಬಗ್ಗೆ ಉಪ್ಪಿ ಹೇಳಿದ್ದು, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ

    ಅರ್ಚಕರು ಕಳುಹಿಸಿದ ಪ್ರಸಾದ

    ಅರ್ಚಕರು ಕಳುಹಿಸಿದ ಪ್ರಸಾದ

    ಕಾರ್ಯಕ್ರಮದಲ್ಲಿ ದೇವಾಲಯದ ಅರ್ಚಕರೊಬ್ಬರು ಉಪ್ಪಿಗೆ ಆಶೀರ್ವಾದ ಮಾಡಿ, ಅಂದು ಉಪೇಂದ್ರ ದೇವಾಲಯಕ್ಕೆ ಬಂದು ಪ್ರಸಾದಕ್ಕಾಗಿ ಕಾಯುತ್ತಿದ್ದ ಘಟನೆಯನ್ನು ವಿವರಿಸಿದ್ದು ವಿಶೇಷ. ಹಾಗೆಯೇ, ಪ್ರಸಾದವನ್ನು ಉಪ್ಪಿಗೋಸ್ಕರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಸೆಟ್ಟಿಗೆ ಕಳುಹಿಸಿದ್ದು ಇನ್ನೊಂದು ವಿಶೇಷವಾಗಿತ್ತು.

    ಚಾಮರಾಜಪೇಟೆಯಲ್ಲಿ ಗೆಳೆಯರೊಂದಿಗಿನ ಜೀವನ

    ಚಾಮರಾಜಪೇಟೆಯಲ್ಲಿ ಗೆಳೆಯರೊಂದಿಗಿನ ಜೀವನ

    ತಾನು ಬೆಳೆದ ಬೆಂಗಳೂರಿನ ಚಾಮರಾಜಪೇಟೆಯಲ್ಲಿನ ಗೆಳೆಯರೊಂದಿಗೆ ಜೀವನವನ್ನು ಕಾರ್ಯಕ್ರಮದಲ್ಲಿ ಹಲವು ಬಾರಿ ನೆನಪಿಸಿಕೊಂಡ ಉಪ್ಪಿ, ಅಂದಿನ ಜೀವನ ನನಗೆ ಜೀವನದಲ್ಲಿ ಹಲವು ಪಾಠವನ್ನು ಕಲಿಸಿದೆ. ಸ್ನೇಹಿತರು, ಹಿತೈಷಿಗಳು ಮಾಡಿದ ಸಹಾಯವನ್ನು ನೆನೆಸಿಕೊಂಡು ಉಪ್ಪಿ ಭಾವೋದ್ವೇಗಕ್ಕೊಳಗಾದರು.

    ಚಾಮರಾಜಪೇಟೆಯ ಗೆಳೆಯರು

    ಚಾಮರಾಜಪೇಟೆಯ ಗೆಳೆಯರು

    ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರ ಸ್ನೇಹಿತರು ಉಪ್ಪಿ ಬಗ್ಗೆ, ಅವರ ಸಿನಿಮಾ ಹುಚ್ಚಿನ ಬಗ್ಗೆ, ರಾಜಕುಮಾರ್ ಮೇಲಿದ್ದ ಅಭಿಮಾನವನ್ನು ವಿವರಿಸಿದರು. ಸಾರ್ವಜನಿಕ ಗಣೇಶೋತ್ಸವದಲ್ಲಿ ಉಪ್ಪಿ ತೊಡಗಿಸಿಕೊಳ್ಳುತ್ತಿದ್ದ ರೀತಿ, ಸಾಹಿತ್ಯದ ಮೇಲಿನ ಅವರ ಅಭಿರುಚಿಯನ್ನೂ ಉಪ್ಪಿ ಸ್ನೇಹಿತರು ಕಾರ್ಯಕ್ರಮದಲ್ಲಿ ಉಲ್ಲೇಖಿಸಿದರು.

    ಕಾಲೇಜಿನ ದಿನಗಳು

    ಕಾಲೇಜಿನ ದಿನಗಳು

    ಬೆಂಗಳೂರು ಎನ್ ಆರ್ ಕಾಲೋನಿಯಲ್ಲಿನ ಆಚಾರ್ಯ ಪಾಠಶಾಲಾ ಕಾಲೇಜಿನ ದಿನಗಳನ್ನು ನೆನಪಿಸಿಕೊಂಡ ಉಪೇಂದ್ರ, ಅಂದು ವಿದ್ಯಾರ್ಥಿ ಸಂಘದ ಚುನಾವಣೆಗೆ ನಿಂತಿದ್ದೆ. ರಾಜಕುಮಾರ್ ಅವರ ಅಭಿಮಾನಿಯಾಗಿದ್ದ ನಾನು ಅವರ ಚಿತ್ರದ ಹೆಸರಿನ ಮೂಲಕ ವಿದ್ಯಾರ್ಥಿಗಳಲ್ಲಿ ಮತಯಾಚಿಸುತ್ತಿದ್ದೆ ಎಂದು ಕಾರ್ಯಕ್ರಮದಲ್ಲಿ ಉಪ್ಪಿ ಹೇಳಿದರು.

    ಎಪಿಎಸ್ ಕಾಲೇಜಿನ ಪ್ರಿನ್ಸಿಪಾಲ್ ಹೇಳಿದ್ದು

    ಎಪಿಎಸ್ ಕಾಲೇಜಿನ ಪ್ರಿನ್ಸಿಪಾಲ್ ಹೇಳಿದ್ದು

    ನಮ್ಮ ಕೆಲವು ಬೇಡಿಕೆಗಳಿಗಾಗಿ ವಿದ್ಯಾರ್ಥಿಗಳ ಗುಂಪುಕಟ್ಟಿಕೊಂಡು ಎಪಿಎಸ್ ಕಾಲೇಜಿನತ್ತ ಹೋಗಿದ್ದೆವು. ಕಾಲೇಜಿನ ಗೇಟಿನ ಬಳಿ ಪ್ರಾಂಶುಪಾಲರು ನಿಂತಿದ್ದರು. ಅವರನ್ನು ನೋಡಿ ನನ್ನ ಜೊತೆಗಿದ್ದ ಹುಡುಗರೆಲ್ಲಾ ಜಾಗ ಖಾಲಿಮಾಡಿದ್ದರು. ಆಗ ಪ್ರಿನ್ಸಿಪಾಲ್ ನನ್ನನ್ನು ಕರೆದು ಏನು ಮಾಡಬೇಕಾದರೂ ನೀನು ಒಬ್ಬನೇ ಮಾಡು. ಇನ್ನೊಬ್ಬರನ್ನು ಅವಲಂಬಿಸ ಬೇಡ ಎಂದಿದ್ದನ್ನು ಉಪ್ಪಿ ಸ್ಮರಿಸಿಕೊಂಡರು.

    English summary
    Real Star Upendra was the guest in Weekend With Ramesh programme in Zee Kannada telecasted on Sep 20th and 21st.
    Monday, September 22, 2014, 13:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X