»   » ರಾಕಿಂಗ್ ಸ್ಟಾರ್ ಯಶ್ 'ವೀಕೆಂಡ್ ವಿತ್ ರಮೇಶ್'

ರಾಕಿಂಗ್ ಸ್ಟಾರ್ ಯಶ್ 'ವೀಕೆಂಡ್ ವಿತ್ ರಮೇಶ್'

Posted By:
Subscribe to Filmibeat Kannada

ಸಾಧನೆಯ ಹಾದಿಯಲ್ಲಿ ಸಾಗುತ್ತಿರುವ ಸಾಧಕರನ್ನು ಪರಿಚಯಿಸುತ್ತಿರುವ ವಿಭಿನ್ನ ಕಾರ್ಯಕ್ರ ನಟ ರಮೇಶ್ ಅರವಿಂದ್ ನಡೆಸಿಕೊಡುತ್ತಿರುವ 'ವೀಕೆಂಡ್ ವಿತ್ ರಮೇಶ್'. ಈ ಕಾರ್ಯಕ್ರಮ ಪ್ರತಿ ವಾರ ಜೀ ಕನ್ನಡ ವಾಹಿನಿಯಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಮೂಡಿಬರುತ್ತಿದೆ.

ಈ ಕಾರ್ಯಕ್ರಮಕ್ಕೆ ಈಗಾಗಲೆ ಎಲ್ಲೆಡೆಯಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಕಿರುತೆರೆ ವೀಕ್ಷಕರು ಪ್ರತಿ ವಾರ ನಿರೀಕ್ಷಿಸುವಂತೆ ಮಾಡುತ್ತಿರುವ ಕಾರ್ಯಕ್ರಮ ಇದಾಗಿದೆ. ಈಗಾಗಲೆ ಹಲವಾರು ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ತಮ್ಮ ಕಥೆಗಳನ್ನು ಹಂಚಿಕೊಂಡಿದ್ದಾರೆ. [ಜೀ ಕನ್ನಡ ಟಿವಿ ಶೋನಲ್ಲಿ ಕಣ್ಣೀರಿಟ್ಟ ಅರ್ಜುನ್ ಸರ್ಜಾ]

Rocking Star Yash

ಈ ವಾರ ಶನಿವಾರ (ಆ.23) ಮತ್ತು ಭಾನುವಾರ (ಆ.24) ರಾತ್ರಿ 9 ಗಂಟೆಗೆ ಜೀ ಕನ್ನಡ ವಾಹಿನಿ ವೀಕ್ಷಕರ ಮುಂದೆ ಬರುತ್ತಿರುವವರು ರಾಕಿಂಗ್ ಸ್ಟಾರ್ ಯಶ್. ಸಾಧಕರ ಸೀಟಿನಲ್ಲಿ ಕೂತು ತಮ್ಮ ಸಾಧನೆಯ ಹಾದಿಯನ್ನು ಒಮ್ಮೆ ಮೆಲುಕು ಹಾಕಲಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಈಗ ಬಲು ಬೇಡಿಕೆಯ ನಟ. ಹಾಗಾಗಿ ಅವರ ಬದುಕಿನ ಕಥೆಯನ್ನು ಕೇಳಲು ಎಲ್ಲರಿಗೂ ಆಸಕ್ತಿ ಇದ್ದೇ ಇರುತ್ತದೆ. ಸದ್ಯಕ್ಕೆ ಅವರು 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಬಾಕ್ಸ್ ಆಫೀಸಲ್ಲಿ ಭಾರಿ ಸದ್ದು ಮಾಡಿದ ಅವರ 'ಗಜಕೇಸರಿ' ಚಿತ್ರ ಸೆಂಚುರಿಗೆ ಹತ್ತಿರವಾಗಿದೆ.

ಸಾಧಕರ ಪ್ರತಿ ಹೆಜ್ಜೆ ಗುರುತು ಒಂದೊಂದು ಗೆಲುವಿನ ಕಥೆ ಹೇಳುತ್ತವೆ. ಅವರು ನಡೆದುಕೊಂಡು ಬಂದ ದಾರಿಯನ್ನು ಮೆಲುಕು ಹಾಕಿ, ಅವರ ಗೆಲುವನ್ನು ನಾವು ಸೆಲೆಬ್ರೇಟ್ ಮಾಡೋಣ ಎಂದು ರಮೇಶ್ ಹೇಳುತ್ತಿದ್ದರೆ ನೋಡುಗರಿಗೆ ಉತ್ಸಾಹ ಪುಟಿಯುತ್ತದೆ.

ಇಡೀ ವಾರ ಜೀವನದ ಜೊತೆ ವಾರ್ ಮಾಡಿ ಒದ್ದಾಡಿರ್ತೀರಿ, ಸಮಯ ಜೊತೆ ಸಮರ ಮಾಡಿ ಸುಸ್ತಾಗಿರ್ತೀರಿ, ನಿಮ್ಮ ವೀಕೆಂಡನ್ನು ರಿಲ್ಯಾಕ್ಸ್ ಮಾಡೋಣ ಅಂಥ, ರಿಫ್ರೆಶ್ ಮಾಡೋಣ ಅಂಥ, ಒಂದಷ್ಟು ನಗಿಸಲು, ಒಂದಿಷ್ಟು ಅಳಿಸಲು ನಾನು ರೆಡಿಯಿದ್ದೀನಿ ಎಂದು ಹೇಳುತ್ತಾ ನಿಮ್ಮ ಮುಂದೆ ಈ ವಾರ ಯಶ್ ರನ್ನು ಕರೆದುಕೊಂಡು ಬರುತ್ತಿದ್ದಾರೆ. (ಒನ್ಇಂಡಿಯಾ ಕನ್ನಡ)

English summary
Rocking Star Yash is slated on Ramesh Aravind's chat show Weekend With Ramesh, where he will be seen in a candid avatar and many of his close friends, family and acquaintances will talk about his private life in the show. 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada