»   » ವಿಡಿಯೋ : 'ಚಾಕಲೇಟ್ ಗರ್ಲ್' ಆದ ಕಿರಿಕ್ ಹುಡುಗಿ ಸಂಯುಕ್ತ ಹೆಗ್ಡೆ

ವಿಡಿಯೋ : 'ಚಾಕಲೇಟ್ ಗರ್ಲ್' ಆದ ಕಿರಿಕ್ ಹುಡುಗಿ ಸಂಯುಕ್ತ ಹೆಗ್ಡೆ

Posted By:
Subscribe to Filmibeat Kannada

ಇಷ್ಟು ದಿನ ಕಿರಿಕ್ ಹುಡುಗಿ ಆಗಿದ್ದ ನಟಿ ಸಂಯುಕ್ತ ಹೆಗ್ಡೆ ಈಗ 'ಚಾಕಲೇಟ್ ಗರ್ಲ್' ಆಗಿದ್ದಾರೆ. 'ಜೀ ಕನ್ನಡ' ವಾಹಿನಿಯ 'ಜೀ ಕನ್ನಡ ಕುಟುಂಬ ಅವಾರ್ಡ್' ಕಾರ್ಯಕ್ರಮದಲ್ಲಿ 'ಚಾಕಲೇಟ್ ಗರ್ಲ್' ಆಗಿ ಸಂಯುಕ್ತ ಹೆಜ್ಜೆ ಹಾಕಿದ್ದಾರೆ.

ಕಾಲಿವುಡ್ ಬಳಿಕ ಈಗ ಟಾಲಿವುಡ್ ಗೆ ಕಾಲಿಟ್ಟ ಕಿರಿಕ್ ಹುಡುಗಿ ಸಂಯುಕ್ತ ಹೆಗ್ಡೆ

ಸಂಯುಕ್ತ ಹೆಗ್ಡೆ ಸಿಕ್ಕಾಪಟ್ಟೆ ಒಳ್ಳೆಯ ಡ್ಯಾನ್ಸರ್. ಈಗಾಗಲೇ ಅನೇಕ ಕಾರ್ಯಕ್ರಮದಲ್ಲಿ ಸಂಯುಕ್ತ ಅದನ್ನು ತೋರಿಸಿದ್ದಾರೆ. ಅದೇ ರೀತಿ ಇದೀಗ 'ಜೀ ಕನ್ನಡ ಕುಟುಂಬ ಅವಾರ್ಡ್ಸ್' ಕಾರ್ಯಕ್ರಮದಲ್ಲಿಯೂ ಸಂಯುಕ್ತ ಸೊಂಟ ಬಳುಕಿಸಿದ್ದಾರೆ.

Samyuktha Hegde dance performance in Zee kannada Kutumbam Awards.

'ಪಕ್ಕಾ ಚಾಕಲೇಟ್ ಗರ್ಲ್..' ಹಾಗೂ 'ಕಿರಿಕ್ ಪಾರ್ಟಿ' ಚಿತ್ರದ 'ಬೆಳಗೆದ್ದು...' ಹಾಡಿಗೆ ಸಂಯುಕ್ತ ಡ್ಯಾನ್ಸ್ ಮಾಡಿದ್ದಾರೆ. ಸದ್ಯ ಸಂಯುಕ್ತ ಡ್ಯಾನ್ಸ್ ಮಾಡಿರುವ ವಿಡಿಯೋ ಜಲಕ್ ಅನ್ನು 'ಜೀ ಕನ್ನಡ' ವಾಹಿನಿ ಪೇಸ್ ಬುಕ್ ನಲ್ಲಿ ಹಂಚಿಕೊಂಡಿದೆ. ಅಂದಹಾಗೆ, 'ಜೀ ಕನ್ನಡ ಕುಟುಂಬ ಅವಾರ್ಡ್ಸ್' ಕಾರ್ಯಕ್ರಮ ಇದೇ ಶನಿವಾರ ಹಾಗೂ ಭಾನುವಾರ ರಾತ್ರಿ 7.30ಕ್ಕೆ ಪ್ರಸಾರ ಆಗಲಿದೆ.

English summary
Watch Video : Actress 'Samyuktha Hegde' dance performance in 'Zee Kannada Kutumbam Awards 2017'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada