»   » ಕನ್ನಡದ ಮೇಲೆ ಎಸ್.ಪಿ.ಬಿ ಇಟ್ಟಿರುವ ಗೌರವಕ್ಕೆ ಇದೊಂದು ಘಟನೆ ಸಾಕ್ಷಿ

ಕನ್ನಡದ ಮೇಲೆ ಎಸ್.ಪಿ.ಬಿ ಇಟ್ಟಿರುವ ಗೌರವಕ್ಕೆ ಇದೊಂದು ಘಟನೆ ಸಾಕ್ಷಿ

Posted By:
Subscribe to Filmibeat Kannada

ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಭಾರತದ ಅನೇಕ ಭಾಷೆಗಳಲ್ಲಿ ಹಾಡು ಹಾಡಿದ್ದಾರೆ. ಕನ್ನಡದ ರೀತಿ ತಮಿಳು, ತೆಲುಗಿನಲ್ಲಿಯೂ ಬಹು ಬೇಡಿಕೆಯ ಗಾಯಕರಾಗಿದ್ದಾರೆ. 1 ಲಕ್ಷಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಎಸ್.ಪಿ.ಬಿ ಕನ್ನಡದ ಸಾವಿರಾರೂ ಹಾಡುಗಳಿಗೆ ಧ್ವನಿಯಾಗಿದ್ದಾರೆ.

ಆಂಧ್ರ ಪ್ರದೇಶದಲ್ಲಿ ಹುಟ್ಟಿದ್ದರು ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಕನ್ನಡದವರೇ ಎನ್ನುವ ಭಾವ ಎಲ್ಲರಿಗೂ ಮೂಡುತ್ತದೆ. ಎಸ್.ಪಿ.ಬಿ ಕರ್ನಾಟಕದವರೇ ಎಂಬ ಮಟ್ಟಿಗೆ ಎಲ್ಲರಿಗೂ ಹತ್ತಿರ ಆಗಿದ್ದಾರೆ. ಇನ್ನು ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಕನ್ನಡದ ಮೇಲೆ ಇರುವ ಗೌರವ ನೋಡಿದರೆ ನಿಜಕ್ಕೂ ಹೆಮ್ಮೆ ಆಗುತ್ತದೆ. ಇತ್ತೀಚಿಗಷ್ಟೆ ಜೀ ಕನ್ನಡ ವಾಹಿನಿಯ 'ಸರಿಗಮಪ' ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಸ್.ಪಿ.ಬಾಲಸುಬ್ರಹ್ಮಣ್ಯಂ ಕನ್ನಡದ ಬಗ್ಗೆ ಅದ್ಬುತ ಮಾತುಗಳನ್ನು ಹೇಳಿದ್ದಾರೆ. ಕರುನಾಡಿನ ಬಗ್ಗೆ ಎಸ್.ಪಿ.ಬಿ ಆಡಿದ ಮಾತುಗಳಲ್ಲಿ ಅದೆಷ್ಟು ಪ್ರೀತಿ ತುಂಬಿತ್ತು. ಮುಂದೆ ಓದಿ...

ಎಸ್.ಪಿ.ಬಿ ಕಾಲಿಗೆ ಬಿದ್ದ ಹಂಸಲೇಖ

ಸರಿಗಮಪ ಕಾರ್ಯಕ್ರಮಕ್ಕೆ ಬಂದ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರನ್ನು ಗೌರವಪೂರ್ವಕವಾಗಿ ಸ್ವಾಗತ ಮಾಡಲಾಯಿತು. ಹಂಸಲೇಖ ತಮ್ಮ ಗುರುಗಳಾದ ಎಸ್.ಪಿ.ಬಿ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.

ನಾನು ಕರ್ನಾಟಕಕ್ಕೆ ದತ್ತ ಪುತ್ರ

ಕಾರ್ಯಕ್ರಮದಲ್ಲಿ ಎಸ್.ಪಿ.ಬಿ ಕನ್ನಡದ ಬಗ್ಗೆ ಮಾತನಾಡಿದರು. ''ಐ ಆಮ್ ವೆರಿ ಹ್ಯಾಪಿ ಯಾಕಂದ್ರೆ, ಐ ಆಮ್ ಸಿಟಿಜನ್ ಆಫ್ ಕರ್ನಾಟಕ. ನಾನು ಯಾವಗಲೂ ಹೇಳುತ್ತೇನೆ ಕರ್ನಾಟಕಕ್ಕೆ ನಾನು ದತ್ತ ಪುತ್ರ. ನನಗೆ ಇಲ್ಲಿ ಸಿಕ್ಕಿರುವ ಪ್ರೀತಿ, ಪ್ರೇಮ, ಅಭಿಮಾನ, ವಾತ್ಸಲ್ಯ ಎಲ್ಲಿಯೂ ಸಿಕ್ಕಿಲ್ಲ.'' ಎಂದು ಹೇಳಿದರು.

ಕರ್ನಾಟಕ ಅಂದರೆ ಹೆಚ್ಚು ಪ್ರೀತಿ ಮತ್ತು ಆಕರ್ಷಣೆ

''ಇದು ಸಾರ್ವಜನಿಕ ಕಾರ್ಯಕ್ರಮ, ಈ ಕಾರ್ಯಕ್ರಮ ಎಲ್ಲ ಕಡೆ ಬರುತ್ತದೆ. ಎಲ್ಲರೂ ನೋಡುತ್ತಾರೆ. ಆದರೂ ನನಗೆ ಯಾವುದೇ ನಾಚಿಕೆ, ಭಯ ಇಲ್ಲ. ನನಗೆ ಎಲ್ಲ ಕಡೆ ತುಂಬ ಗೌರವ, ಮರ್ಯಾದೆ ಕೊಡುತ್ತಾರೆ. ಆದರೆ ಅದೆಲ್ಲವನ್ನು ಮೀರಿ ಕರ್ನಾಟಕದಲ್ಲಿ ನಾನು ಹೆಚ್ಚು ಪ್ರೀತಿ ಮತ್ತು ಆಕರ್ಷಣೆ ಹೊಂದಿದ್ದೇನೆ. ಇದು ಸತ್ಯ.'' - ಎಸ್.ಪಿ.ಬಾಲಸುಬ್ರಹ್ಮಣ್ಯಂ, ಗಾಯಕ

ಮುಂದಿನ ಜನ್ಮದಲ್ಲಿ ಕರ್ನಾಟಕದಲ್ಲಿ ಹುಟ್ಟುತ್ತೇನೆ

ಹುಟ್ಟಿದರೆ ಕರ್ನಾಟಕದಲ್ಲಿ ಹುಟ್ಟಬೇಕು ಎಂಬ ಹಂಸಲೇಖ ಅವರ ಸಾಲಿನಂತೆ ''ಮುಂದಿನ ಜನ್ಮದಲ್ಲಿ ನಾನು ಕರ್ನಾಟಕದಲ್ಲಿ ಹುಟ್ಟುತ್ತೇನೆ.'' ಎಂದು ಎಸ್.ಪಿ.ಬಿ ಹೇಳಿದರು. ಅವರ ಮಾತುಗಳನ್ನು ಕೇಳಿ ಇಡೀ ಕಾರ್ಯಕ್ರಮದಲ್ಲಿ ಇದ್ದ ಎಲ್ಲರೂ ಮುಖವಿಸ್ಮತರಾದರು.

ಜೀ ಕನ್ನಡದ ಸರಿಗಮಪ ವೇದಿಕೆಗೆ ಬಂದ ಎಸ್.ಪಿ.ಬಾಲಸುಬ್ರಮಣ್ಯಂ

English summary
Singer S P Balasubrahmanyam spoke about kannada in Zee Kannada channel's popular show 'Sarigamapa Season 14'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada