»   » ಸಿಹಿಕಹಿ ಚಂದ್ರು ಮತ್ತು ಸಮೀರಾಚಾರ್ಯ ಮಧ್ಯೆ ಮಹಾಯುದ್ಧ ಆಗೋಯ್ತು.!

ಸಿಹಿಕಹಿ ಚಂದ್ರು ಮತ್ತು ಸಮೀರಾಚಾರ್ಯ ಮಧ್ಯೆ ಮಹಾಯುದ್ಧ ಆಗೋಯ್ತು.!

Posted By:
Subscribe to Filmibeat Kannada

ಬಿಗ್ ಮನೆಯಲ್ಲಿ ಈ ವಾರ ಎಲ್ಲ ಸದಸ್ಯರು ಬಹುತೇಕ ಖುಷಿ ಖುಷಿಯಿಂದಲೇ ಇದ್ದರು. ಆದ್ರೆ, ಶುಕ್ರವಾರ ಲಕ್ಷುರಿ ಬಜೆಟ್ ಟಾಸ್ಕ್ ಮುಗಿದ ಮೇಲೆ ಮನೆಯಲ್ಲೊಂದು ದೊಡ್ಡ ಜಗಳ ನಡೆದು ಹೋಯಿತು.

ಅಡುಗೆ ಮನೆಯಲ್ಲಿ ಸಿಹಿಕಹಿ ಚಂದ್ರು ಮತ್ತು ಸಮೀರಾಚಾರ್ಯ ಅವರ ಮಧ್ಯೆ ಈ ನಡೆಯಿತು. ಕೇವಲ 'ಜಗ್' (jug) ವಿಚಾರಕ್ಕೆ ಕೂಗಿ ರಂಪಾಟ ಮಾಡಿದ ಚಂದ್ರು ಮತ್ತು ಸಮೀರಾಚಾರ್ಯ ಅವರು ಒಂದು ಕ್ಷಣ ಮನೆಯವರಿಗೆಲ್ಲ ಶಾಕ್ ನೀಡಿದರು.

ಅಷ್ಟಕ್ಕೂ, ಕಿಚನ್ ಬಳಿ ನಡೆದಿದ್ದೇನು? ಸಮೀರಾಚಾರ್ಯ ಮತ್ತು ಸಿಹಿ ಕಹಿ ಚಂದ್ರು ಅವರು ಕಿತ್ತಾಡಿದ್ದೇಕೆ? ಎಂದು ತಿಳಿಯಲು ಮುಂದೆ ಓದಿ.....

'ಜಗ್' ತಗೊಂಡಿದ್ದಕ್ಕೆ ಜಗಳ

ಸಮೀರಾಚಾರ್ಯ ಅವರು ಜಗ್ ತಗೊಂಡು ಹೋಗಿದ್ದಕ್ಕೆ ಕೋಪಗೊಂಡ ಸಿಹಿ ಕಹಿ ಚಂದ್ರು ಸಮೀರ್ ಅವರಿಗೆ ತರಾಟೆಗೆ ತೆಗೆದುಕೊಂಡರು.

'ದಿವಾಕರ್'ಗೆ ಅವಾರ್ಡ್, ಜೆ.ಕೆಗೆ 'ಕಳಪೆ' ಬೋರ್ಡ್.!

'ಜಗ್' ತಗೊಂಡು ಬಂದು ಕೊಡಿ

''ಇಲ್ಲಿ ಹನ್ನೊಂದು ಜನ ಇದ್ದೀವಿ. ಅಲ್ಲಿ ನೀವೊಬ್ಬರೇ ಇರೋದು. ನೀವು ತಗೊಂಡು ಹೋಗ್ಬಿಟ್ರೆ, ನಾವ್ ಏನ್ ಮಾಡೋದು. ನೀರು ಕುಡಿದ ಮೇಲೆ ವಾಪಸ್ ತಗೊಂಡು ಬಂದು ಕೊಡಿ'' ಎಂದು ಚಂದ್ರು ಅವರು ರೇಗಾಡಿದರು.

ಸೀಕ್ರೆಟ್ ಟಾಸ್ಕ್ ಸೋತ ಜೆ.ಕೆಯಿಂದ ಮನೆಯವರಿಗೆ ದೊಡ್ಡ ನಷ್ಟ.!

ಮಾತಿಗೆ ಮಾತು ಹೆಚ್ಚಾಯಿತು

ಸಿಹಿ ಕಹಿ ಚಂದ್ರು ಅವರು ಮಾತು ಹೆಚ್ಚಾಗುತ್ತಿದ್ದಂತೆ ಸಮೀರ್ ಅವರು ಕೂಡ ಮಾತಿಗೆ ಮಾತು ಬೆಳಿಸಿದರು. ''ಅದನ್ನ ಕೇಳೋಕೆ ನೀವು ಯಾರು? ನನ್ನಿಷ್ಟ'' ಎಂದು ತಿರುಗೇಟು ನೀಡಿದರು.

ಮನೆಯವರೆಲ್ಲಾ ಬಂದರು

ಚಂದ್ರು ಹಾಗೂ ಸಮೀರಾಚಾರ್ಯ ಅವರ ಜಗಳ ನೋಡಿದ ಇತರೆ ಸದಸ್ಯರು ಎಲ್ಲರೂ ಅಡುಗೆ ಮನೆ ಹತ್ತಿರ ಓಡಿ ಬಂದು, ಇಬ್ಬರನ್ನ ಸಮಾಧಾನ ಪಡಿಸಿದರು.

ವೀಕ್ಷಕರು ಹೀಗೆ ಹೇಳ್ತಾವ್ರೆ, 'ಬಿಗ್ ಬಾಸ್' ಒಸಿ ಕೇಳಿಸಿಕೊಳ್ಳಿ...

ಇವರಿಬ್ಬರು ಮಾಡಿದ್ದು ತಮಾಷೆಗೆ

ಇಷ್ಟೆಲ್ಲಾ ಆದ ಮೇಲೆ ಸಮೀರಾಚಾರ್ಯ ಮತ್ತು ಚಂದ್ರು ಇಬ್ಬರು ಮೊದಲೇ ಮಾತನಾಡಿಕೊಂಡು ಜಗಳ ಮಾಡಿದ್ದು, ಇವರಿಬ್ಬರು ಮಾಡಿದ್ದು ತಮಾಷೆಗೆಂದು ಗೊತ್ತಾಯಿತು.

English summary
Sameer Acharya and Sihi Kahi Chandru enact a fake argument to trick the housemates.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada