»   » ಬಿಗ್ ಬಾಸ್ ನಲ್ಲಿ ಜನ ಸಾಮಾನ್ಯರು :13 ರಲ್ಲಿ 8 ಜನಕ್ಕೆ ಅವಕಾಶ!

ಬಿಗ್ ಬಾಸ್ ನಲ್ಲಿ ಜನ ಸಾಮಾನ್ಯರು :13 ರಲ್ಲಿ 8 ಜನಕ್ಕೆ ಅವಕಾಶ!

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ರಿಯಾಲಿಟಿ ಶೋ ಇತಿಹಾಸದಲ್ಲೇ ಅತ್ಯಂತ ವಿವಾದಾತ್ಮಕ ಶೋ ಎನಿಸಿಕೊಂಡಿರುವ ಬಿಗ್ ಬಾಸ್ ಮತ್ತೊಮ್ಮೆ ಕಲರ್ಸ್ ವಾಹಿನಿಯಲ್ಲಿ ಪ್ರಸಾರಕ್ಕೆ ಸಜ್ಜಾಗಿದೆ. ಸಲ್ಮಾನ್ ಖಾನ್ ನಿರೂಪಣೆಯ ಈ ಬಿಗ್ ಬಾಸ್ ನಲ್ಲಿ ಜನ ಸಾಮಾನ್ಯರಿಗೂ ಸ್ಪರ್ಧಿಸುವ ಅವಕಾಶ ಕಲ್ಪಿಸಲಾಗಿದ್ದು, ಸೆಲಿಬ್ರಿಟಿಗಳು ಹಾಗೂ ಜನ ಸಾಮಾನ್ಯರು ಸ್ಪರ್ಧಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ.

  ಸದ್ಯಕ್ಕೆ ಸ್ಪರ್ಧಿಗಳ ವಿವರವನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಆದರೆ, ಅದೇ ಅಂತಿಮ ಪಟ್ಟಿಯಲ್ಲ. 13 ಜನರ ಪೈಕಿ 8 ಮಂದಿ ಅಂತಿಮವಾಗಿ ಬಿಗ್ ಬಾಸ್ ಮನೆ ಸೇರಲಿದ್ದಾರೆ. [ಬಿಗ್ ಬಾಸ್ ಗೆದ್ದ ಪ್ರಿನ್ಸ್ ಈಗ ಹ್ಯಾಟ್ರಿಕ್ ಚಾಂಪಿಯನ್!]

  ಕಲರ್ಸ್ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದ ತನಕ ರಾತ್ರಿ 10.30ರ ನಂತರ ಬಿಗ್ ಬಾಸ್ 10 ಪ್ರಸಾರವಾಗಲಿದೆ. ಶನಿವಾರ ಹಾಗೂ ಸೋಮವಾರ ಮಾತ್ರ 9 ಗಂಟೆಗೆ ಸಲ್ಮಾನ್ ಖಾನ್ ನಿಮ್ಮ ಮುಂದೆ ಕಾಣಿಸಿಕೊಳ್ಳಲಿದ್ದಾರೆ. ಅಕ್ಟೋಬರ್ 16ರಿಂದ ಬಿಗ್ ಬಾಸ್ ಶುರು.[ಬಿಗ್ ಬಾಸ್ 10 ಚಾಲನೆ: ಬೆಂಗಳೂರು ಬೆಡಗಿ ಜತೆ ಸಲ್ಮಾನ್]

  ಜನಸಾಮಾನ್ಯರ ಆಯ್ಕೆ ಹೇಗೆ? ಎಷ್ಟು ಜನ ನಾನ್ ಸೆಲಿಬ್ರಿಟಿಗಳಿಗೆ ಅವಕಾಶ ಸಿಗಲಿದೆ? ಎಂಬ ಪ್ರಶ್ನೆಗೆ ಕಲರ್ಸ್ ವಾಹಿನಿ ಸಿಇಒ ರಾಜ್ ನಾಯಕ್ ಅವರು ಪ್ರೋಮೊಗಳ ಮೂಲಕ ಉತ್ತರಿಸಿದ್ದಾರೆ. ಲಭ್ಯ ಮಾಹಿತಿಯಂತೆ 50-50 ಅನುಪಾತದಲ್ಲಿ ಸೆಲಿಬ್ರಿಟಿ ಹಾಗೂ ಜನ ಸಾಮಾನ್ಯರಿಗೆ ಅವಕಾಶ ಸಿಗಲಿದೆ. 13 ಜನ ನಾನ್ ಸೆಲಿಬ್ರಿಟಿ ಸಂಭಾವ್ಯ ಪಟ್ಟಿಯಲ್ಲಿ 8 ಜನರಿಗೆ ಮಾತ್ರ ಅವಕಾಶ ಸಿಗಲಿದೆ. ಯಾರು ಈ ಸ್ಪರ್ಧಿಗಳು ಮುಂದೆ ಓದಿ...

  ಯಾರೆಲ್ಲ ಸೆಲೆಬ್ರಿಟಿಗಳು ಸ್ಪರ್ಧಿಗಳಾಗುತ್ತಾರೆ?

  ಯಾರೆಲ್ಲ ಸೆಲೆಬ್ರಿಟಿಗಳು ಸ್ಪರ್ಧಿಗಳಾಗುತ್ತಾರೆ? ಎಂಬುದರ ಬಗ್ಗೆ ಹಬ್ಬಿದ್ದ ಗಾಳಿ ಸುದ್ದಿ ಯಂತೆ ಸನಾ ಸಯೀದ್, ಶೈನಿ ಅಹುಜಾ, ಕಬೀರ್ ಬೇಡಿ, ರಾಧೆ ಮಾ, ರಾಹುಲ್ ರಾಜ್ ಸಿಂಗ್, ಸುನಿಲ್ ಗ್ರೋವರ್,ನಕ್ಷತ್ರಾ ಬಾಗ್ವೆ, ಅರ್ಮಾನ್ ಜೈನ್, ಮಯೂರ್ ವರ್ಮ, ರೋಹನ್ ಮೆಹ್ರಾ, ಪಾರ್ಥ್ ಸಮರ್ಥನ್ ಅವರ ಹೆಸರು ಸಂಭಾವ್ಯ ಪಟ್ಟಿಯಲ್ಲಿತ್ತು. ಆದರೆ, ಸೆಲೆಬ್ರಿಟಿಗಳ ಪಟ್ಟಿ ಇನ್ನೂ ಪ್ರಕಟವಾಗಿಲ್ಲ.

  ಸಾರ್ವಜನಿಕರೇ ಆಯ್ಕೆ ಮಾಡಿದ ನಾನ್ ಸೆಲೆಬ್ರಿಟಿಗಳು

  ಬಿಗ್ ಬಾಸ್ 10ರಲ್ಲಿ ಸೆಲೆಬ್ರಿಟಿಗಳ ಜತೆಗೆ ಜನ ಸಾಮಾನ್ಯರು ಸ್ಪರ್ಧಿಗಳು ಕಣದಲ್ಲಿರುತ್ತಾರೆ ಎಂಬ ಸುದ್ದಿ ಎಲ್ಲರಿಗೂ ಪಕ್ಕಾ ಆಗಿದೆ. ಈ ಜನ ಸಾಮಾನ್ಯ ಅಥವಾ ನಾನ್ ಸೆಲೆಬ್ರಿಟಿಗಳನ್ನು ಆಯ್ಕೆ ಮಾಡುವ ಅವಕಾಶ ಕೂಡಾ ಸಾರ್ವಜನಿಕರಿಗೆ ನೀಡಲಾಗಿತ್ತು. ಬಿಗ್ ಬಾಸ್ ಶೋನ ಪಾರ್ಟ್ನರ್ ಯುಎಸ್ ಬ್ರೌಸರ್ ಮೂಲಕ ನಾನ್ ಸೆಲೆಬ್ರಿಟಿಗಳಿಗೆ ವೋಟ್ ಮಾಡಿ ಆಯ್ಕೆ ಮಾಡಲಾಗಿದೆ. ಅಕ್ಟೋಬರ್ 16ರಂದು ಈಗ ಸಂಭಾವ್ಯ ಪಟ್ಟಿಯಲ್ಲಿರುವ 13 ಮಂದಿ ಪೈಕಿ 8 ಜನ ಮಾತ್ರ ಪ್ರವೇಶಿಸಲಿದ್ದಾರೆ. ಮಿಕ್ಕವರು ನಂತರ ವೈಲ್ಡ್ ಕಾರ್ಡ್ ಎಂಟ್ರಿ ಕೊಡಬಹುದು.

