»   » ಜೂ. 27ಕ್ಕೆ ರೂಪಾ ಅಯ್ಯರ್ 'ಚಂದ್ರ' ರಿಲೀಸ್

ಜೂ. 27ಕ್ಕೆ ರೂಪಾ ಅಯ್ಯರ್ 'ಚಂದ್ರ' ರಿಲೀಸ್

Posted By:
Subscribe to Filmibeat Kannada

ಮನೆಮಂದಿಯಲ್ಲಾ ಒಟ್ಟಾಗಿ ಕುಳಿತು ನೋಡುವ ಚಿತ್ರಗಳು ಈಗ ಅಪರೂಪಕ್ಕೆ ಎಂಬಂತೆ ಬರುತ್ತಿರುತ್ತವೆ. ಅಂತಹದ್ದೇ ಒಂದು ಅಪರೂಪದ ಪ್ರಯತ್ನ 'ಚಂದ್ರ' ಚಿತ್ರ.  ರೂಪಾ ಅಯ್ಯರ್ ನಿರ್ದೇಶನದ ಈ ಚಿತ್ರ ಇದೇ ಜೂನ್ 27ಕ್ಕೆ ಬಿಡುಗಡೆಯಾಗುತ್ತಿದೆ.

ಈ ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ಸಕುಟುಂಬ ಸಪರಿವಾರ ಸಮೇತ ನೋಡುವ ಚಿತ್ರವಾಗಿ 'ಯು' ಸರ್ಟಿಫಿಕೇಟ್ ನೀಡಿದೆ. ವಿಧಾನಸಭೆ ಚುನಾವಣೆ ಬಳಿಕ ತಮ್ಮ ಕಲಾಕೃತಿ 'ಚಂದ್ರ' ಚಿತ್ರವನ್ನು ಬಿಡುಗಡೆ ಮಾಡುತ್ತಿರುವುದಾಗಿ ರೂಪಾ ಅಯ್ಯರ್ ಅವರು ತಿಳಿಸಿದ್ದರು. ಅವರ ಯೋಜನೆಯಂತೆ ಚಿತ್ರ ಈಗ ಬಿಡುಗಡೆಯಾಗುತ್ತಿದೆ.

'ಚಂದ್ರ' ಚಿತ್ರದ ವಿಶೇಷಗಳು ಒಂದೆರಡಲ್ಲ. ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ ಮಾದಕ ಬೆಡಗಿ ಶ್ರೀಯಾ ಸರನ್. ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ನಿರ್ಮಿಸಿರುವ ದ್ವಿಭಾಷಾ ಚಿತ್ರವಿದು. 'A Royal Love Story' ಎಂಬುದು ಚಿತ್ರದ ಅಡಿಬರಹ.


ಇದೊಂದು ರಾಜಮನೆತನದ ರಾಜಕುಮಾರಿಯೊಬ್ಬಳ ಪ್ರೇಮ ಕಥೆ. "ಚಿತ್ರಕತೆ ಇಷ್ಟವಾಯಿತು. ಚಿತ್ರದಲ್ಲಿನ ನನ್ನ ಪಾತ್ರಕ್ಕೆ ಹಲವು ಆಯಾಮಗಳಿವೆ. ಹಾಗಾಗಿ ಈ ಚಿತ್ರವನ್ನು ಒಪ್ಪಿಕೊಂಡೆ" ಎಂದಿದ್ದರು ಶ್ರೀಯಾ ಸರನ್. ಅತಿ ಪ್ರಾಚೀನ ಯುದ್ಧಕಲೆ 'ಕಳರಿ ಪಯಟ್ಟು'ವನ್ನು ಚಿತ್ರದಲ್ಲಿ ಬಳಸಿಕೊಂಡಿರುವುದು ಚಂದ್ರ ಚಿತ್ರದ ಇನ್ನೊಂದು ವಿಶೇಷ.

ಈ ಕಲೆಯನ್ನು ಮೂರು ನಾಲ್ಕು ತಿಂಗಳ ಕಾಲ ಅಭ್ಯಾಸ ಮಾಡಿದ್ದಾರೆ ಚಿತ್ರದ ನಾಯಕ ನಟ ಲವ್ಲಿ ಸ್ಟಾರ್ ಪ್ರೇಮ್ ಕುಮಾರ್. ಮೈಸೂರು ಮೋಹನ್ ಪುತ್ರ ಶ್ರೀವತ್ಸ್ ಚಿತ್ರಕ್ಕೆ ಸಂಗೀತ ನೀಡಿದ್ದು ಪಿ.ಕೆ.ಎಚ್.ದಾಸ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

ಐತಿಹಾಸಿಕ ಪಾತ್ರಗಳಲಿ ನಟಿಸಬೇಕು ಎಂಬುದು ನನ್ನ ಬಹುದಿನದ ಕನಸಾಗಿತ್ತು. ಚಂದ್ರ ಚಿತ್ರದ ಮೂಲಕ ನನ್ನ ಕನಸು ನನಸಾಗಿದೆ. ಶ್ರೀಯಾ ಶರಣ್ ಅಭಿಮಾನಿಯಾದ ನಾನು, ಅವರೊಂದಿಗೆ ನಟಿಸಿರುವುದು ಸಂತಸ ತಂದಿದೆ ಎಂದಿದ್ದಾರೆ ಪ್ರೇಮ್. ಚಿತ್ರದ ಹಾಡುಗಳಿಗೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಚಂದ್ರ ಧ್ವನಿಸುರುಳಿ ವಿಮರ್ಶೆ ಓದಿ. (ಒನ್ಇಂಡಿಯಾ ಕನ್ನಡ)

English summary
Roopa Iyer's Kannada and Tamil bilingual film 'Chandra' slated for release on 27th June. The film got U certificate from regional censor board. The movie features Shriya Saran and Prem Kumar in the lead roles.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada