For Quick Alerts
  ALLOW NOTIFICATIONS  
  For Daily Alerts

  ರಘು ದೀಕ್ಷಿತ್ ಗೆ ಅವಮಾನ ಮಾಡಿದ ಕನ್ನಡದ 'ಆ' ಮಹಾನ್ ಡೈರೆಕ್ಟರ್ ಯಾರು.?

  By Harshitha
  |

  ಕನ್ನಡ, ಹಿಂದಿ ಹಾಗೂ ತಮಿಳು ಸಿನಿಮಾಗಳಲ್ಲಿ ಸಂಗೀತ ನಿರ್ದೇಶಕರಾಗಿ ಅನೇಕ ಸೂಪರ್ ಹಿಟ್ ಹಾಡುಗಳನ್ನು ನೀಡಿರುವ ರಘು ದೀಕ್ಷಿತ್ ಬರೀ ಭಾರತದಲ್ಲಿ ಮಾತ್ರ ಅಲ್ಲ ಜಗತ್ತಿನಾದ್ಯಂತ ಜನಪ್ರಿಯತೆ ಗಳಿಸಿದ್ದಾರೆ.

  1998 ರಿಂದ ಇಂದಿನವರೆಗೂ ಯು.ಎಸ್.ಎ, ಯು.ಕೆ, ಕೊರಿಯಾ, ಜಪಾನ್, ಹಾಂಗ್ ಕಾಂಗ್ ಸೇರಿದಂತೆ ವಿಶ್ವದಾದ್ಯಂತ 25ಕ್ಕೂ ಹೆಚ್ಚು ದೇಶಗಳಲ್ಲಿ 1500ಕ್ಕೂ ಹೆಚ್ಚು ಕಾನ್ಸರ್ಟ್ ನೀಡಿರುವ ರಘು ದೀಕ್ಷಿತ್ ರವರಿಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ.

  ಗಾಯಕ ರಘು ದೀಕ್ಷಿತ್ ಅಂತಹ ಸಾಧನೆ ಏನು ಮಾಡಿದ್ದಾರೆ?

  ಇಂತಿಪ್ಪ ರಘು ದೀಕ್ಷಿತ್ ರವರಿಗೆ ಕನ್ನಡದ ಒಬ್ಬ ಮಹಾನ್ ಡೈರೆಕ್ಟರ್ ಅವಮಾನ ಮಾಡಿದ್ದಾರೆ. ''ನಿಮ್ಮದು ಫಿಲ್ಮ್ ಮ್ಯೂಸಿಕ್ ಅಲ್ಲ'' ಎಂದು ಹೇಳಿ ರಘು ದೀಕ್ಷಿತ್ ರವರ ಸಂಗೀತ ಪಯಣಕ್ಕೆ 'ಆ' ನಿರ್ದೇಶಕ ಅಪಮಾನ ಮಾಡಿದ್ದಾರೆ. ಮುಂದೆ ಓದಿರಿ...

  'ಸೂಪರ್ ಟಾಕ್ ಟೈಮ್'ನಲ್ಲಿ ರಘು ದೀಕ್ಷಿತ್

  'ಸೂಪರ್ ಟಾಕ್ ಟೈಮ್'ನಲ್ಲಿ ರಘು ದೀಕ್ಷಿತ್

  ಕಲರ್ಸ್ ಸೂಪರ್ ವಾಹಿನಿಯ ಜನಪ್ರಿಯ ಶೋ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ರಘು ದೀಕ್ಷಿತ್ ಭಾಗವಹಿಸಿದ್ರು. ಅಕುಲ್ ಬಾಲಾಜಿ ಜೊತೆ ಮಾತನಾಡುತ್ತಾ ರಘು ದೀಕ್ಷಿತ್ ಒಂದು ಘಟನೆಯನ್ನ ನೆನಪಿಸಿಕೊಂಡರು.

  ಇಲ್ಲ ಸಲ್ಲದ ಅಪವಾದ: ಕನ್ನಡ ಚಿತ್ರರಂಗದ ಮೇಲೆ ಮುನಿಸಿಕೊಂಡ ರಘು ದೀಕ್ಷಿತ್.!

  ಮಹಾನ್ ಡೈರೆಕ್ಟರ್ ಹೇಳಿದ್ದೇನು.?

  ಮಹಾನ್ ಡೈರೆಕ್ಟರ್ ಹೇಳಿದ್ದೇನು.?

  ''ನಿಮ್ಮದು ಫಿಲ್ಮ್ ಮ್ಯೂಸಿಕ್ ಅಲ್ಲ ರೀ... ಫಿಲ್ಮ್ ಸೌಂಡ್ ಅಲ್ಲ ನಿಮ್ಮದು'' ಅಂತ ಒಬ್ಬ ಮಹಾನ್ ಡೈರೆಕ್ಟರ್ ನಮ್ಮ ಇಂಡಸ್ಟ್ರಿಯಲ್ಲಿ ನನಗೆ ಹೇಳಿದ್ರು'' ಎಂದು ರಘು ದೀಕ್ಷಿತ್ ಬೇಸರದಿಂದ ನುಡಿದರು.

  ಗಾಯಕ ರಘು ದೀಕ್ಷಿತ್ ಗೆ ಸಲಾಂ ಹೊಡೆದ ಬಾಲಿವುಡ್ ದಿಗ್ಗಜರು!

  ಪ್ರಶ್ನೆ ಮಾಡಬೇಕು

  ಪ್ರಶ್ನೆ ಮಾಡಬೇಕು

  ''ಫಿಲ್ಮ್ ಸೌಂಡೋ.. ಬ್ಯಾಂಡ್ ಸೌಂಡೋ.. ನನ್ನ ಎರಡು ಸಿನಿಮಾಗಳಲ್ಲಿ ಹಿಟ್ ಆಗಿರುವ ಸಾಂಗ್ಸ್ ಎಷ್ಟಿದೆ.? ಇದನ್ನ ಅವರಿಗೆ ನಾನು ನಿಜವಾಗಲೂ ಪ್ರಶ್ನೆ ಮಾಡಬೇಕು'' - ರಘು ದೀಕ್ಷಿತ್

  ಯಾರು ಆ ಮಹಾನ್ ನಿರ್ದೇಶಕ.?

  ಯಾರು ಆ ಮಹಾನ್ ನಿರ್ದೇಶಕ.?

  ಒಬ್ಬ ಮಹಾನ್ ನಿರ್ದೇಶಕ ಹೀಗೆ ಹೇಳಿದರು ಎಂದು ರಘು ದೀಕ್ಷಿತ್ ಹೇಳಿದರೆ ಹೊರತು ಆ ನಿರ್ದೇಶಕ ಯಾರು ಅಂತ ಮಾತ್ರ ರಘು ದೀಕ್ಷಿತ್ ಬಾಯಿ ಬಿಡಲಿಲ್ಲ. 'ಯಾರು.?' ಎಂದು ಅಕುಲ್ ಬಾಲಾಜಿ ಪ್ರಶ್ನೆ ಮಾಡಿದಾಗಲೂ, ಹೆಸರು ಹೇಳಲು ರಘು ದೀಕ್ಷಿತ್ ಇಚ್ಛಿಸಲಿಲ್ಲ.

  ನಿಜವಾಗಲೂ ಅರ್ಥ ಆಗುವುದಿಲ್ಲ

  ನಿಜವಾಗಲೂ ಅರ್ಥ ಆಗುವುದಿಲ್ಲ

  ''ಒಬ್ಬ ಡೈರೆಕ್ಟರ್ ಗೆ ಅಥವಾ ಒಬ್ಬ ಪ್ರೊಡ್ಯೂಸರ್ ಗೆ ಸಿನಿಮಾ ಹೇಗೆ ಹಿಟ್ ಆಗುತ್ತೆ ಅನ್ನೋದು ಇದ್ದಿದ್ರೆ, ಅವರು ಮಾಡಿದ ಅಷ್ಟೂ ಸಿನಿಮಾಗಳು ಹಿಟ್ ಆಗಬೇಕಿತ್ತು. ಪ್ರತಿಯೊಂದು ಸಾಂಗ್ ಕೂಡ ಹಿಟ್ ಆಗಬೇಕಿತ್ತು. ಜನ ಯಾಕೆ ಈ ತರಹ ಮಾತನಾಡುತ್ತಾರೆ ಅಂತ ನಿಜವಾಗಲೂ ನನಗೆ ಅರ್ಥ ಆಗುವುದಿಲ್ಲ'' - ರಘು ದೀಕ್ಷಿತ್

  ವೃತ್ತಿ ಬದುಕು ಹಾಳಾಗುತ್ತದೆ

  ವೃತ್ತಿ ಬದುಕು ಹಾಳಾಗುತ್ತದೆ

  ''ಇದರಿಂದ ಒಬ್ಬರ ಕೆರಿಯರ್ ಹಾಳಾಗುತ್ತದೆ. ಒಬ್ಬರ ಹೊಟ್ಟೆ ಮೇಲೆ ಹೊಡೆಯುತ್ತಿದ್ದೇವೆ ಅಂತ ಯೋಚನೆ ಕೂಡ ಬರುವುದಿಲ್ಲ. ಬಾಯಿಗೆ ಬಂದಿದ್ದು ಮಾತನಾಡುತ್ತಾರೆ. ನಮ್ಮ ಕರ್ನಾಟಕದ ಗಾಯಕರ ಕೆರಿಯರ್ ಹಾಳಾಗುತ್ತಿರುವುದು ಇದರಿಂದಲೇ. ಒಳ್ಳೆ ಕೆಲಸ ಕೊಟ್ಟರೆ ತುಂಬ ಬಿಜಿಯಿದ್ದರೂ, ಬಿಟ್ಟಿ ಮಾಡಿಕೊಂಡು ಬರ್ತೀವಿ ನಾವು'' - ರಘು ದೀಕ್ಷಿತ್

  English summary
  Music Director Raghu Dixit revealed that he was insulted by a Kannada Film Director.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X