  ಜನ ಸಾಮಾನ್ಯರ ಆಯ್ಕೆಯ ಸ್ಪರ್ಧಿ #1 ಮನೋಜ್ ಪಂಜಾಬಿ

  ಜನ ಸಾಮಾನ್ಯರ ಆಯ್ಕೆಯ ಸ್ಪರ್ಧಿ #1 34 ವರ್ಷ ವಯಸ್ಸಿನ ಮನೋಜ್ ಪಂಜಾಬಿ ಅವರು ಜೈಪುರ ಮೂಲದ ಉದ್ಯಮಿ. ಕ್ರಿಕೆಟ್ ಆಡುವುದು, ಹುಡುಗಿಯರ ಜತೆ ಫ್ಲರ್ಟ್ ಮಾಡುವುದು, ಕಾರ್ಟೂನ್ ಶೋ ನೋಡುವುದು, ಮಿಮಿಕ್ರಿ ಮಾಡುವುದು ಇವರ ಹವ್ಯಾಸ. Sunsign - Capricorn.

  ಜನ ಸಾಮಾನ್ಯರ ಆಯ್ಕೆಯ ಸ್ಪರ್ಧಿ #2 ಲೋಕೇಶ್ ಕುಮಾರಿ

  ಜನ ಸಾಮಾನ್ಯರ ಆಯ್ಕೆಯ ಸ್ಪರ್ಧಿ ಲೋಕೇಶ್ ಕುಮಾರಿ ಶರ್ಮ ಅವರು ದೆಹಲಿ ಮೂಲದ ವಿದ್ಯಾರ್ಥಿನಿ. 25 ವರ್ಷ ವಯಸ್ಸಿನ ಕುಮಾರಿ ಶರ್ಮ ಅವರಿಗೆ ಡ್ಯಾನ್ಸ್ ಎಂದರೆ ತುಂಬಾ ಇಷ್ಟ. ಹಾಡುಗಾರಿಕೆ, ಊಟ ತಿನ್ನುವುದು, ಸುತ್ತಾಟ, ಮನರಂಜನೆ ಇವರಿಗೆ ಲೈಫ್ ನಲ್ಲಿ ಆದ್ಯತೆಯ ವಿಷಯಗಳು. Sunsign: Pisces

  ಜನ ಸಾಮಾನ್ಯರ ಆಯ್ಕೆಯ ಸ್ಪರ್ಧಿ #3 ನಿತಿಬಾ

  ಜನ ಸಾಮಾನ್ಯರ ಆಯ್ಕೆಯ ಮೂರನೇ ಸ್ಪರ್ಧಿ ನಿತಿಬಾ ಕೌಲ್ ಅವರು ದೆಹಲಿ ಮೂಲದ ಆರ್ಥಿಕ ವಿಭಾಗದ ವೃತ್ತಿಪರರಾಗಿದ್ದಾರೆ. ಗಾಯಕಿ, ಡ್ಯಾನ್ಸರ್, ಈಜುಗಾರ್ತಿ. 23 ವರ್ಷ ವಯಸ್ಸಿನ ನಿತಿಬಾ ಅವರಿಗೆ ಹಾಡು ಕೇಳುವುದು, ಪುಸ್ತಕ ಓದುವುದು ಮುಖ್ಯ ಹವ್ಯಾಸ. Sunsign - Capricorn.

  ಜನ ಸಾಮಾನ್ಯರ ಆಯ್ಕೆಯ ಸ್ಪರ್ಧಿ #4 ಮನೋಜ್

  ಜನ ಸಾಮಾನ್ಯರ ಆಯ್ಕೆಯ ನಾಲ್ಕನೇ ಸ್ಪರ್ಧಿ ಮನ್ವೀರ್ ಗುರ್ಜಾರ್ (ಮನೋಜ್ ಕುಮಾರ್ ಬೈಸೋಯಾ) ಅವರು ನೋಯ್ಡಾ ಮೂಲದವರಾಗಿದ್ದಾರೆ. ಹೈನುಗಾರಿಕೆ ವೃತ್ತಿಯಲ್ಲಿದ್ದು, ಜಿಮ್ ನಲ್ಲಿ ಬೆವರಿಳಿಸುವುದೆಂದರೆ ಸಕತ್ ಖುಷಿಯಂತೆ. ಕಬಡ್ಡಿ, ಕುಸ್ತಿ ಆಡುವುದು, ನೋಡುವುದು ಇಷ್ಟ. 29 ವರ್ಷದ ಮನ್ವೀರ್ ಗೆ ಗೆಳೆಯರ ಜತೆ ಸುತ್ತಾಟ ನೆಚ್ಚಿನ ಹವ್ಯಾಸ. Sunsign: Gemini

