»   » 60*40 ಸೈಟ್ ನೋಡಲು ಹೋದ ಅಮೂಲ್ಯಗೆ 'ಮದುವೆ' ಫಿಕ್ಸ್ ಆಯ್ತಂತೆ.!

60*40 ಸೈಟ್ ನೋಡಲು ಹೋದ ಅಮೂಲ್ಯಗೆ 'ಮದುವೆ' ಫಿಕ್ಸ್ ಆಯ್ತಂತೆ.!

Posted By:
Subscribe to Filmibeat Kannada

ನಟಿ ಅಮೂಲ್ಯ ದಾಂಪತ್ಯ ಜೀವನ ಶುರು ಮಾಡಿದ್ದಾಗಿದೆ. ರಾಜರಾಜೇಶ್ವರಿ ನಗರದ ರಾಮಚಂದ್ರ ರವರ ಪುತ್ರ ಜಗದೀಶ್ ರವರೊಂದಿಗೆ ಅಮೂಲ್ಯ ಮದುವೆ ಆಗಿ ತಿಂಗಳ ಮೇಲಾಗಿದೆ.

ಎಲ್ಲರಿಗೂ ಗೊತ್ತಿರುವ ಹಾಗೆ, ಜಗದೀಶ್ ಹಾಗೂ ಅಮೂಲ್ಯ ರವರದ್ದು ಅರೇಂಜ್ಡ್ ಮ್ಯಾರೇಜ್. ಆದ್ರೆ, ಅದರ ಹಿಂದೆ 60*40 ಸೈಟ್ ಕಥೆ ಇತ್ತು ಅನ್ನೋದು ಮಾತ್ರ ಅಷ್ಟಾಗಿ ಯಾರಿಗೂ ಗೊತ್ತಿಲ್ಲ.

ಈ 60*40 ಸೈಟ್ ಕಥೆ ಬಹಿರಂಗ ಆಗಿದ್ದು ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ.... ಟಾಕ್ ಶೋನಲ್ಲಿ ಜಗದೀಶ್ ಹಾಗೂ ಅಮೂಲ್ಯ ತಮ್ಮ 'ಮದುವೆ' ಸ್ಟೋರಿಯನ್ನ ಬಿಚ್ಚಿಟ್ಟಿದ್ದು ಹೀಗೆ...

ಕಬ್ಬಡಿ ಟೂರ್ನಮೆಂಟ್

''ನಾವೊಂದು ಕಬ್ಬಡಿ ಟೂರ್ನಮೆಂಟ್ ಮಾಡ್ತಿದ್ವಿ. ಆಗ ನಮ್ಮ ತಂದೆ ಗೆಸ್ಟ್ ಲಿಸ್ಟ್ ಮಾಡಬೇಕಾದರೆ, 'ಯಾರಾದರೂ ಆರ್ಟಿಸ್ಟ್ ಇದ್ದರೆ ಗೆಸ್ಟ್ ಆಗಿ ಬರಬಹುದಾ' ಅಂತ ಶಿಲ್ಪಾ ಹಾಗೂ ಗಣೇಶ್ ರವರನ್ನ ಕೇಳಿದ್ದಾರೆ. ಅದೇ ಟೈಮ್ ಗೆ ಅಮೂಲ್ಯ ಸೈಟ್ ಹುಡುಕುತ್ತಿದ್ದರಂತೆ'' - ಜಗದೀಶ್, ಅಮೂಲ್ಯ ಪತಿ

