For Quick Alerts
  ALLOW NOTIFICATIONS  
  For Daily Alerts

  ಟಿವಿಗೆ ಬಂತು 'ಕಾಂತಾರ', ಯಾವ ಚಾನೆಲ್‌ನಲ್ಲಿ ಪ್ರಸಾರ?

  |

  ಚಿತ್ರಮಂದಿರ ಹಾಗೂ ಒಟಿಟಿ ಎರಡರಲ್ಲೂ ಸೂಪರ್ ಹಿಟ್ ಆಗಿರುವ ಕನ್ನಡ ಸಿನಿಮಾ 'ಕಾಂತಾರ' ಇದೀಗ ಟಿವಿಗೆ ಬಂದಿದೆ.

  ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ 'ಕಾಂತಾರ' ಸಿನಿಮಾ ಚಿತ್ರಮಂದಿರಗಳಲ್ಲಿ ಭಾರಿ ಹಿಟ್ ಆಗಿತ್ತು. ಕೋಲ, ದೈವ, ಕರಾವಳಿ ಸಂಸ್ಕೃತಿಯನ್ನು ಆಧರಿಸಿ ನಿರ್ಮಿಸಿದ ಈ ಸಿನಿಮಾ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.

  ರಾಜ್ಯದ ಕೆಲವು ಚಿತ್ರಮಂದಿರಗಳಲ್ಲಿ ಈಗಲೂ ಪ್ರದರ್ಶನ ಕಾಣುತ್ತಿರುವ ಕಾಂತಾರ ಸಿನಿಮಾ ಇದೀಗ ಟಿವಿಯಲ್ಲಿ ಪ್ರಸಾರವಾಗಲಿದೆ. ಇನ್ನು ಕೆಲವೇ ದಿನಗಳಲ್ಲಿ 'ಕಾಂತಾರ' ಟಿವಿಯಲ್ಲಿ ಪ್ರಸಾರವಾಗಲಿದ್ದು, ಆ ಕುರಿತಾಗಿ ಪ್ರೋಮೋಗಳು ಪ್ರಸಾರವಾಗುತ್ತಿವೆ.

  'ಕಾಂತಾರ' ಸಿನಿಮಾವು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರಗೊಳ್ಳಲಿದೆ. ''ನಾಡಿಗೆ ನಾಡೇ ಭಕ್ತಿಯಿಂದ ಕೈಮುಗಿದು ಎದೆಗೊತ್ತಿಕೊಂಡ ಕನ್ನಡದ ಹೆಮ್ಮೆಯ ಕಳಶ "ಕಾಂತಾರ". ಅತೀ ಶೀಘ್ರದಲ್ಲಿ ನಿಮ್ಮ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ'' ಎಂದು ಸುವರ್ಣ ವಾಹಿನಿಯು ತನ್ನ ಫೇಸ್‌ಬುಕ್‌ ಪುಟದಲ್ಲಿ 'ಕಾಂತಾರ'ದ ವಿಡಿಯೋದೊಂದಿಗೆ ಪ್ರಕಟಿಸಿದೆ. ಆದರೆ ಸಿನಿಮಾ ಯಾವ ದಿನ ಪ್ರಸಾರವಾಗಲಿದೆ ಎಂಬ ಮಾಹಿತಿ ಹಂಚಿಕೊಂಡಿಲ್ಲ.

  ಸಂಕ್ರಾಂತಿ ಹಬ್ಬಕ್ಕೆ ಅಥವಾ ಅದರ ಮುಂದಿನ ಯಾವುದಾದರೂ ವಿಶೇಷ ಸಂದರ್ಭದಲ್ಲಿ 'ಕಾಂತಾರ' ಸಿನಿಮಾವನ್ನು ಸ್ಟಾರ್ ಸುವರ್ಣ ವಾಹಿನಿಯು ಪ್ರಸಾರ ಮಾಡಲಿದೆ.

  ಈ ಹಿಂದೆ ಚಿತ್ರಮಂದಿರಗಳಲ್ಲಿ ಅಬ್ಬರಿಸಿದ್ದ 'ಕೆಜಿಎಫ್', '777 ಚಾರ್ಲಿ', 'ವಿಕ್ರಾಂತ್ ರೋಣ' ಸಿನಿಮಾಗಳು ಟಿವಿಗಳಲ್ಲಿ ಪ್ರಸಾರವಾದಾಗ ದೊಡ್ಡ ಸಂಖ್ಯೆಯ ಟಿಆರ್‌ಪಿಯನ್ನು ಗಳಿಸಿದ್ದವು. ಈಗ 'ಕಾಂತಾರ' ಸಹ ಇದೇ ಹಾದಿ ಹಿಡಿಯಲಿದೆ ಎಂದು ಹೇಳಲಾಗುತ್ತಿದೆ.

  'ಕಾಂತಾರ' ಸಿನಿಮಾವು ಚಿತ್ರಮಂದಿರಗಳಲ್ಲಿ ಸುಮಾರು 400 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಅಮೆಜಾನ್ ಹಾಗೂ ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಈ ಸಿನಿಮಾ ಬಿಡುಗಡೆ ಆಗಿದ್ದು ಅಲ್ಲಿಯೂ ಒಳ್ಳೆಯ ಪ್ರದರ್ಶನ ಕಂಡಿದೆ. ಸಿನಿಮಾವನ್ನು ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿದ್ದು, ಹೊಂಬಾಳೆ ಪ್ರೊಡಕ್ಷನ್‌ನವರು ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ರಿಷಬ್ ಜೊತೆಗೆ ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಇನ್ನೂ ಮುಂತಾದವರು ನಟಿಸಿದ್ದಾರೆ.y

  English summary
  Rishab Shetty's super hit movie Kantara to world premier on Star Suvarna chanel soon. Movie is super hit in theater and OTT both.
  Wednesday, January 4, 2023, 9:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X