  ಜನ ಸಾಮಾನ್ಯರ ಆಯ್ಕೆಯ ಸ್ಪರ್ಧಿ #5 ನವೀನ್

  ಜನ ಸಾಮಾನ್ಯರ ಆಯ್ಕೆಯ ಐದನೇ ಸ್ಪರ್ಧಿ ನವೀನ್ ಪ್ರಕಾಶ್ ಅವರು ಬಿಹಾರದವರು. ಬಿಹಾರದ ಝಾಂಜಾದಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಹಜವಾಗಿ ಅಧ್ಯಯನ ಇವರ ನೆಚ್ಚಿನ ವಿಷಯ. ಹಾಡುಗಳು ಕೇಳುವುದು ಇಷ್ಟ. 26 ವರ್ಷ ವಯಸ್ಸಿನ ನವೀನ್ ಅವರು ನೆಚ್ಚಿನ ಶಿಕ್ಷಕರಾಗಿ ಜನಪ್ರಿಯತೆ ಗಳಿಸಿದ್ದಾರೆ.Sunsign: Leo

  ಜನ ಸಾಮಾನ್ಯರ ಆಯ್ಕೆಯ ಸ್ಪರ್ಧಿ #6 ಕಾಜೋಲ್

  ಜನ ಸಾಮಾನ್ಯರ ಆಯ್ಕೆಯ ಆರನೇ ಸ್ಪರ್ಧಿ ಮುಂಬೈ ಮೂಲದ 23ರ ಹರೆಯದ ಕಾಜೋಲ್ ತ್ಯಾಗಿ. ಯೂಟ್ಯೂಬ್ ಚಾನೆಲ್ ಮೂಲಕ ಜನಪ್ರಿಯತೆ ಗಳಿಸಿದ ಈಕೆ ನಟಿ ಕೂಡಾ ಹೌದು. ಡ್ಯಾನ್ಸಿಂಗ್, ಗಡತ್ತಾಗಿ ನಿದ್ದೆ ಮಾಡುವುದು ಹವ್ಯಾಸ. ತುಂಬಾ ವಾಚಾಳಿ. Sunsign: Capricorn

  ಜನ ಸಾಮಾನ್ಯರ ಆಯ್ಕೆಯ ಸ್ಪರ್ಧಿ #7 ಪ್ರಮೋದ್

  ಜನ ಸಾಮಾನ್ಯರ ಆಯ್ಕೆಯ 7ನೇ ಸ್ಪರ್ಧಿ ಪ್ರಮೋದ್ ದಾಹಿಯಾ ಅವರು ಲೇಖಕ ಕಮ್ ನಟರಾಗಿ ಕಾಣಿಸಿಕೊಂಡವರು. ಹರ್ಯಾಣ ಮೂಲದ ಪ್ರಮೋದ್ ಅವರು ಈಗ ಮುಂಬೈನಲ್ಲಿ ನೆಲೆ ಕಂಡಿದ್ದಾರೆ. ಮನೆ ಉಟ ಎಂದರೆ ತುಂಬಾ ಇಷ್ಟ, ಕ್ರೀಡೆ, ಹಳೆ ಹಾಡು ಕೇಳುವುದು ಹವ್ಯಾಸ. 37 ವರ್ಷ ವಯಸ್ಸಿನ ಪ್ರಮೋದ್ ಅವರ ರಾಶಿ : ಕುಂಭ (Aguarius)

  ಜನ ಸಾಮಾನ್ಯರ ಆಯ್ಕೆಯ ಸ್ಪರ್ಧಿ #8 ನಿಖಿಲ್

  ಜನ ಸಾಮಾನ್ಯರ ಆಯ್ಕೆಯ 8ನೇ ಸ್ಪರ್ಧಿ 24 ವರ್ಷ ವಯಸ್ಸಿನ ನಿಖಿಲ್ ಮೆಹ್ತಾ ಅವರು ಮುಂಬೈ ಮೂಲದವರು. ಗಾಯಕ ಕಮ್ ನಟ, ಕ್ರಿಕೆಟ್ ಆಡುವುದು ಇವರ ಹವ್ಯಾಸ. Sunsign: Sagittarius

  ಜನ ಸಾಮಾನ್ಯರ ಆಯ್ಕೆಯ ಸ್ಪರ್ಧಿ #9 ದೇವ್ ದೇವಗನ್

  ಜನ ಸಾಮಾನ್ಯರ ಆಯ್ಕೆಯ 9ನೇ ಸ್ಪರ್ಧಿ ದೇವ್ ದೇವಗನ್(ದವಿಂದ್ರ ದೇವಗನ್) ಅವರು ಲೂಧಿಯಾನಾ ಮೂಲದ ಉದ್ಯಮಿಯಾಗಿದ್ದಾರೆ. 30 ವರ್ಷ ವಯಸ್ಸಿನ ದೇವ್ ಅವರಿಗೆ ಭಾಂಗ್ರಾ ನೃತ್ಯ ತುಂಬಾ ಇಷ್ಟ. ಜೋರು ಜೋರಾಗಿ ಮಾತನಾಡುವುದು, ಕಿರುಚಾಟ, ಅರಚಾಟ ಇದ್ದರೆ ಫುಲ್ ಖುಷಿ.

  ಜನ ಸಾಮಾನ್ಯರ ಆಯ್ಕೆಯ ಸ್ಪರ್ಧಿ #10 ಫಿರೋಜ್ ಖಾನ್

  ಜನ ಸಾಮಾನ್ಯರ ಆಯ್ಕೆಯ 10ನೇ ಸ್ಪರ್ಧಿ 27 ವರ್ಷ ವಯಸ್ಸಿನ ಫಿರೋಜ್ ಖಾನ್ ಅವರು ಮುಂಬೈ ಮೂಲದವರು. ನಟ, ಗಾಯಕರಾಗಿ ವೃತ್ತಿ ಕಂಡು ಕೊಂಡಿದ್ದಾರೆ,. ರಾಫ್ಟಿಂಗ್, ಬಂಗಿ ಜಂಪಿಂಗ್, ಸೈಕ್ಲಿಂಗ್, ಸಾಹಸ ಕ್ರೀಡೆಗಳು ಇಷ್ಟ, Sunsign: Scorpion

  ಜನ ಸಾಮಾನ್ಯರ ಆಯ್ಕೆಯ ಸ್ಪರ್ಧಿ #11 ಮಂದಿರಾ

  ಜನ ಸಾಮಾನ್ಯರ ಆಯ್ಕೆಯ 11ನೇ ಸ್ಪರ್ಧಿ ಮಂದಿರಾ ಚೌಹಾನ್ ಅವರು ಪುಣೆ ಮೂಲದವರು. ರೇಡಿಯೋ ಪೋಗ್ರಾಮರ್. ಮನೆಯಲ್ಲಿ ಪಾರ್ಟಿ ಮಾಡುವುದು, ರೋಡ್ ಟ್ರಿಪ್ ಹೋಗುವುದು ಇಷ್ಟ. 36 ವರ್ಷ ವಯಸ್ಸು. Sunsign: Libra.

  ಜನ ಸಾಮಾನ್ಯರ ಆಯ್ಕೆಯ ಸ್ಪರ್ಧಿ #12 ರುಚಿಕಾ

  ಜನ ಸಾಮಾನ್ಯರ ಆಯ್ಕೆಯ 12ನೇ ಸ್ಪರ್ಧಿ ರುಚಿಕಾ ಸಿಂಗ್ ಅವರು ದೆಹಲಿ ಮೂಲದವರು. ನಟಿಯಾಗಿ ವೃತ್ತಿ ಕಂಡುಕೊಂಡಿದ್ದಾರೆ. ಆಧಾತ್ಮ ವಿಷಯಕ್ಕೆ ಸಂಬಂಧಿಸಿದ ಪುಸ್ತಕ ಓದುವುದು ಇವರ ಹವ್ಯಾಸ. ಪ್ರವಾಸ, ಪಾರ್ಟಿ, ಸಿನಿಮಾ ನೋಡುವ ಕ್ರೇಜ್ ಇದೆ. 39 ವರ್ಷ ವಯಸ್ಸು. Sunsign: Virgo

  ಜನ ಸಾಮಾನ್ಯರ ಆಯ್ಕೆಯ ಸ್ಪರ್ಧಿ #13 ಪ್ರಿಯಾಂಕಾ ಜಗ್ಗ

  ಜನ ಸಾಮಾನ್ಯರ ಆಯ್ಕೆಯ 13ನೇ ಸ್ಪರ್ಧಿ ಪ್ರಿಯಾಂಕಾ ಜಗ್ಗ ಅವರು ದೆಹಲಿ ಮೂಲದವರು. ಮಾರ್ಕೆಟಿಂಗ್ ವಿಭಾಗದಲ್ಲಿ ನೇಮಕಾತಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಡ್ಯಾನ್ಸ್, ಬಾಡ್ಮಿಂಟನ್, ಟ್ರೆಕ್ಕಿಂಗ್ ಇವರ ಹವ್ಯಾಸ.32 ವರ್ಷ ವಯಸ್ಸು. Sunsign: Sagittarius.

  English summary
  Bigg Boss 10, hosted by Salman Khan, will be aired on Colors TV channel. The show will be telecast at 10:30 pm from Monday to Friday, and at 9 pm on Saturday and Sunday. Here are Bigg Boss 10 : 13 Shortlisted non celebrity contestants

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more