For Quick Alerts
  ALLOW NOTIFICATIONS  
  For Daily Alerts

  ಎರಡು ತಿಂಗಳು ಮುಂಚಿತವಾಗಿ ಶುರುವಾಗಲಿದೆ 'ಬಿಗ್ ಬಾಸ್' ಶೋ.!

  By Harshitha
  |
  ಶೀಘ್ರದಲ್ಲೇ ಶುರುವಾಗಲಿದೆ ಬಿಗ್ ಬಾಸ್..! | Filmibeat Kannada

  ಕಿರುತೆರೆ ಇತಿಹಾಸದಲ್ಲಿಯೇ ಅತಿ ಹೆಚ್ಚು ಜನಪ್ರಿಯತೆ ಪಡೆದಿರುವ ಕಾರ್ಯಕ್ರಮಗಳ ಪೈಕಿ 'ಬಿಗ್ ಬಾಸ್' ಕೂಡ ಒಂದು. 'ಬಿಗ್ ಬಾಸ್' ಫೇಕ್ ಶೋ... ಅದು ಸ್ಕ್ರಿಪ್ಟೆಡ್ ಅಂತ ಯಾರು ಎಷ್ಟೇ ಮೂಗು ಮುರಿದರೂ ಈ ಕಾರ್ಯಕ್ರಮದ ಟಿ.ಆರ್.ಪಿ ಮಾತ್ರ ಯಾವತ್ತೂ ಡೌನ್ ಆಗಿಲ್ಲ.

  ಹಿಂದಿ, ಕನ್ನಡ, ತೆಲುಗು, ಮರಾಠಿ ಸೇರಿದಂತೆ ಭಾರತದ ಪ್ರಮುಖ ಪ್ರಾದೇಶಿಕ ಭಾಷೆಗಳಲ್ಲಿ 'ಬಿಗ್ ಬಾಸ್' ಶೋ ಕ್ಲಿಕ್ ಆಗಿದೆ. ಪ್ರತಿ ವರ್ಷ ಹೊಸ ಕಾನ್ಸೆಪ್ಟ್ ನೊಂದಿಗೆ ಬರುವ 'ಬಿಗ್ ಬಾಸ್'ಗಾಗಿ ವೀಕ್ಷಕರು ಬಕಪಕ್ಷಿಗಳಂತೆ ಕಾಯುತ್ತಾರೆ.

  ಅದರಲ್ಲೂ ಹಿಂದಿ 'ಬಿಗ್ ಬಾಸ್'ಗೆ ಅಭಿಮಾನಿಗಳು ಹೆಚ್ಚು. ಈಗಾಗಲೇ ಹಿಂದಿಯಲ್ಲಿ 'ಬಿಗ್ ಬಾಸ್' ಕಾರ್ಯಕ್ರಮದ 11 ಆವೃತ್ತಿಗಳು ಪ್ರಸಾರ ಆಗಿದೆ. ಹಿಂದಿಯ 'ಬಿಗ್ ಬಾಸ್-11' ಅಂತೂ ಹಲವು ವಿವಾದಗಳಿಂದ ಭಾರಿ ಸೌಂಡ್ ಮಾಡಿತ್ತು. ಟಿ.ಆರ್.ಪಿಯಲ್ಲಿಯೂ ಟಾಪ್ ನಲ್ಲಿತ್ತು.

  'ಬಿಗ್ ಬಾಸ್-11' ಸೂಪರ್ ಡ್ಯೂಪರ್ ಹಿಟ್ ಆದ ಕಾರಣ, ಈ ಬಾರಿ ಎರಡು ತಿಂಗಳು ಮುಂಚಿತವಾಗಿಯೇ 'ಬಿಗ್ ಬಾಸ್-12'ಕ್ಕೆ ಚಾಲನೆ ನೀಡಲು ಕಾರ್ಯಕ್ರಮದ ಆಯೋಜಕರು ನಿರ್ಧರಿಸಿದ್ದಾರಂತೆ. ಹೆಚ್ಚಿನ ಮಾಹಿತಿ ಇಲ್ಲಿದೆ, ಓದಿರಿ...

  ಸೆಪ್ಟೆಂಬರ್ ನಲ್ಲಿ 'ಬಿಗ್ ಬಾಸ್-12' ಶುರು

  ಸೆಪ್ಟೆಂಬರ್ ನಲ್ಲಿ 'ಬಿಗ್ ಬಾಸ್-12' ಶುರು

  ವರದಿಗಳ ಪ್ರಕಾರ, 'ಬಿಗ್ ಬಾಸ್-12' ಕಾರ್ಯಕ್ರಮ ಸೆಪ್ಟೆಂಬರ್ 16, 2018 ರಿಂದ ಪ್ರಸಾರ ಆಗಲಿದೆ. ಹಾಗ್ನೋಡಿದ್ರೆ, ಸೆಪ್ಟೆಂಬರ್ ತಿಂಗಳಿನಿಂದ 'ಖತರೋಂಕೆ ಖಿಲಾಡಿ' ಶೋ ಪ್ರಸಾರ ಆಗಬೇಕಿತ್ತು. ಆದ್ರೆ, 'ಬಿಗ್ ಬಾಸ್-12' ನಿಂದಾಗಿ 'ಖತರೋಂಕೆ ಖಿಲಾಡಿ' ಕಾರ್ಯಕ್ರಮವನ್ನ ಜನವರಿಗೆ ಪೋಸ್ಟ್ ಪೋನ್ ಮಾಡಲಾಗಿದೆ. ಡಿಸೆಂಬರ್ ಅಂತ್ಯದ ವೇಳೆಗೆ 'ಬಿಗ್ ಬಾಸ್-12' ಮುಕ್ತಾಯವಾಗಲಿದೆ.

  ಹಿಂದಿ 'ಬಿಗ್ ಬಾಸ್'ನಲ್ಲಿ 'ವಯಸ್ಕರ' ಚಿತ್ರದ ನಟ.! ಒಂದು ಕಂಡಿಷನ್ಹಿಂದಿ 'ಬಿಗ್ ಬಾಸ್'ನಲ್ಲಿ 'ವಯಸ್ಕರ' ಚಿತ್ರದ ನಟ.! ಒಂದು ಕಂಡಿಷನ್

  ಸದ್ಯದಲ್ಲಿಯೇ ಪ್ರೋಮೋ ಶೂಟ್

  ಸದ್ಯದಲ್ಲಿಯೇ ಪ್ರೋಮೋ ಶೂಟ್

  ಮೂಲಗಳ ಪ್ರಕಾರ, ಆಗಸ್ಟ್ ಮೊದಲ ವಾರದಲ್ಲಿ 'ಬಿಗ್ ಬಾಸ್-12' ಪ್ರೋಮೋ ಶೂಟ್ ನಡೆಯಲಿದೆ. ಇದಕ್ಕಾಗಿ ಸಲ್ಮಾನ್ ಖಾನ್ ರಿಂದ ಕಾಲ್ ಶೀಟ್ ಕೂಡ ಪಡೆಯಲಾಗಿದೆ. ಮೆಹಬೂಬ್ ಸ್ಟುಡಿಯೋದಲ್ಲಿ ಪ್ರಮೋಷನಲ್ ವಿಡಿಯೋಗಳಿಗಾಗಿ ಸ್ಪೆಷಲ್ ಸೆಟ್ ಹಾಕಲಾಗುತ್ತಿದೆ.

  'ಬಿಗ್ ಬಾಸ್'ಗೆ ಹೋಗಿ ಬಂದವರದ್ದೆಲ್ಲಾ ಒಂದೊಂದು ಕಾಂಟ್ರವರ್ಸಿ.!'ಬಿಗ್ ಬಾಸ್'ಗೆ ಹೋಗಿ ಬಂದವರದ್ದೆಲ್ಲಾ ಒಂದೊಂದು ಕಾಂಟ್ರವರ್ಸಿ.!

  ಸೆಟ್ ವರ್ಕ್ ಆರಂಭ

  ಸೆಟ್ ವರ್ಕ್ ಆರಂಭ

  ಪ್ರತಿ ಆವೃತ್ತಿಗೆ 'ಬಿಗ್ ಬಾಸ್' ಮನೆಯ ಒಳಾಂಗಣ ವಿನ್ಯಾಸವನ್ನ ಬದಲಿಸಲಾಗುತ್ತದೆ. ಹಾಗೇ, 'ಬಿಗ್ ಬಾಸ್-12'ಗಾಗಿ ಮನೆಯ ಇಂಟೀರಿಯರ್ ಡಿಸೈನ್ ಚೇಂಜ್ ಮಾಡಲಾಗುತ್ತಿದೆ. ಲೋನಾವಾಲಾದಲ್ಲಿ ಇರುವ 'ಬಿಗ್ ಬಾಸ್' ಮನೆಯ ಸೆಟ್ ವರ್ಕ್ ಗೆ ಚಾಲನೆ ಕೊಡಲಾಗಿದೆ.

  ಈ ಬಾರಿ ಯಾರ್ಯಾರು ಇರಬಹುದು.?

  ಈ ಬಾರಿ ಯಾರ್ಯಾರು ಇರಬಹುದು.?

  'ಬಿಗ್ ಬಾಸ್-12' ಕಾರ್ಯಕ್ರಮದಲ್ಲಿ ಡ್ಯಾನಿ ಡಿ, ಮಹಿಕಾ ಶರ್ಮಾ, ಗುರ್ಮೀತ್ ಚೌಧರಿ ಭಾಗವಹಿಸಲಿದ್ದಾರಂತೆ ಎಂಬ ಅಂತೆ-ಕಂತೆ ಕೇಳಿಬರುತ್ತಿದೆ. ಇವರೆಲ್ಲ 'ಬಿಗ್ ಬಾಸ್' ಮನೆಯೊಳಗೆ ಲಾಕ್ ಆಗುವವರೆಗೂ ಗ್ಯಾರೆಂಟಿ ಇಲ್ಲ.

  English summary
  Salman Khan's Bigg Boss 12 is all set to start from September 2018.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X