ಶಿಲ್ಪಾ ಗಣೇಶ್ ಮಧ್ಯಸ್ಥಿಕೆ

''ಅಮೂಲ್ಯ ಗೆ ಶಿಲ್ಪಾ ಫೋನ್ ಮಾಡಿ, ''ರಾಜರಾಜೇಶ್ವರಿ ನಗರದಲ್ಲಿ ರಾಮಚಂದ್ರ ಅವರು ಒಳ್ಳೆಯ ಹೆಸರು ಮಾಡಿದ್ದಾರೆ. ಅವರ ಫಂಕ್ಷನ್ ಗೆ ಬರುವ ಹಾಗೆ ಬಂದು ಮೀಟ್ ಮಾಡು. ಯಾವುದಾದರೂ ಒಳ್ಳೆ ಸೈಟ್ ಇದ್ದರೆ ಹೇಳ್ತಾರೆ'' ಅಂತ ಹೇಳಿದ್ದಾರೆ'' - ಜಗದೀಶ್, ಅಮೂಲ್ಯ ಪತಿ

ಮೊದಲ ಬಾರಿಗೆ ನೋಡಿದ್ದು

''ಅದೇ ಫಂಕ್ಷನ್ ಗೆ ಇನ್ವೈಟ್ ಮಾಡಲು ಬಂದಾಗಲೇ, ನನ್ನ ಮಾವ ರವರನ್ನ ನಾನು ಮೊದಲ ಬಾರಿಗೆ ನೋಡಿದ್ದು. ಫಂಕ್ಷನ್ ಗೆ ಹೋದಾಗ ಫಸ್ಟ್ ಟೈಮ್ ಜಗದೀಶ್ ರವರನ್ನ ನೋಡಿದ್ದು'' - ಅಮೂಲ್ಯ, ನಟಿ

ಬರ್ತಡೇಗೆ ವಿಶ್ ಮಾಡಿದ್ದೆ

''ಅದಾದ್ಮೇಲೆ ನಾನು ಅವರ ಜೊತೆ ಮಾತನಾಡಿಲ್ಲ. ಅಮೂಲ್ಯ ಬರ್ತಡೇಗೆ ವಿಶ್ ಮಾಡಿದ್ದೆ ಅಷ್ಟೇ'' - ಜಗದೀಶ್, ಅಮೂಲ್ಯ ಪತಿ

ಶಿಲ್ಪಾ ಮನಸ್ಸಿಗೆ ಅನಿಸಿದೆ.!

''ನಾವಿಬ್ಬರು ಮದುವೆ ಆಗಬೇಕು ಅಂತ ನಾವು ಯಾವತ್ತೂ ಅಂದುಕೊಂಡಿರಲಿಲ್ಲ. ಜಗದೀಶ್ ರವರಿಗೂ ಹುಡುಗಿಯನ್ನ ಹುಡುಕುತ್ತಿದ್ದರು. ಯಾಕೆ ನಮ್ಮ ಅಮೂಲ್ಯ ಜೊತೆ ಮದುವೆ ಆಗಬಾರದು ಅಂತ ಶಿಲ್ಪಾ ರವರಿಗೆ ಅನಿಸಿದೆ. ಅದಾದ್ಮೇಲೆ ನಮ್ಮಿಬ್ಬರಿಗೆ ಮದುವೆ ಆಗಿದ್ದು'' - ಅಮೂಲ್ಯ, ನಟಿ

ಸಂಬಂಧ ಬೆಸೆದಿದೆ

''ಜಗದೀಶ್ ತುಂಬಾ ಒಳ್ಳೆಯ ಹುಡುಗ ಅಂತ ಶಿಲ್ಪಾ ಆಗಾಗ ನನಗೆ ಹೇಳುತ್ತಿದ್ದರು. ಆದ್ರೆ, ಅವರ ಮನಸ್ಸಿನಲ್ಲೂ ನಮ್ಮಿಬ್ಬರಿಗೆ ಮದುವೆ ಮಾಡಿಸಬೇಕು ಎಂದು ಮೊದಲು ಅನಿಸಿರಲಿಲ್ಲ. ಆದ್ರೆ, ಕೊನೆಗೆ ಸಂಬಂಧ ಬೆಸೆದಿದೆ'' - ಅಮೂಲ್ಯ, ನಟಿ

English summary
Kannada Actress Amulya-Jagadeesh Marriage story revealed in Colors Super channel's popular show 'Super Talk time'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada