»   » 'ವೀಕೆಂಡ್ ವಿತ್ ರಮೇಶ್' ದೊಡ್ಡ ಮಟ್ಟದಲ್ಲಿ ಗೆದ್ದದ್ದು ಹೀಗೆ ಅಲ್ವಾ.?

'ವೀಕೆಂಡ್ ವಿತ್ ರಮೇಶ್' ದೊಡ್ಡ ಮಟ್ಟದಲ್ಲಿ ಗೆದ್ದದ್ದು ಹೀಗೆ ಅಲ್ವಾ.?

Posted By:
Subscribe to Filmibeat Kannada

'ಜೀ ಕನ್ನಡ' ವಾಹಿನಿ ಅಂತ ಹೇಳಿದ ತಕ್ಷಣ ಸಾಕಷ್ಟು ಜನರಿಗೆ ನೆನಪಾಗುವ ಕಾರ್ಯಕ್ರಮದ 'ವೀಕೆಂಡ್ ವಿತ್ ರಮೇಶ್'. ಮೂರು ಸೀಸನ್ ಗಳನ್ನು ಮುಗಿಸಿರುವ ಈ ಕಾರ್ಯಕ್ರಮ ಕಿರುತೆರೆಯಲ್ಲಿ ಹೊಸ ಸಂಚಲನ ಉಂಟು ಮಾಡಿತ್ತು.

'ವೀಕೆಂಡ್ ವಿತ್ ರಮೇಶ್' ಕಿರುತೆರೆಯಲ್ಲಿ ಒಂದು ದೊಡ್ಡ ಯಶಸ್ವಿ ಕಾರ್ಯಕ್ರಮ. ಜನರಿಗೆ ಈ ಕಾರ್ಯಕ್ರಮ ಬಹಳ ಹತ್ತಿರವಾಗಿದೆ. ಇಂತಹ ದೊಡ್ಡ ಯಶಸ್ಸು ಪಡೆದ ಈ ಕಾರ್ಯಕ್ರಮದ ಹಿಂದೆ ಸಾಕಷ್ಟು ಕಾರಣಗಳಿವೆ.

'ವೀಕೆಂಡ್ ವಿತ್ ರಮೇಶ್' ತಂಡಕ್ಕೆ ಹ್ಯಾಟ್ಸ್ ಆಫ್ ಹೇಳಿದ ಸಾಧಕರು

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಗೆಲುವಿಗೆ ಕಾರಣವಾದ ಮುಖ್ಯ ಅಂಶಗಳು ಇಲ್ಲಿದೆ ಓದಿ...

ಕೊನೆಗೂ 'ವೀಕೆಂಡ್ ವಿತ್ ರಮೇಶ್-3'ಗೆ 'ಇವರೆಲ್ಲ' ಬರಲೇ ಇಲ್ಲ.!

ಭಿನ್ನ - ವಿಭಿನ್ನ

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಒಂದು ಮಾಮೂಲಿ ಸಂದರ್ಶನವಾಗಿರಲಿಲ್ಲ. ಇತ್ತ ಅದೇ ರೆಗ್ಯೂಲರ್ ರಿಯಾಲಿಟಿ ಶೋ ಕೂಡ ಅಲ್ಲ. ಅದು ಒಂದು ವಿಭಿನ್ನ ಕಾರ್ಯಕ್ರಮ. ಆ ವಿಭಿನ್ನತೆಯೇ ಕಾರ್ಯಕ್ರಮದ ಗೆಲುವಿಗೆ ಮೊದಲ ಕಾರಣ.

ರಮೇಶ್ ಅರವಿಂದ್

ನಟ ರಮೇಶ್ ಅರವಿಂದ್ ಕಾರ್ಯಕ್ರಮದ ದೊಡ್ಡ ಹೈಲೈಟ್ ಅಂತ ಹೇಳಬಹುದು. ನೂರು ಸಿನಿಮಾಗಳನ್ನು ಮಾಡಿದ ಒಬ್ಬ ದೊಡ್ಡ ನಟರಾದರೂ ಅಷ್ಟೊಂದು ಸರಳವಾಗಿ, ಎಲ್ಲರ ಜೊತೆ ಬೆರೆತು ರಮೇಶ್ ಇರುತ್ತಿದ್ದ ರೀತಿ ಎಲ್ಲರಿಗೂ ಬಹಳ ಇಷ್ಟವಾಗುತ್ತಿತ್ತು.

ಪ್ರೋಮೋ

ಪ್ರತಿ ವಾರ ಕಾರ್ಯಕ್ರಮ ನೋಡಲೇ ಬೇಕು ಅಂತ ಅನಿಸುವ ಹಾಗೆ ಮಾಡುತ್ತಿದ್ದು ಕಾರ್ಯಕ್ರಮದ ಪ್ರೋಮೋಗಳು. ಆ ಒಂದೊಂದು ಪ್ರೋಮೋಗಳು ಸಹ ಸಖತ್ ಕುತೂಹಲ ಹುಟ್ಟಿಸುತ್ತಿದ್ದವು.

ಸಾಧಕರು

ಪ್ರತಿ ವಾರ ಬರುವ ಸಾಧಕರನ್ನು ನೋಡುವುದಕ್ಕೆ ಜನ ಕಾಯುತ್ತಿದ್ದರು. ಅದು ಸಿನಿಮಾ ಸ್ಟಾರ್ ಆಗಲಿ ಅಥವಾ ಯಾವುದೇ ವಿಭಾಗದ ಸಾಧಕರೇ ಆಗಲಿ ಜನ ಅವರ ಕಥೆ ಕೇಳುವುದಕ್ಕೆ ಆಸೆ ಪಡುತ್ತಿದ್ದರು.

ಸ್ಫೂರ್ತಿ

'ವೀಕೆಂಡ್ ವಿತ್ ರಮೇಶ್' ನೋಡುಗರಿಗೆ ಇದು ಟೈಂ ಪಾಸ್ ಕಾರ್ಯಕ್ರಮ ಅಂತ ಎಂದಿಗೂ ಅನಿಸಿಲ್ಲ. ಯಾಕಂದ್ರೆ ಪ್ರತಿ ಸಂಚಿಕೆ ಮುಗಿದ ಮೇಲೆ ಎಲ್ಲರಿಗೂ 'ನಾನು ಏನಾದ್ರೂ ಮಾಡಬೇಕು..' ಎಂಬ ಸ್ಫೂರ್ತಿ ಎಲ್ಲರಿಗೂ ಮೂಡುತಿತ್ತು.

ತಂಡದ ಶ್ರಮ

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ದೊಡ್ಡ ಗೆಲುವಿನ ಹಿಂದೆ ಇಡೀ ತಂಡದ ದೊಡ್ಡ ಶ್ರಮ ಇದೇ. ಸಾಧಕರನ್ನು ಕಾರ್ಯಕ್ರಮಕ್ಕೆ ಕರೆಸುವುದರಿಂದ ಹಿಡಿದು ಅವರ ಬಗ್ಗೆ ರಿಸರ್ಚ್ ಮಾಡುವುದರಿಂದ ಹಿಡಿದು ಪ್ರತಿಯೊಂದು ಹಂತದಲ್ಲಿಯೂ ಇಡೀ ತಂಡ ಕಷ್ಟ ಪಟ್ಟು ಕೆಲಸ ಮಾಡಿದೆ.

English summary
The Reasons For A Great Success OF Zee Kannada channel's popular show 'Weekend With Ramesh'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada